Heavy rain Protest : ಕೋಟದಲ್ಲಿ ಭಾರೀ ಮಳೆಯಿಂದ ಕೃಷಿಭೂಮಿ ಜಲಾವೃತ : ನೆರೆ ನೀರಲ್ಲೇ ರಾಜ್ಯ ಹೆದ್ದಾರಿ ತಡೆ

ಕೋಟ : ಕಳೆದ ಮೂರ್ನಾಲ್ಕು ದಿನಗಳಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ (Heavy rain Protest) ಉಡುಪಿ ಜಿಲ್ಲೆಯ ಕೋಟ ಮೂರು ಕೈ ಬಳಿಯಲ್ಲಿ ಕೃತಕ ನೆರೆ ಹಾವಳಿ ಉಂಟಾಗಿದೆ. ಇದರಿಂದಾಗಿ ಕೋಟದ ಬಳಿಯಲ್ಲಿನ ಮಡಿವಾಳ ಸಾಳು ಹೊಳೆ ಮತ್ತು ಕೃಷಿ ಭೂಮಿ ನಡುವಲ್ಲೇ ಹಾದು ಹೋಗುವ ಕೋಟ – ಗೋಳಿಯಂಗಡಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಕರು ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸುವ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Heavy rain Protest In Udupi Kota protest due to inundation of agricultural land people who blocked the road in Kota

ವರ್ಷಂಪ್ರತಿ ಮಳೆಗಾಲದ ಸಂದರ್ಭದಲ್ಲಿ ಕೋಟ ಮೂರು ಕೈ ಬಳಿಯಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಮೇಲೆ ಮಳೆಯ ನೀರು ಹರಿದು ಕೃತಕ ನೆರೆ ಹಾವಳಿ ಉಂಟಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿನ ಕೃಷಿಕರು ಲಕ್ಷಾಂತರ ಮೌಲ್ಯದ ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ನೆರೆ ನೀರಿನಲ್ಲಿಯೇ ಮನೆಗಳಿಗೆ ತೆರಳ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಾಶ್ವತ ಪರಿಹಾರವೆಂಬಂತೆ ಈ ಭಾಗದಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಈ ಭಾಗದಲ್ಲಿನ ಜನರು, ಕೃಷಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರು. ಆದರೆ ಇದುವರೆಗೂ ಜನರ ಬೇಡಿಕೆಯನ್ನು ಈಡೇರಿಸಿಲ್ಲ. ಇದರಿಂದ ಕೆರಳಿದ ಕೃಷಿಕರು, ಸ್ಥಳೀಯರು ಇಂದು ನೆರೆಯ ನೀರಿನಲ್ಲಿಯೇ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

Heavy rain Protest In Udupi Kota protest due to inundation of agricultural land people who blocked the road in Kota

ಪ್ರತಿಭಟನಾ ಸ್ಥಳಕ್ಕೆ ಕುಂದಾಪುರ ವಿಭಾಗಾಧಿಕಾರಿ ರಾಜು ಅವರು ಭೇಟಿ ನೀಡಿ ಮನವಿಯನ್ನು ಸ್ವೀಕರಿಸಿದ್ದಾರೆ. ಶೀಘ್ರದಲ್ಲಿಯೇ ಜನರ ಸಮಸ್ಯೆಯನ್ನು ಪರಿಹಾರ ಮಾಡುವ ಭರವಸೆಯನ್ನು ನೀಡಿದ್ದಾರೆ. ಒಂದೊಮ್ಮೆ ಒಂದು ವಾರದ ಅವಧಿಯಲ್ಲಿ ತಮ್ಮ ಬೇಡಿಕೆಯನ್ನು ಈಡೇರಿಸದೇ ಇದ್ದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಬಂದ್ ಮಾಡುವ ಕುರಿತು ಸ್ಥಳೀಯರು ಎಚ್ಚರಿಕೆಯನ್ನು ನೀಡಿದ್ದಾರೆ.

