ಸೋಮವಾರ, ಏಪ್ರಿಲ್ 28, 2025
HomeCinemaಮತ್ತೆ ಬಣ್ಣ ಹಚ್ಚಲು ಸಿದ್ಧವಾದ್ರು ರಮ್ಯ : ಮಾರ್ಚ್ ನಲ್ಲಿ ಅನೌನ್ಸ್ ಆಗುತ್ತೆ ಸ್ಯಾಂಡಲ್ ವುಡ್...

ಮತ್ತೆ ಬಣ್ಣ ಹಚ್ಚಲು ಸಿದ್ಧವಾದ್ರು ರಮ್ಯ : ಮಾರ್ಚ್ ನಲ್ಲಿ ಅನೌನ್ಸ್ ಆಗುತ್ತೆ ಸ್ಯಾಂಡಲ್ ವುಡ್ ಕ್ವಿನ್ ಸಿನಿಮಾ

- Advertisement -

ಮೋಹಕ‌ತಾರೆ ರಮ್ಯ ಕನ್ನಡದ ನಂಬರ್ 1 ನಟಿಯಾಗಿದ್ದರು.‌ ಒಂದು ಕಾಲದಲ್ಲಿ ಚಂದನವನದ ರಾಣಿಯಾಗಿ ಮೆರೆಯುತ್ತಿದ್ದ ರಮ್ಯ 2012 ರಲ್ಲಿ ರಾಜಕೀಯ ಪ್ರವೇಶಿಸಿದರು. ಅಷ್ಟೇ ಬೇಗ ಸಂಸದೆಯಾಗಿ ಲೋಕಸಭೆಗೂ ಕಾಲಿಟ್ಟರು. ಕೊನೆಗೆ ಕೆಲ ವರ್ಷದಿಂದ ರಾಜಕೀಯ, ಸಿನಿಮಾದಿಂದ ದೂರವಾಗಿ ಅಜ್ಞಾತವಾಗಿ‌ ಹೋದರು. ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸಕ್ರಿಯವಾಗಿದ್ದ ರಮ್ಯ ಸಿನಿಮಾಕ್ಕೆ ಮರಳೋದು (Ramya ready to acting) ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಗೋ ಕಾಲ ಸನ್ನಿಹಿತವಾದಂತಿದೆ.

ಹೌದು ಒಂದು ಕಾಲದಲ್ಲಿ ಊರಿಗೊಬ್ಬಳೇ ಪದ್ಮಾವತಿ ಎಂದು ಮೆರೆದಿದ್ದ ರಮ್ಯ ಈಗ ಕೇವಲ‌ ಸೋಷಿಯಲ್ ಮೀಡಿಯಾಕ್ಕೆ ಮಾತ್ರ ಸೀಮಿತವಾಗಿ ಬಿಟ್ಟಿದ್ದರು. ಆದರೆ ಮೊನ್ನೆ ಬೀದಿನಾಯಿ ಲಾರಾ ಅಂತ್ಯಕ್ರಿಯೆಗೆ ಹಾಜರಾದ ನಟಿ ರಮ್ಯ ಅಭಿಮಾನಿಗಳಿಗೆ ಸಖತ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಹೌದು, ನನಗೆ ಸಿನಿಮಾ ಇಂಡಸ್ಟ್ರಿ ಯಿಂದ ಸಾಕಷ್ಟು ಅವಕಾಶ ಗಳು ಬರುತ್ತಲೇ ಇದೆ. ನಾನೀಗ ಹಲವು ಚಿತ್ರಕತೆ ಗಳನ್ನು ಓದುತ್ತಿದ್ದೇನೆ. ಆದಷ್ಟು ಶೀಘ್ರವಾಗಿ ಈ ಬಗ್ಗೆ ನಿಖರವಾದ ಮಾಹಿತಿ ನೀಡುತ್ತೇನೆ. ನನ್ನ ಸಿನಿಮಾ ಕಮ್ ಬ್ಯಾಕ್ ಬಗ್ಗೆ ನಾನು ಮಾರ್ಚ್ ನಲ್ಲಿ ಮಾಧ್ಯಮದ ಜೊತೆಗೆ ವಿಸ್ತೃತವಾಗಿ ಮಾತನಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಬಹುತೇಕ ಮಾರ್ಚ್ ನಲ್ಲಿ ರಮ್ಯ ಸಿನಿಮಾ ರಂಗಕ್ಕೆ ರ್ರೀ ಎಂಟ್ರಿಕೊಡೋ ಸುದ್ದಿಯನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

