ಸೋಮವಾರ, ಏಪ್ರಿಲ್ 28, 2025
HomeCinemaRangi Taranga Remake To Bollywood : ಬಾಲಿವುಡ್ ನಲ್ಲಿಯೂ ರಂಗು ಮೂಡಿಸಲು ಸಜ್ಜಾದ ರಂಗಿತರಂಗ...

Rangi Taranga Remake To Bollywood : ಬಾಲಿವುಡ್ ನಲ್ಲಿಯೂ ರಂಗು ಮೂಡಿಸಲು ಸಜ್ಜಾದ ರಂಗಿತರಂಗ : ಅಕ್ಷಯ್ ಕುಮಾರ್ ಗೆ ಆಕ್ಷನ್ ಕಟ್ ಹೇಳ್ತಾರಾ ಅನೂಪ್ ಭಂಡಾರಿ ?

- Advertisement -

ರಂಗಿತರಂಗ…ಕನ್ನಡ ಸಿನಿಲೋಕದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಿನಿಮಾ. ಸಂಪೂರ್ಣ ಹೊಸಬರ ತಂಡ ಸೇರಿಕೊಂಡು ಮಾಡಿದ್ದ ಈ ಚಿತ್ರ ಗೆದ್ದ ಪರಿ ಕಂಡು ಇಡೀ ಇಂಡಸ್ಟ್ರೀ ಒಮ್ಮೆ ದಂಗ್ ಆಗಿತ್ತು. ನಿರ್ದೇಶಕ ಅನೂಪ್‌ ಭಂಡಾರಿ ಅವರ ಚೊಚ್ಚಲ ಪ್ರಯತ್ನ ಅದಾಗಿತ್ತು. ಅವರ ಸಹೋದರ ನಿರೂಪ್‌ ಭಂಡಾರಿ ಹೀರೋ ಆಗಿ ಆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ನಟಿಯರಾದ ರಾಧಿಕಾ ನಾರಾಯಣ್‌ ಮತ್ತು ಆವಂತಿಕಾ ಶೆಟ್ಟಿ ಕೂಡ ಇದು ಮೊದಲ ಸಿನಿಮಾ. ಮೊದಲ ಹೆಜ್ಜೆಯಲ್ಲಿಯೇ ಇವರೆಲ್ಲರೂ ಸಕ್ಸಸ್ ಸಿಕ್ಸರ್ ಬಾರಿಸಿದ್ದರು. ಈಗ ರಂಗಿತರಂಗ ಬಿಡುಗಡೆಯಾಗಿ ಏಳು ವರ್ಷ ಗತಿಸಿದೆ. ಚಿತ್ರತಂಡ ಆ ನೆನಪುಗಳ ಯಾನವನ್ನು ನೆನೆದು ಸಂಸತಪಟ್ಟಿದೆ. ಇದೇ ಸಂಭ್ರಮದಲ್ಲಿರುವ ಸಿರಿಗನ್ನಡಂ ಪ್ರೇಕ್ಷಕ ಕಾಲರ್ ಮೇಲೆತ್ತುವ ಸುದ್ದಿ ರಂಗಿತರಂಗ (Rangi Taranga Remake To Bollywood) ಬಳಗದಿಂದ ರಿವೀಲ್ ಆಗಿದೆ.

ರಂಗಿತರಂಗ ಬಾಲಿವುಡ್ ಗೆ ರಿಮೇಕ್ ಆಗ್ತಿದೆ ಎಂಬ ಬಡಾ ಖಬರ್ ವೊಂದು ಸೌತ್ ಟು ನಾರ್ತ್ ಚರ್ಚೆಯಲ್ಲಿದೆ. ಬಿಟೌನ್ ಸ್ಟಾರ್ ನಟರೊಬ್ಬರು ರಂಗಿತರಂಗ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ಅದ್ರಲ್ಲಿಯೂ ಪ್ರಮುಖವಾಗಿ ಕಿಲಾಡಿ ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಹೀರೋ ಆಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ವದಂತಿ ಹಬ್ಬಿದೆ. ರಂಗಿತರಂಗ ಸಿನಿಮಾದ ಹಿಂದಿ ರಿಮೇಕ್ ಬಗ್ಗೆ ಮೊದಲಿನಿಂದಲೂ ದೊಡ್ಡ ಚರ್ಚೆ ನಡೆಯುತ್ತಲೇ ಇದೆ. ಇದೀಗ ದೊಡ್ಡ ನಿರ್ಮಾಪಕರೊಬ್ಬರು ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ಉತ್ಸುಕರಾಗಿದ್ದಾರಂತೆ. ಮುಂಬೈನ ಕಾರ್ಪೊರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

2015 ಜುಲೈ 3 ರಂದು ರಂಗಿತರಂಗ ರಾಜ್ಯದಾದ್ಯಂತ ತೆರೆಗೆ ಬಂದಿತ್ತು. ಒಂದು ವರ್ಷ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಚಿತ್ರ, ಆ ಬಳಿಕ ವಿದೇಶಗಳಲ್ಲೂ ರಂಗಿತರಂಗ ಅಬ್ಬರ ಜೋರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಊಹೆಗೂ ನಿಲುಕದಂತೆ ಇತಿಹಾಸ ಸೃಷ್ಟಿಸಿದ ಈ ಚಿತ್ರಕ್ಕೆ ಅನೂಪ್ ಆಕ್ಷನ್ ಕಟ್ ಹೇಳಿದ್ದರು. ನಿರೂಪ್ ನಾಯಕನಾಗಿ ಆವಂತಿಕ ಹಾಗೂ ರಾಧಿಕಾ ನಾಯಕಿಯರಾಗಿ ಕಮಾಲ್ ಮಾಡಿದ್ದರು. ಅಜನೀಶ್ ಸಂಗೀತದ ಕಂಪು ಇರುವ ಈ ಚಿತ್ರ ಬಾಲಿವುಡ್ ಅಂಗಳದಲ್ಲೂ ರಂಗು‌ ಮೂಡಿಸಲಿದೆ ಎನ್ನಲಾಗ್ತಿದೆ. ಸದ್ಯಕ್ಕೆ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್ ರೋಣ ರಿಲೀಸ್ ಗೆ ಎದುರು‌ ನೋಡುತ್ತಿದ್ದಾರೆ. ಇದಾದ ಬಳಿಕ ಕಿಚ್ಚ ಅನೂಪ್ ಜೊತೆಯಾಗಿ ಬಿಲ್ಲರಂಗ ಭಾಷಾ ಸಿನಿಮಾಕ್ಕೆ ಮುನ್ನುಡಿ ಬರೆಯಲಿದ್ದಾರೆ.

ಇದನ್ನೂ ಓದಿ : ಧನುಷ್ ವೃತ್ತಿ ಜೀವನದ ಅತಿ ದೊಡ್ಡ ಸಿನೆಮಾ “ಕ್ಯಾಪ್ಟನ್ ಮಿಲ್ಲರ್”; ಮೂರೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಧನುಷ್

ಇದನ್ನೂ ಓದಿ : Malaika Arora : ಪಾರದರ್ಶಕ ಉಡುಪು ಧರಿಸಿದ ಮಲೈಕಾ ಅರೋರಾ : ಕಾಲೆಳೆದ ನೆಟ್ಟಿಗರು

Rangi Taranga Remake To Bollywood , Will Akshay Kumar get an action cut ? Anoop Bhandari

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular