Ramya Come Back : ರಮ್ಯ ಕಮ್ ಬ್ಯಾಕ್ ಡೌಟ್ : ಇನ್ ಸ್ಟಾಗ್ರಾಂ ನಲ್ಲಿ ಹೊರಬಿತ್ತು ಕಹಿಸತ್ಯ

Ramya Come Back : ಸ್ಯಾಂಡಲ್ ವುಡ್ ಗೆ ನೊರೆಂಟು ನಟಿಮಣಿಯರು ಬಂದು ಹೋದರೂ ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ ಸ್ಥಾನ ತುಂಬೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಹೀಗಾಗಿ ಇಂದಿಗೂ ಚಂದನವನದ ನಂಬರ್ ಒನ್ ಹೀರೋಯಿನ್ ಯಾರು ಅಂದ್ರೇ ರಮ್ಯ ಅನ್ನೋದು ಸಿಗೋ ಉತ್ತರ.‌ಇಂತಿಪ್ಪ ನಟಿ ರಮ್ಯ , ವರ್ಷಗಳ ಬ್ರೇಕ್ ಬಳಿಕ ಇನ್ನೇನು ಕೆಲ ದಿನದಲ್ಲೇ ಮತ್ತೊಮ್ಮೆ ತೆರೆಗೆ ಬರ್ತಾರೆ ಎಂಬುದು ಅಭಿಮಾನಿಗಳ ಪಾಲಿಗೆ ಸಂಭ್ರಮದ ಸಂಗತಿಯಾಗಿತ್ತು. ಆದರೆ ಈಗ ಈ ಖುಷಿಗೆ ನಟಿ ರಮ್ಯ ಶಾಕ್ ನೀಡಿದಂತಿದ್ದು, ರಮ್ಯ ಹೊಸ ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

ಕಳೆದ ಆರು ತಿಂಗಳಿನಿಂದ ನಟಿ ರಮ್ಯ ಮತ್ತೆ ನಟನೆಗೆ ಮರಳುತ್ತಾರೆ.‌ಬಣ್ಣ ಹಚ್ಚುತ್ತಾರೆ ಎಂಬ ಸಂಗತಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ನಟಿ ರಮ್ಯ ಮಾತ್ರ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾ ಕ್ಷೇತ್ರಕ್ಕೆ ಮರಳೋದಾಗಿ ಘೋಷಿಸಿದ ನಟಿ ರಮ್ಯ ತಮ್ಮದೇ ನಿರ್ಮಾಣ ಸಂಸ್ಥೆಯ ಆ್ಯಪಲ್ ಬಾಕ್ಸ್ ಮೂಲಕ ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಟೈಟಲ್ ಕೂಡ ಘೋಷಿಸಿದ್ದರು.

ಸದ್ಯದಲ್ಲೇ ಶೂಟಿಂಗ್ ಆರಂಭಿಸೋದಾಗಿಯೂ ನಟಿ ರಮ್ಯ ಘೋಷಿಸಿದ್ದರು. ಆದರೆ ಈಗ ದಿಢೀರ್ ರಮ್ಯ ಸೋಷಿಯಲ್ ಮೀಡಿಯಾದಲ್ಲಿ ಹಾಕಿರೋ ಪೋಸ್ಟ್ ಅಭಿಮಾನಿಗಳಿಗೆ ಶಾಕ್ ಹಾಗೂ ನಿರಾಸೆ ಎರಡನ್ನು ನೀಡಿದೆ. ಒಂದು ಮೊಟ್ಟೆಯ ಕತೆ ಖ್ಯಾತಿಯ ರಾಜ್ ಬಿ ಶೆಟ್ಟಿ ಜೊತೆ ಸಿನಿಮಾದಲ್ಲಿ ತೆರೆಗೆ ಬರೋದಾಗಿ ಘೋಷಿಸಿದ್ದ ರಮ್ಯ ಈಗ ಕೇವಲ ಸಿನಿಮಾದಲ್ಲಿ ಪ್ರೊಡ್ಯೂಸರ್ ಆಗಿ ಉಳಿಯೋ ನಿರ್ಣಯ ಕೈಗೊಂಡಿದ್ದಾರಂತೆ. ಇದಕ್ಕೆ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಸಾಕ್ಷಿ ಒದಗಿಸಿದೆ.

ಆ್ಯಪಲ್ ಬಾಕ್ಸ್ ಅಧಿಕೃತ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ನಟಿ ರಮ್ಯ ಈ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಸಿನಿಮಾ ನಿರ್ಮಾಣ ಮಾಡ್ತಿರೋದಾಗಿ ಹೇಳಿರೋ ರಮ್ಯ, ಪ್ರಮುಖ ಪಾತ್ರದಲ್ಲಿ ಸಿರಿ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಆ ಮೂಲಕ ತಮ್ಮ ಸಿನಿಮಾದಲ್ಲಿ ಹೊಸ ಪ್ರತಿಭೆಗೆ ಅವಕಾಶ ನೀಡೋದಾಗಿ ರಮ್ಯ ನಿರ್ಧರಿಸಿದಂತಿದೆ. ಆದರೆ ರಮ್ಯ ಈ ಪೋಸ್ಟ್ ರಮ್ಯ ಸಿನಿಮಾ ನಟನೆಯಿಂದಲೇ ದೂರ ಸರಿದ್ರಾ? ಅಥವಾ ಪ್ರಮುಖ ಪಾತ್ರದಲ್ಲಿ ಸಿರಿ ನಟಿಸಿ ರಮ್ಯ ಗೆಸ್ಟ್ ರೋಲ್ ಮೂಲಕ ವಿಭಿನ್ನ ಪಾತ್ರದಲ್ಲಿ ನಟಿಸುತ್ತಾರಾ ಎಂಬ ಕುತೂಹಲ ಮೂಡಿಸಿದೆ.

ಇನ್ನೇನು ಕೆಲವೇ ದಿನದಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ರಾಜ್ ಬಿ ಶೆಟ್ಟಿ ತೀರ್ಮಾನದಂತೆ ಸಿನಿಮಾ ಒಂದೇ ಸ್ಟ್ರೆಚ್ ಶೂಟಿಂಗ್ ನಲ್ಲಿ ಕೊನೆಗೊಳ್ಳಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : Rishab Shetty : “ಗೀತಾ ಆರ್ಟ್ಸ್” ಬ್ಯಾನರ್ ನಲ್ಲಿ ರಿಷಬ್ ಶೆಟ್ಟಿ ಸಿನಿಮಾ

ಇದನ್ನೂ ಓದಿ : Tax exemption Gandhadagudi : ಅಪ್ಪು ಅಭಿಮಾನಿಗಳಿಗೆ ಸರ್ಕಾರದ ಗಿಫ್ಟ್ : ಗಂಧದಗುಡಿಗೆ ತೆರಿಗೆ ವಿನಾಯ್ತಿ

Ramya Come Back Doubt A story that surfaced on Instagram

Comments are closed.