2nd PU EXAM DATE: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: (2nd PU Exam date) 2023ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಪದವಿ ಪೂರ್ವ ಪರೀಕ್ಷಾ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 10ರಿಂದ ಪರೀಕ್ಷೆಗಳು ಪ್ರಾರಂಭಗೊಳ್ಳಲಿವೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವಿಟರ್ ನಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

2013ರ ಮಾರ್ಚ್ 10ರಿಂದ ಮಾರ್ಚ್ 29ರವರೆಗೆ ಪರೀಕ್ಷೆ ನಡೆಸಲು ಪಿಯು ಬೋರ್ಡ್ ತೀರ್ಮಾನಿಸಿದೆ. ಮಾರ್ಚ್ 10ರಂದು ಕನ್ನಡ ಪರೀಕ್ಷೆ ನಡೆಯಲಿದೆ. ಬಳಿಕ ಪ್ರತಿದಿನ ಒಂದರಂತೆ ಗಣಿತ, ಅರ್ಥಶಾಸ್ತ್ರ ಪರೀಕ್ಷೆ ನಡೆಯಲಿದೆ. ಮಾರ್ಚ್ 14ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ರಸಾಯನಶಾಸ್ತ್ರ, ಮೂಲ ಗಣಿತ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ,

ಇನ್ನುಳಿದಂತೆ ಮಾರ್ಚ್ 18ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 20ರಂದು ಇತಿಹಾಸ, ಭೌತಶಾಸ್ತ್ರ, ಮಾ.21ರಂದು ಹಿಂದಿ ಪರೀಕ್ಷೆ ನಡೆಯಲಿದೆ. ಮಾರ್ಚ್ 23ರಂದು ಇಂಗ್ಲೀಷ್, ಮಾ.25ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾರ್ಚ್ 29ರಂದು ಸಮಾಜ ಶಾಸ್ತ್ರ, ಗಣಕಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

ಈ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಅಥವಾ ಪೋಷಕರು ಆಕ್ಷೇಪಣೆ ಸಲ್ಲಿಸಬೇಕಾದಲ್ಲಿ ನವೆಂಬರ್ 21ರ ತನಕ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಸುವವರು ಇ-ಮೇಲ್ ಮೂಲಕ ಮಾತ್ರವೇ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಅಂತಿಮ ದಿನಾಂಕ ಅಂದರೆ ನವೆಂಬರ್ 21ರ ಬಳಿಕ ಬಂದ ಆಕ್ಷೇಪಣೆ ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆಕ್ಷೇಪಣೆ ಸಲ್ಲಿಸುವವರು ಇ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ.

ಕರ್ನಾಟಕ 2ನೇ ಪಿಯುಸಿ ಪರೀಕ್ಷೆ 2023 ವೇಳಾಪಟ್ಟಿ

ದಿನಾಂಕ 10-03-2023 – ಕನ್ನಡ, ಅರೇಬಿಕ್

ದಿನಾಂಕ 11-03-2023 – ಗಣಿತ, ಶಿಕ್ಷಣ

ದಿನಾಂಕ 13-03-2023 – ಅರ್ಥಶಾಸ್ತ್ರ

ದಿನಾಂಕ 14-03-2023- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಬೀಜಗಣಿತ

ದಿನಾಂಕ 15-03-2023 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ದಿನಾಂಕ 16-03-2023 – ಲಾಜಿಕ್, ಬಿಸಿನೆಸ್ ಸ್ಟಡೀಸ್

ದಿನಾಂಕ 17-03-2023 – ಮಾಹಿತಿ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಸ್ವಾಸ್ಥ್ಯ

ದಿನಾಂಕ 18-03-2023 – ಭೂಗೋಳ, ಜೀವಶಾಸ್ತ್ರ

ದಿನಾಂಕ 20-03-2023 – ಇತಿಹಾಸ, ಭೌತಶಾಸ್ತ್ರ

ದಿನಾಂಕ 21-03-2023 – ಹಿಂದಿ

ದಿನಾಂಕ 23-03-2023 – ಇಂಗ್ಲೀಷ್

ದಿನಾಂಕ 25-03-2023 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ದಿನಾಂಕ 27-03-2023 – ಐಚ್ಛಿಕ ಕನ್ನಡ, ಖಾತೆಗಳು, ಭೂವಿಜ್ಞಾನ, ಗೃಹ ವಿಜ್ಞಾನ

ದಿನಾಂಕ 29-03-2023 – ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಇದನ್ನೂ ಓದಿ: Diwali Festival 2022:ದೀಪಾವಳಿ ಹಿನ್ನೆಲೆ, ಪ್ರಯಾಣಿಕರಿಗಾಗಿ 82 ವಿಶೇಷ ರೈಲುಗಳಿಗೆ ಚಾಲನೆ

ಇದನ್ನೂ ಓದಿ: Ramya Come Back : ರಮ್ಯ ಕಮ್ ಬ್ಯಾಕ್ ಡೌಟ್ : ಇನ್ ಸ್ಟಾಗ್ರಾಂ ನಲ್ಲಿ ಹೊರಬಿತ್ತು ಕಹಿಸತ್ಯ

2nd PU EXAM DATE : Second pu exam date released by pu board

Comments are closed.