Heavy rain Protest In Udupi Kota protest due to inundation of agricultural land people who blocked the road in Kota

ಇನ್ನು ಬೇಳೂರು, ಗಿಳಿಯಾರು, ಕಾರ್ಕಡ, ಚಿತ್ರಪಾಡಿ ಗ್ರಾಮಸ್ಥರ ಪರವಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಸದಸ್ಯ ಶ್ಯಾಮ ಸುಂದರ ನಾಯರಿ ಅವರು ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಮಲ್ಯಾಡಿಯಿಂದ ಕಾವಡಿವರೆಗೆ ಹರಿಯುತ್ತಿರುವ ನದಿಯನ್ನು ಹೂಳೆತ್ತುವುದು, ಮಣೂರು, ಗಿಳಿಯಾರು, ಚಿತ್ರಪಾಡಿ, ಬೇಳೂರು ಗ್ರಾಮದಲ್ಲಿ ಹರಿಯುವ ತೋಡನ್ನು ಹೂಳೆತ್ತಬೇಕು. ಜೊತೆಗೆ ಈ ಭಾಗದಲ್ಲಿ ಕಿರು ಸೇತುವೆಯನ್ನು ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಮನವಿಯಲ್ಲಿ ತಿಳಿಸಲಾಗಿದೆ.

Heavy rain Protest In Udupi Kota protest due to inundation of agricultural land people who blocked the road in Kota

ಅಂತರಗಂಗೆಯಿಂದ ಕೃಷಿಭೂಮಿಗೆ ಹಾನಿ :
ಕೋಟ ಮೂರುಕೈ ಸುತ್ತಮುತ್ತಲಿನ ಗ್ರಾಮಗಳ ಕೃಷಿಕರು ಶ್ರಮವಹಿಸಿ ವರ್ಷವೂ ಕೃಷಿ ಕಾರ್ಯವನ್ನು ಮಾಡುತ್ತಿದ್ದಾರೆ. ಆದ್ರೆ ವರ್ಷಂಪ್ರತಿ ಉಂಟಾಗುತ್ತಿರುವ ಕೃತಕ ನೆರೆಯ ಹಾವಳಿಯಿಂದಾಗಿ ಭಾಗದಲ್ಲಿನ ಕೃಷಿ ಜಮೀನಿಗೆ ಅಂತರಗಂಗೆ ಪ್ರವೇಶಿಸಿ ಕೃಷಿಯನ್ನು ನಾಶ ಮಾಡುತ್ತಿದೆ. ವರ್ಷಂಪ್ರತಿ ಲಕ್ಷಾಂತರ ರೂಪಾಯಿ ವ್ಯಯಿಸಿ ಬೆಳೆದ ಬೆಳೆ ನಾಶವಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಎಷ್ಟೇ ಮನವಿ ನೀಡಿದ್ರೂ ಪ್ರಯೋಜನವಾಗುತ್ತಿಲ್ಲ ಎಂದು ಕೃಷಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Heavy rain Protest In Udupi Kota protest due to inundation of agricultural land people who blocked the road in Kota

ಕೋಟ ಮೂರು ಕೈ ಸಮೀಪದಲ್ಲಿ ಕೃತಕ ನೆರೆಯಿಂದ ಮನೆಗೆ ಸಂಪರ್ಕ ಕಡಿತ

Heavy rain Protest In Udupi Kota protest due to inundation of agricultural land people who blocked the road in Kota

ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು

Heavy rain Protest In Udupi Kota protest due to inundation of agricultural land people who blocked the road in Kota

ಕೋಟ – ಗೋಳಿಯಂಗಡಿ ರಾಜ್ಯ ಹೆದ್ದಾರಿಯಲ್ಲಿ ಕೃತಕ ನೆರೆ

Heavy rain Protest In Udupi Kota protest due to inundation of agricultural land people who blocked the road in Kota

ಕೋಟ ಮೂರು ಕೈ ಸಮೀಪದಲ್ಲಿ ನೆರೆ ಹಾವಳಿಯಿಂದಾಗಿ ದೋಣಿಯಲ್ಲಿ ಮನೆ ಸೇರುತ್ತಿರುವ ಜನರು

ಇದನ್ನೂ ಓದಿ : ಮರವಂತೆಯಲ್ಲಿ ಕಡಲ್ಕೊರೆತ : ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಜನರ ಹಿಡಿಶಾಪ

ಇದನ್ನೂ ಓದಿ : murdering Chandrasekhar Guruji : ಚಂದ್ರಶೇಖರ್​ ಗುರೂಜಿ ಹತ್ಯೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Heavy rain Protest In Udupi Kota protest due to inundation of agricultural land people who blocked the road in Kota

Comments are closed.