Funeral of Chandrasekhar Guruji : ಮಣ್ಣಲ್ಲಿ ಮಣ್ಣಾದ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್​ ಗುರೂಜಿ

ಹುಬ್ಬಳ್ಳಿ : Funeral of Chandrasekhar Guruji : ಆಪ್ತರ ಮೋಸದಾಟಕ್ಕೆ ಬಲಿಯಾದ ವಾಸ್ತು ಶಾಸ್ತ್ರಜ್ಞ ಹಾಗೂ ಮಾನವತಾವಾದಿ ಚಂದ್ರಶೇಖರ್​ ಗುರೂಜಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಹುಬ್ಬಳ್ಳಿಯ ಸುಳ್ಳಾ ಗ್ರಾಮದ ಅವರ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ.


ಮೆರವಣಿಗೆ ವಾಹನದಲ್ಲಿ ಚಂದ್ರಶೇಖರ್​ ಗುರೂಜಿಯನ್ನು ಕರೆತರುತ್ತಿದ್ದಂದೆಯೇ ದಾರಿಯುದ್ದಕ್ಕೂ ಚಂದ್ರ ಶೇಖರ್ ಗುರೂಜಿಗೆ ಜೈ ಕಾರಗಳು ಕೇಳಿ ಬಂದವು. ಚಂದ್ರ ಶೇಖರ್​ ಗುರೂಜಿಯ ಅಂತಿಮ ದರ್ಶನವನ್ನು ಪಡೆಯಲು ಸಾಕಷ್ಟು ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದರು. ಚಂದ್ರಶೇಖರ್​ ಗುರೂಜಿ ಅಂತಿಮ ದರ್ಶನಕ್ಕೆ ಅವಕಾಶ ನೀಡುತ್ತಿದ್ದಂತೆಯೇ ಅಭಿಮಾನಿಗಳು ಗುರೂಜಿಯ ಮುಖ ನೋಡಿ ಬಾಯಿ ಬಾಯಿ ಬಡಿದುಕೊಂಡು ಅತ್ತ ದೃಶ್ಯ ಕೂಡ ಕಂಡು ಬಂತು

.
ಹುಬ್ಬಳ್ಳಿಯ ಸುಳ್ಳಾ ಗ್ರಾಮದಲ್ಲಿರುವ ಗುರೂಜಿಗೆ ಸೇರಿದ ಜಮೀನಿಗೆ ಪತ್ನಿ ಅಂಕಿತಾ, ಪುತ್ರಿ ಸ್ವಾತಿ ಸೇರಿದಂತೆ ಕುಟುಂಬಸ್ಥರ ದಂಡೇ ಆಗಮಿಸಿತ್ತು. ಪತಿಯ ಮುಖವನ್ನು ನೋಡಿ ಪತ್ನಿ ಅಂಕಿತಾ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು. ಪತ್ನಿಯ ಅಂತಿಮ ಪೂಜಾ ಕಾರ್ಯಗಳನ್ನು ನೆರವೇರಿಸಿ ಅಂಕಿತಾ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರು ಕೂಡ ಗುರೂಜಿಯ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದರು. ಚಂದ್ರಶೇಖರ್​ ಗುರೂಜಿಯ ಪ್ರೀತಿಯ ಶ್ವಾನ ಪ್ರಿನ್ಸ್​ ಕೂಡ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಆಗಮಿಸಿತ್ತು. ಗುರೂಜಿ ಶವವನ್ನು ಇಡಲಾಗಿದ್ದ ಪೆಟ್ಟಿಗೆಯ ಮೇಲೆ ಮಲಗಿ ಗುರೂಜಿಗಳನ್ನೇ ದಿಟ್ಟಿಸಿದ ಶ್ವಾನ ಬಳಿಕ ಬೇಸರವಾದವರಂತೆ ಕೂತಿದ್ದ ದೃಶ್ಯ ಕೂಡ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.


ಚಂದ್ರ ಶೇಖರ್​ ಗುರೂಜಿ ಪುತ್ರಿ ಸ್ವಾತಿ ಹಾಗೂ ಅಣ್ಣನ ಮಗ ಸಂತೋಷ್​ ಅಂಗಡಿ ಸರಳ ವಾಸ್ತು ಶಾಸ್ತ್ರಜ್ಞನ ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ನೆರವೇರಿಸಿದರು. ಕೊಟ್ರಯ್ಯ ಸ್ವಾಮೀಜಿಗಳ ನೇತೃತ್ವದಲ್ಲಿ 10ಕ್ಕೂ ಅಧಿಕ ಸ್ವಾಮೀಜಿಗಳು ಅಂತ್ಯಕ್ರಿಯ ಕಾರ್ಯವನ್ನು ಮಾಡಿದ್ದಾರೆ. ಪಂಚಾಕ್ಷರಿ ಮಂತ್ರಗಳನ್ನು ಜಪಿಸುವ ಮೂಲಕ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಗುರೂಜಿಗಳ ಅಂತಿಮ ಕಾರ್ಯ ನೆರವೇರಿದೆ. ಚಂದ್ರಶೇಖರ್​ ಗುರೂಜಿಗೆ ದೇಹಕ್ಕೆ ಮಣ್ಣು ಹಾಕುವ ಸಂದರ್ಭದಲ್ಲಿ ಗುರುಗಳೇ ಮತ್ತೆ ಹುಟ್ಟಿ ಬನ್ನಿ ಎಂಬ ಘೋಷ ವಾಕ್ಯಗಳು ಸಹ ಎಲ್ಲೆಡೆ ಕೇಳಿ ಬಂದವು.

ಇದನ್ನು ಓದಿ : Sarala Vaastu ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಕೊಲೆ ರಹಸ್ಯ ಬಿಚ್ಚಿಟ್ಟ ಕಮಿಷನರ್‌ ಲಾಬೂರಾಂ

ಇದನ್ನೂ ಓದಿ : ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್… ಇದೇ ದಿಗ್ಗಜರ ಕೊನೆಯ ಮುಖಾಮುಖಿ !

Funeral of Chandrasekhar Guruji in Hubli

Comments are closed.