2003 ರಲ್ಲಿ ಪುನೀತ್ ರಾಜ್ ಕುಮಾರ್ ನಟನೆಯ ಅಪ್ಪು ಸಿನಿಮಾದಲ್ಲಿ ಪಾರ್ವತಮ್ಮನವರ ದೊಡ್ಮನೆ ಬ್ಯಾನರ್ ನಲ್ಲಿ ಲಾಂಚ್ ಆದ ನಟಿ ರಮ್ಯ ಬಳಿಕ ಹಲವು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. 2012 ರಲ್ಲಿ ನಾಲ್ಕು ಸಿನಿಮಾಗಳ ನಟಿಸಿದ ಬಳಿಕ ಕಾಂಗ್ರೆಸ್ ನಿಂದ ರಾಜಕೀಯ ಅದೃಷ್ಟ ಪರೀಕ್ಷೆಗಿಳಿದ ರಮ್ಯ ಬಳಿಕ 2014 ಹಾಗೂ 2016 ರಲ್ಲಿ ಒಂದೊಂದು ಸಿನಿಮಾದಲ್ಲಿ ಮಾತ್ರ ನಟಿಸಿದ್ದರು.

ರಮ್ಯ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸದಾ ಪ್ರಚಲಿತ ವಿದ್ಯಮಾನಗಳಿಗೆ ಪ್ರತಿಕ್ರಿಯೆ ನೀಡುತ್ತ ಸಕ್ರಿಯರಾಗಿದ್ದರು. ಆದರೆ ಈ ಎಲ್ಲ ಸಂದರ್ಭದಲ್ಲೂ ರಮ್ಯಗೆ ಎದುರಾಗುತ್ತಿದ್ದ ಒಂದೇ ಪ್ರಶ್ನೆ ಸಿನಿಮಾ ರಂಗಕ್ಕೆ ನೀವು ಮರಳೋದು ಯಾವಾಗ ಅಂತ. ಮೊದ ಮೊದಲು ಸಿನಿಮಾ ನಟನೆ ಮುಗಿದ ಅಧ್ಯಾಯ ಎಂಬರ್ಥ ದಲ್ಲಿ ಮಾತನಾಡುತ್ತಿದ್ದ ರಮ್ಯ ಈಗ ಮತ್ತೆ ಬಣ್ಣ ಹಚ್ಚೋ ಸಿದ್ಧತೆ ಆರಂಭಿಸಿದ್ದಾರೆ. ಅಲ್ಲದೇ ಈಗಾಗಲೇ ಸಿನಿಮಾಗಾಗಿ ರಮ್ಯ ತೂಕ ಇಳಿಸೋದಿಕ್ಕು ಮುನ್ನುಡಿ ಬರೆದಿದ್ದಾರಂತೆ. ಒಟ್ಟಿನಲ್ಲಿ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ರಮ್ಯ ಕಾಲ ಸನ್ನಿಹಿತವಾದಂತಿದೆ.

ಇದನ್ನೂ ಓದಿ : ನನ್ನ ಜೊತೆ ಟ್ರಿಪ್ ಬರ್ತಿರಾ ? ಮಾದಕ‌ಬೆಡಗಿ ನೋರಾ ಫತೇಹಿ ಆಹ್ವಾನಕ್ಕೆ ಅಭಿಮಾನಿಗಳು ಖುಷ್

ಇದನ್ನೂ ಓದಿ : ಸಿನಿಮಾಗಳಲ್ಲಿ ಚುಂಬನ, ಹಾಟ್ ಸೀನ್ ಶೂಟ್ ಮಾಡುವಾಗ ಹೇಗಿರುತ್ತೆ? ಪ್ರಸಿದ್ಧ ಹಸಿಬಿಸಿ ದೃಶ್ಯಗಳ ತಜ್ಞರು ಹೇಳ್ತಾರೆ ಕೇಳಿ

(Ramya ready to acting in Kannada movie, Sandalwood Queen announcing Cinema in March)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular