International Hundreds without dropped Catches : ಒಂದೇ ಒಂದು “ಲೈಫ್” ಪಡೆಯದೆ ವಿರಾಟ್ ಕೊಹ್ಲಿ ಬಾರಿಸಿದ್ದಾರೆ 55 ಸೆಂಚುರಿ, ಸಚಿನ್ ಬಾರಿಸಿದ ಶತಕ ಎಷ್ಟು?

ಗುವಾಹಟಿ : ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 73ನೇ ಶತಕ ಬಾರಿಸಿ ಅಬ್ಬರಿಸಿದ ವಿಚಾರ ನಿಮ್ಗೆ ಗೊತ್ತೇ ಇದೆ. ಅಸ್ಸಾಂನ ಗುವಾಹಟಿಯ ಬರ್ಸಪರದಲ್ಲಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ (India Vs Sri Lanka ODI) ವಿರಾಟ್ ಕೊಹ್ಲಿ ಭರ್ಜರಿ ಶತಕ (International Hundreds without dropped Catches)ಸಿಡಿಸಿದ್ದರು. 87 ಎಸೆತಗಳಲ್ಲಿ 113 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ, 2023ನೇ ವರ್ಷದ ಅಭಿಯಾನವನ್ನು ಶತಕದೊಂದಿದಗೆ ಆರಂಭಿಸಿದ್ದರು. ಇದು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕಿಂಗ್ ಕೊಹ್ಲಿ ಸಿಡಿಸಿದ 45ನೇ ಶತಕ.

ಲಂಕಾ ವಿರುದ್ಧ ಶತಕ ಬಾರಿಸುವುದರೊಂದಿಗೆ ಟೆಸ್ಟ್, ಏಕದಿನ ಮತ್ತು ಟಿ20 ಸೇರಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಬಾರಿಸಿರುವ ಶತಕಗಳ ಸಂಖ್ಯೆ 73ಕ್ಕೇರಿದೆ. ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ ಆ 73 ಶತಕಗಳಲ್ಲಿ 55 ಶತಕಗಳನ್ನು ವಿರಾಟ್ ಒಂದೇ ಒಂದು ಜೀವದಾನ ಪಡೆಯದೆ ಬಾರಿಸಿದ್ದಾರೆ. ಅಂದ್ರೆ ಯಾವುದೇ “ಕ್ಯಾಚ್” ಅವಕಾಶ ನೀಡದೆ 55 ಶತಕಗಳನ್ನು ಸಿಡಿಸಿದ್ದಾರೆ. ಉಳಿದ 18 ಶತಕಗಳನ್ನು ಬಾರಿಸಿದ ವೇಳೆ ವಿರಾಟ್ ಕೊಹ್ಲಿ ಕನಿಷ್ಠ ಒಂದಾದರೂ ಜೀವದಾನ ಪಡೆದಿದ್ದಾರೆ.


ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಬಾರಿಸಿರುವ 100 ಅಂತರಾಷ್ಟ್ರೀಯ ಶತಕಗಳ ಪೈಕಿ ಕ್ಯಾಚ್ ಡ್ರಾಪ್ ಆಗದೆ ಬಂದಿರುವ ಶತಕಗಳು 44. ಉಳಿದ 56 ಶತಕಗಳನ್ನು ಬಾರಿಸಿದ ವೇಳೆ ಸಚಿನ್ ಕನಿಷ್ಠ ಒಂದು ಜೀವದಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ 71 ಅಂತರಾಷ್ಟ್ರೀಯ ಶತಕಗಳಲ್ಲಿ 49 ಶತಕಗಳನ್ನು ಜೀವದಾನವಿಲ್ಲದೆ ಗಳಿಸಿದ್ದಾರೆ.

