3ನೇ ಸಿಎಂ ಆಯ್ಕೆಗೆ ಸಜ್ಜಾದ ಬಿಜೆಪಿ : ಕಮಲ‌ ಪಾಳಯದಲ್ಲಿ ಶುರುವಾಯ್ತು ಹೊಸ ರಾಜಕೀಯ ಲೆಕ್ಕಾಚಾರ

ಬೆಂಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸರ್ಕಸ್ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.‌ ಇದರೊಂದಿಗೆ ಮತ್ತೆ ಸಿಎಂ ಬದಲಾವಣೆ ವಿಚಾರ (3rd Karnataka CM) ಕೂಡ ಚರ್ಚೆಗೆ ಗ್ರಾಸವಾಗಿದ್ದು ಸಿ.ಎಂ.ಬೊಮ್ಮಾಯಿ ಸದ್ಯದಲ್ಲೇ ಹುದ್ದೆ ತ್ಯಜಿಸುತ್ತಾರೆ ಅನ್ನೋ ಚರ್ಚೆ ಕೂಡಾ ಕಾವೇರಿದೆ. ಮೊನ್ನೆ ಮೊನ್ನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕೆಪಿಸಿಸಿ ನಾಯಕ ಸತೀಶ್ ಜಾರಕಿಹೊಳಿ ಬಿಜೆಪಿಯಲ್ಲಿ 6 ತಿಂಗಳ ಸಿಎಂ ಬೊಮ್ಮಾಯಿ ಎಂಬರ್ಥದಲ್ಲಿ ಮಾತನಾಡಿದ್ದರು. ಸತೀಶ್ ಜಾರಕಿಹೊಳಿ ಈ ಟೀಕೆ ಸತ್ಯವಾಗಲಿದೆ ಎನ್ನಲಾಗುತ್ತಿದೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೂರನೇ ಭಾರಿಗೆ ಹಾಗೂ ಅಂತಿಮವಾಗಿ ಬಿಜೆಪಿ ಸಿಎಂ ಬದಲಾವಣೆಗೆ ಮುಂದಾಗಿದೆ ಎನ್ನಲಾಗುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸಮರ್ಥವಾಗಿ ಚಲಾಯಿಸಿದ್ದರೂ ಕೂಡಾ ಪಕ್ಷ ಸಂಘಟನೆ ಹಾಗೂ ಚುನಾವಣೆ ಗೆಲ್ಲುವಲ್ಲಿ ವಿಫಲವಾಗಿ ದ್ದಾರೆ. ಬೊಮ್ಮಾಯಿ ಕ್ಷೇತ್ರದಲ್ಲೇ ನಡೆದ ಉಪಚುನಾವಣೆ ಸೋಲು, ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿಗೆ ಸಿಗದ ನೀರಿಕ್ಷಿತ ಯಶಸ್ಸು ಹೈಕಮಾಂಡ್ ಚಿಂತೆಗೆ ಕಾರಣವಾಗಿದೆ.

