ವರಮಹಾಲಕ್ಷ್ಮೀ, ದೀಪಾವಳಿ, ಗಣೇಶ ಹಬ್ಬ, ರಕ್ಷಾ ಬಂಧನ ಹೀಗೆ ಸಂಭ್ರಮ ಯಾವುದೇ ಇರಲಿ, ಅದನ್ನು ಸ್ಟಾರ್ ಗಳು ಕೂಡ ಗ್ರ್ಯಾಂಡ್ ಆಗಿ ಸೆಲಿಬ್ರೆಟ್ ಮಾಡ್ತಾರೆ. ಅಷ್ಟೇ ಅಲ್ಲ ಸೆಲಿಬ್ರೇಶನ್ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋದಿಕ್ಕೂ ಮರೆಯೋದಿಲ್ಲ. ಮೊನ್ನೆ ಮೊನ್ನೆ ವರಮಹಾಲಕ್ಷ್ಮೀ ಪೋಟೋ ಶೇರ್ ಮಾಡಿದ್ದ ಕೆಜಿಎಫ್ ನಟ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಈಗ ಕ್ಯೂಟ್ ಮಕ್ಕಳ ರಾಖಿ ಹಬ್ಬದ ಪೋಟೋ ಹಂಚಿಕೊಂಡಿದ್ದಾರೆ.
ನಟಿ ರಾಧಿಕಾ ಪಂಡಿತ್ ಈಗ ಫುಲ್ ಟೈಂ ಮಮ್ಮಿಯಾಗಿದ್ದಾರೆ. ನಟನೆ ಬಿಟ್ಟು ಮದರ ವುಡ್ ಎಂಜಾಯ್ ಮಾಡ್ತಿರೋ ನಟಿ ರಾಧಿಕಾ ಪಂಡಿತ್ (Radhika Pandit) ಸಣ್ಣ ಪುಟ್ಟ ಖುಷಿಗಳನ್ನು ಎಂಜಾಯ್ ಮಾಡ್ತಾರೆ ಮಾತ್ರವಲ್ಲ ತಮ್ಮ ಮನೆಯ ಖುಷಿಯ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲು ಮರೆಯೋದಿಲ್ಲ.

ಮೊನ್ನೆ ಅದ್ದೂರಿಯಾಗಿ ನಡೆದ ವರಮಹಾಲಕ್ಷ್ಮೀ ಹಬ್ಬದ ಪೋಟೋಗಳನ್ನು ಶೇರ್ ಮಾಡಿದ್ದ ರಾಧಿಕಾ ಈಗ ತಮ್ಮಿಬ್ಬರು ಮಕ್ಕಳು ಖುಷಿಯಿಂದ ರಕ್ಷಾಬಂಧನ ಆಚರಿಸಿದ ಪೋಟೋಗಳನ್ನು ವಿಡಿಯೋ ರೂಪದಲ್ಲಿ ಶೇರ್ ಮಾಡಿದ್ದಾರೆ.ಎಲ್ಲರಿಗೂ ಗೊತ್ತಿರುವಂತೆ ನಟಿ ರಾಧಿಕಾ ಹಾಗೂ ಯಶ್ ದಂಪತಿಗೆ ಕೇವಲ ಒಂದು ವರ್ಷದ ಅಂತರದಲ್ಲಿ ಜನಿಸಿದ ಇಬ್ಬರು ಮಕ್ಕಳಿದ್ದಾರೆ.
ದೊಡ್ಡ ಮಗಳು ಆಯ್ರಾ ಹಾಗೂ ಚಿಕ್ಕಮಗ ಯಥರ್ವ್ ಜೊತೆ ರಾಕಿಂಗ್ ಸ್ಟಾರ್ ರಾಧಿಕಾ ಆಗಾಗ ವೀಡಿಯೋ ಶೇರ್ ಮಾಡುತ್ತಲೇ ಇರ್ತಾರೆ. ಈಗ ಅಕ್ಕ ಆಯ್ರಾ (Ayra Yash) ತಮ್ಮ ಯಥರ್ವ್ (Yatharv Yash) ಗೆ ಆರತಿ ಬೆಳಗಿ , ಸಿಹಿ ತನ್ನಿಸಿ ರಾಖಿ ಕಟ್ಟಿದ್ದಾಳೆ. ಸೇಮ್ ಡ್ರೆಸ್ ನಲ್ಲಿ ರಾಕಿ ಬಾಯ್ ಇಬ್ಬರೂ ಮಕ್ಕಳು ಸಖತ್ ಮಿಂಚಿದ್ದಾರೆ. ಇದನ್ನೂ ಓದಿ : ವಿಶೇಷ ರಕ್ಷಾಬಂಧನ ಆಚರಿಸಿದ ಪಾರು ನಟಿ ಮೋಕ್ಷಿತಾ ಪೈ : ಪಾರು ಸಂಭ್ರಮಕ್ಕೆ ಅಭಿಮಾನಿಗಳ ಮೆಚ್ಚುಗೆ

ರಾಖಿ ಹಬ್ಬದ ವಿಡಿಯೋ ಶೇರ್ ಮಾಡಿದ ರಾಧಿಕಾ, ಒಮ್ಮೊಮ್ಮೆ ವಿರೋಧಿಯಾದರೇ, ಮತ್ತೊಮ್ಮೆ ಪರ, ಒಮ್ಮೊಮ್ಮೆ ತಮ್ಮನನ್ನು ಪ್ರೊಟೆಕ್ಟ್ ಮಾಡುವ ಅಕ್ಕನಾಗಿ ಒಟ್ಟಿನಲ್ಲಿ ಜೊತೆಯಾಗಿರುವ ಮಕ್ಕಳ ರಕ್ಷಾ ಬಂಧನದ ಸುಂದರ ಕ್ಷಣಗಳು ಎಂಬರ್ಥದಲ್ಲಿ ಈ ಪೋಸ್ಟ್ ಗೆ ಟೈಟಲ್ ನೀಡಿದ್ದಾರೆ.
ರಕ್ಷಾಬಂಧನ ಸಹೋದರ-ಸಹೋದರಿಯರ ಸುಂದರ ಬಾಂಧವ್ಯವನ್ನು ಸಾರುವ ಹಬ್ಬವಾಗಿದ್ದು, ಸಹೋದರಿಯರು ಸಹೋದರರಿಗೆ ರಕ್ಷೆ ಕಟ್ಟಿ ರಕ್ಷಣೆ ಕೋರುವುದು ವಾಡಿಕೆ. ಅಂದಹಾಗೇ ನಟಿ ರಾಧಿಕಾ ಪಂಡಿತ್ ಗೂ ಕಿರಿಯ ಸಹೋದರನಿದ್ದು, ಗೌರವ್ ಸಾರಂಗ್ ಎಂಬ ಹೆಸರಿನ ಸಹೋದರ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ತಮ್ಮ ನನ್ನು ತುಂಬ ಪ್ರೀತಿಸುವ ರಾಧಿಕಾ ಪಂಡಿತ್ ಪ್ರೀತಿಯಿಂದ ಆತನಿಗೆ ಗೋಲು ಎಂದು ಕರೆಯುತ್ತಾರೆ.
Rakshabandhan of children’s celebration at Yash’s house: Radhika Pandit shares special video