ಕ್ಯಾಚ್ ಡ್ರಾಪ್ ಆಗದೆ ಅತೀ ಹೆಚ್ಚು ಅಂತರಾಷ್ಟ್ರೀಯ ಶತಕಗಳು (International Hundreds without dropped Catches) :

  • ವಿರಾಟ್ ಕೊಹ್ಲಿ (ಭಾರತ): 55 ಶತಕ
  • ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 49 ಶತಕ
  • ಸಚಿನ್ ತೆಂಡೂಲ್ಕರ್ (ಭಾರತ): 44 ಶತಕ
  • ಕುಮಾರ ಸಂಗಕ್ಕಾರ (ಶ್ರೀಲಂಕಾ): 40 ಶತಕ
  • ಹಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ): 39 ಶತಕ
  • ಬ್ರಯಾನ್ ಲಾರಾ (ವೆಸ್ಟ್ ಇಂಡೀಸ್): 36 ಶತಕ
  • ಮಹೇಲ ಜಯವರ್ಧನೆ (ಶ್ರೀಲಂಕಾ): 33 ಶತಕ
  • ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ): 29 ಶತಕ

ವಿರಾಟ್ ಕೊಹ್ಲಿ ಇನ್ನು ಐದು ಶತಕಗಳನ್ನು ಬಾರಿಸಿದರೆ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (Most centuries in ODI cricket) ದಾಖಲಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Virat Kohli vs Sachin Tendulkar) ಅವರ ವಿಶ್ವದಾಖಲೆಯನ್ನು ಪುಡಿಗಟ್ಟಲಿದ್ದಾರೆ. ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಿಂದ 49 ಶತಕಗಳನ್ನು ಬಾರಿಸಿದ್ರೆ, ವಿರಾಟ್ ಕೊಹ್ಲಿ 266 ಏಕದಿನ ಪಂದ್ಯಗಳಿಂದ 45 ಶತಕಗಳನ್ನು ಸಿಡಿಸಿದ್ದಾರೆ.

ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (Most centuries in ODI cricket)(ಟಾಪ್-5) :
ಆಟಗಾರ ಇನ್ನಿಂಗ್ಸ್ ಶತಕ :

  1. ಸಚಿನ್ ತೆಂಡೂಲ್ಕರ್ (ಭಾರತ) 452 49
  2. ವಿರಾಟ್ ಕೊಹ್ಲಿ (ಭಾರತ) 257 45
  3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 365 30
  4. ರೋಹಿತ್ ಶರ್ಮಾ (ಭಾರತ) 229 29
  5. ಸನತ್ ಜಯಸೂರ್ಯ (ಶ್ರೀಲಂಕಾ) 433 28

ಇದನ್ನೂ ಓದಿ : Rohit Sharma Dasun Shanaka : ರನೌಟ್ ಅಪೀಲ್ ವಾಪಸ್ ಪಡೆದು ಶನಕ ಶತಕ ಬಾರಿಸಲು ನೆರವಾದ ಹೃದಯವಂತ ಹಿಟ್‌ಮ್ಯಾನ್

ಇದನ್ನೂ ಓದಿ : Virat Kohli Vs Gautam Gambhir : ಹೊಟ್ಟೆಕಿಚ್ಚಿಗೆ ಮದ್ದೇ ಇಲ್ಲ; ವಿರಾಟ್ ಕೊಹ್ಲಿ ಶತಕ ಬಾರಿಸಿದ ಬೆನ್ನಲ್ಲೇ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ ಗಂಭೀರ್ ಹೇಳಿದ್ದೇನು ಗೊತ್ತಾ?

ಇದನ್ನೂ ಓದಿ : Virat Kohli century: 2023ರಲ್ಲಿ ಶುರು ಕಿಂಗ್ ಕೊಹ್ಲಿಯ ಶತಕ ಬೇಟೆ, ಸಚಿನ್ ದಾಖಲೆ ಮುರಿಯಲು ಇನ್ನು ಐದೇ ಹೆಜ್ಜೆ..!

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (Most centuries in international cricket) (ಟಾಪ್-5)
ಆಟಗಾರ ಇನ್ನಿಂಗ್ಸ್ ಶತಕ :

  1. ಸಚಿನ್ ತೆಂಡೂಲ್ಕರ್ (ಭಾರತ) 782 100
  2. ವಿರಾಟ್ ಕೊಹ್ಲಿ (ಭಾರತ) 541 73
  3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 668 71
  4. ಕುಮಾರ ಸಂಗಕ್ಕಾರ (ಶ್ರೀಲಂಕಾ) 666 63
  5. ಜಾಕ್ ಕಾಲೀಸ್ (ದಕ್ಷಿಣ ಆಫ್ರಿಕಾ) 617 62

International Hundreds without dropped Catches : Virat Kohli scored 55 centuries without getting a single “life”, how many centuries did Sachin score?

Comments are closed.