ಬಿಜೆಪಿಯಲ್ಲಿ ರೇಣುಕಾಚಾರ್ಯ ಹವಾ : ಡಿಕೆ ಸುರೇಶ್ ಗೆ ಟ್ವೀಟ್ ತಿರುಗೇಟಿಗೆ ಹೈಕಮಾಂಡ್ ಮೆಚ್ಚುಗೆ

ಬೆಂಗಳೂರು : ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರುವಾಗಲಾದರೂ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳೋಕೆ ಸರ್ಕಸ್ ನಡೆಸಿರೋ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ (M P Renukacharya) ಸದ್ಯದ ಹೈಕಮಾಂಡ್ ಮೆಚ್ಚುಗೆ ಸಿಕ್ಕಿರೋ ಖುಷಿಯಲ್ಲಿದ್ದಾರೆ. ಹೌದು ಬಜೆಟ್ ವಿಚಾರಕ್ಕೆ ಕಮೆಂಟ್ ಮಾಡಿದ್ದ ಸಂಸದ ಡಿ.ಕೆ.ಸುರೇಶ್ ಗೆ ರೇಣುಕಾಚಾರ್ಯ ಸಖತ್ ತಿರುಗೇಟು ನೀಡಿದ್ದು, ರೇಣುಕಾಚಾರ್ಯ ರಿಪ್ಲೈಗೆ ಹೈಕಮಾಂಡ್ ಶಹಬ್ಬಾಸ್ ಎಂದಿದೆ.

ಇತ್ತೀಚಿಗೆ ಮಂಡನೆಯಾದ ಕೇಂದ್ರದ ಬಜೆಟ್ ನಲ್ಲಿ ಏನು ಇಲ್ಲ. ರಾಜ್ಯಕ್ಕೆ ಯಾವುದೇ ಕೊಡುಗೆ ಸಿಕ್ಕಿಲ್ಲ ಎಂಬುದು ರಾಜ್ಯ ಕಾಂಗ್ರೆಸ್ ಆರೋಪ.‌ಇದೇ ದಾಟಿಯಲ್ಲಿ ಬಜೆಟ್ ಗೆ ಕಮೆಂಟ್ ಮಾಡಿದ್ದ ಸಂಸದ ಡಿ.ಕೆ.ಸುರೇಶ್ ಇದು ಉಪ್ಪು ಹುಳಿ ಖಾರ ಇಲ್ಲದ ಬಜೆಟ್ ಎಂದಿದ್ದರು. ಡಿ.ಕೆ.ಸುರೇಶ್ ದೆಹಲಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನೀಡಿದ ಈ ಅಭಿಪ್ರಾಯ ಹಾಗೂ ಟ್ವೀಟ್ ಸಖತ್ ವೈರಲ್ ಆಗಿತ್ತು. ಸಂಸದ ಡಿ.ಕೆ.ಸುರೇಶ್ ಟ್ವೀಟ್ ಗೆ ತಿರುಗೇಟು ನೀಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ರುಚಿ ಗೊತ್ತಾಗದೇ ಇರೋದು ಕೊವೀಡ್ ಲಕ್ಷಣಗಳಲ್ಲೊಂದು. ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ಟ್ವಿಟ್ ಮೂಲಕ ವ್ಯಂಗ್ಯವಾಡಿದ್ದರು.

ಸಂಸದ ಡಿ.ಕೆ.ಸುರೇಶ್ ಗೆ ರೇಣುಕಾಚಾರ್ಯ ಟ್ವೀಟ್ ಮೂಲಕ ನೀಡಿದ ತಿರುಗೇಟು ಸಖತ್ ವೈರಲ್ ಆಗಿದ್ದು ಬಿಜೆಪಿ ಶಾಸಕರು, ನಾಯಕರು ಮೆಚ್ಚಿಕೊಂಡಿದ್ದರು. ಇದೀಗ ಈ ಟ್ವೀಟ್ ಬಿಜೆಪಿ ಕೇಂದ್ರ ನಾಯಕರು ಹಾಗೂ ವರಿಷ್ಠರ ಗಮನಕ್ಕೂ ಬಂದಿದ್ದು ರೇಣುಕಾಚಾರ್ಯ ಗೆ ಮೆಚ್ಚುಗೆ ವ್ಯಕ್ತವಾಗಿದೆ ಎನ್ನಲಾಗಿದೆ. ಅದರಲ್ಲೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸ್ವತಃ ದೂರವಾಣಿ ಕರೆ ಮಾಡಿ ರೇಣುಕಾಚಾರ್ಯಗೆ ಅಭಿನಂದನೆ ಸಲ್ಲಿಸಿದ್ದಾರಂತೆ.

ಆ ಮೂಲಕ ರೇಣುಕಾಚಾರ್ಯ ಕೇಂದ್ರ ನಾಯಕರ ಗಮನ ಸೆಳೆದಿದ್ದಾರೆ. ಇತ್ತೀಚಿಗಷ್ಟೇ ಸ್ವ ಪಕ್ಷಿಯ ಸಚಿವರ ವಿರುದ್ಧವೇ ಕೆಂಡಕಾರಿದ್ದ ರೇಣುಕಾಚಾರ್ಯ ಪಕ್ಷದಲ್ಲಿ ಇರುವ ದುರಹಂಕಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಶಾಸಕರ ಮಾತಿಗೆ ಬೆಲೆ ಕೊಡದ ಸಚಿವರಿಗೆ ಬುದ್ಧಿ ಹೇಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ರಿಗೆ ಮನವಿ‌ಮಾಡಿದ್ದರು. ಅಲ್ಲದೇ ಕೆಲಸ ಮಾಡದ ಸಚಿವರಿಗೆ ಕೋಕ್ ಕೊಟ್ಟು ಹೊಸ ಮುಖಗಳಿಗೆ ಅವಕಾಶ ಕೊಡುವಂತೆಯೂ ರೇಣುಕಾಚಾರ್ಯ ಆಗ್ರಹಿಸಿದ್ದರು.‌ ಒಟ್ಟಿನಲ್ಲಿ ಸದ್ಯ ಬಿಜೆಪಿಯಲ್ಲಿ ರೇಣುಕಾಚಾರ್ಯ ಹವಾ ಜೋರಾಗಿದ್ದು ಈ ಪ್ರಭಾವವೆಲ್ಲ ರೇಣುಕಾಚಾರ್ಯ ಸಂಪುಟದಲ್ಲಿ ಎಂಟ್ರಿ ಕೊಡೋಕೆ ಸಹಾಯ ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಸಚಿವ ಸಂಪುಟಕ್ಕೆ ಸರ್ಜರಿ : ನೂತನ ಸಚಿವರ ಪಟ್ಟಿ ಜೊತೆ ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ

ಇದನ್ನೂ ಓದಿ : ಹರತಾಳು VS ಬೇಳೂರು : ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಮುಂದಾದ ಹಾಲಿ, ಮಾಜಿ ಶಾಸಕರು

( BJP High command praises MLA M P Renukacharya)

Comments are closed.