ಹೀಗಾಗಿ ಬೊಮ್ಮಾಯಿ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸುವುದು ನೀರಿಕ್ಷಿತ ಪ್ರಮಾಣದ ಯಶಸ್ಸು ತಂದಕೊಡುವುದು ಅನುಮಾನ ಎಂಬ ಮಾತು ಬಿಜೆಪಿ ವಲಯ ದಲ್ಲೇ ಕೇಳಿಬಂದಿದೆ. ಬಿಎಸ್ವೈ ಸಿಎಂ ಆಗಿಕೆಲಸ ನಿರ್ವಹಿಸೋದರ ಜೊತೆಗೆ ಬಹುತೇಕ ಚುನಾವಣೆ ಹಾಗೂ ಸಂಘಟನೆ ಕಾರ್ಯದಲ್ಲೂ ಯಶಸ್ವಿಯಾಗಿದ್ದಾರೆ. ‌ಆದರೆ ಬೊಮ್ಮಾಯಿಗೆ ಆ ಚಾರ್ಮ್ ಇಲ್ಲ ಅನ್ನೋದು ಪಕ್ಷದಲ್ಲಿ ಎಲ್ಲರಿಗೂ ಅರ್ಥವಾಗಿದೆ. ಹೀಗಾಗಿ ಈಗಲೇ ಬೊಮ್ಮಾಯಿ ಬದಲಾಯಿಸಲು ಹೈಕಮಾಂಡ್ ಮನಸ್ಸು ಮಾಡಿದೆ ಎನ್ನಲಾಗುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಮೊನ್ನೆ ಬಿಜೆಪಿಯ ಹಿರಿಯ ಶಾಸಕ ಬಸನ್ ಗೌಡ ಪಾಟೀಲ್ ಯತ್ನಾಳ್ ವಾಜಪೇಯಿ ಬಳಿಕ‌ ಮೋದಿ ಬಂದಂತೆ ರಾಜ್ಯದಲ್ಲೂ ಬದಲಾವಣೆ ಆಗಬೇಕಿದೆ ಎಂದಿದ್ದರು. ಇದಲ್ಲದೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬರ್ಥದಲ್ಲೂ ಯತ್ನಾಳ್ ಆಗಾಗ ಹೇಳಿಕೆ ನೀಡುತ್ತಲೇ ಇದ್ದಾರೆ. ಹೀಗಾಗಿ ಪಂಚ ರಾಜ್ಯ ಚುನಾವಣೆಗೂ ಮುನ್ನ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಫಿಕ್ಸ್ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸಿಕೊಂಡು ಮುನ್ನಡೆಸುವಂತಹ ಖಡಕ್ ವ್ಯಕ್ತಿಯೊಬ್ಬರನ್ನು ಸಿಎಂ ಸ್ಥಾನಕ್ಕೇರಿಸಲು ಲೆಕ್ಕಾಚಾರ ಆರಂಭವಾಗಿದೆ. ಸಿ.ಟಿ.ರವಿ ಹಾಗೂ ಬಿ.ಎಲ್.ಸಂತೋಷ್ ಕೂಡಾ ಸಿಎಂ ರೇಸ್ ನಲ್ಲಿದ್ದಾರಂತೆ. ಇನ್ನೊಂದೆಡೆ ಪಂಚಮಸಾಲಿ ಮೂರನೇ ಪೀಠದ ಜೊತೆ ಸಚಿವ ಮುರುಗೇಶ್ ನಿರಾಣಿ ಕೂಡ ಶಕ್ತಿಪ್ರದರ್ಶನಕ್ಕೆ ಸಿದ್ಧವಾಗಿದ್ದು ಸಿಎಂ ಸ್ಥಾನ ನನಗೂ ಬೇಕು ಅಂತಿದ್ದಾರಂತೆ. ಒಟ್ಟಿನಲ್ಲಿ ಯಶಸ್ವಿ ಮೂರನೇ ಭಾರಿಗೆ ರಾಜ್ಯದಲ್ಲಿ ಬಿಜೆಪಿ ಸಿಎಂ ಬದಲಾವಣೆ ಖಚಿತ ಎನ್ನಲಾಗ್ತಿದ್ದು ಮತ್ತೊಂದು ಹೈಡ್ರಾಮಾಕ್ಕೆ ಕಮಲ ಪಾಳಯ ಸಿದ್ದವಾಗ್ತಿದೆ.

ಇದನ್ನೂ ಓದಿ : ಹರತಾಳು VS ಬೇಳೂರು : ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಮುಂದಾದ ಹಾಲಿ, ಮಾಜಿ ಶಾಸಕರು

ಇದನ್ನೂ ಓದಿ : ಸಚಿವ ಸಂಪುಟಕ್ಕೆ ಸರ್ಜರಿ : ನೂತನ ಸಚಿವರ ಪಟ್ಟಿ ಜೊತೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ

( BJP ready for 3rd Karnataka CM, The new political calculation began in the Bharatiya Janata Party regime)

Comments are closed.