ಸೋಮವಾರ, ಏಪ್ರಿಲ್ 28, 2025
HomeCinemaNiveditha Gowda : ಅಮ್ಮ ಅಜ್ಜಿ ಜೊತೆ ಹೆಜ್ಜೆ ಹಾಕಿದ ನಿವೇದಿತಾ ಗೌಡ :...

Niveditha Gowda : ಅಮ್ಮ ಅಜ್ಜಿ ಜೊತೆ ಹೆಜ್ಜೆ ಹಾಕಿದ ನಿವೇದಿತಾ ಗೌಡ : ಸೋಷಿಯಲ್ ಮೀಡಿಯಾ ದಲ್ಲಿ ವಿಡಿಯೋ ವೈರಲ್

- Advertisement -

ನಟಿಯರು ತಮ್ಮ ಸಹನಟಿಯರ ಜೊತೆ, ಪತಿ ಜೊತೆ, ಬಾಯ್ ಪ್ರೆಂಡ್ ಜೊತೆ ಟಿಕ್ ಟಾಕ್, ಡ್ಯಾನ್ಸ್ ಮಾಡೋದು ಕಾಮನ್. ಆದರೆ ಇಲ್ಲೊಬ್ಬ ನಟಿಮಣಿ ಅಮ್ಮ ಮತ್ತು ಅಜ್ಜಿ ಜೊತೆ ಮೈಬಳುಕಿಸೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ( Instagram reels )ಸಖತ್ ಸದ್ದು ಮಾಡಿದ್ದಾರೆ. ಇಷ್ಟಕ್ಕೂ ಹೀಗೆ ಅಜ್ಜಿ ಮತ್ತು ಅಮ್ಮನ ಜೊತೆ ಸಖತ್ ಸ್ಟೆಪ್ ಹಾಕಿರೋ ಸುಂದರಿ ಯಾರು ಅಂತ ನಿಮಗೆ ಕುತೂಹಲನಾ ಅಕೆ ಮತ್ಯಾರೂ ಅಲ್ಲ. ರಾಪರ್‌ ಚಂದನ್‌ ಶೆಟ್ಟಿ ಪತ್ನಿ ( Rapper Chandan Shetty ) ಬೇಬಿ ಡಾಲ್ ಖ್ಯಾತಿಯ ನಟಿ ನಿವೇದಿತಾ ಗೌಡ (Niveditha Gowda).

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಜನಪ್ರಿಯತೆಗೆ ಬಂದ ಪ್ರತಿಭೆ ನಿವೇದಿತಾ ಗೌಡ. ಉದ್ದನೇಯ ಕೇಶರಾಶಿ ,ಅಚ್ಚ ಬಿಳುಪಿನ ಮೈಬಣ್ಣದ ನಿವೇದಿತಾ ಗೌಡ ಕನ್ನಡವನ್ನು ಇಂಗ್ಲೀಷ್ ಆಕ್ಸೆಂಟಿನಲ್ಲಿ ಮಾತನಾಡುತ್ತ ಕರುನಾಡಿನ ಗಮನ ಸೆಳೆದ ನಿವೇದಿತಾ ಗೌಡ ಯಾವುದೇ ಸಿನಿಮಾದಲ್ಲಿ ನಟಿಸದಿದ್ದರೂ ಆಕೆಯ ಜನಪ್ರಿಯತೆ ಯಾವ ನಟಿಗೂ ಕಡಿಮೆ ಇಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ನಿವೇದಿತಾ ಗೌಡ, ಸದಾ ಒಂದಿಲ್ಲೊಂದು ಹಾಡಿಗೆ ಡ್ಯಾನ್ಸ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿ ಗಮನ ಸೆಳೆಯುತ್ತಾರೆ.
ಪತಿ ರ್ಯಾಪರ್ ಚಂದನ್ ಶೆಟ್ಟಿ ಜೊತೆಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದ ನಿವೇದಿತಾ ಇದೇ ಮೊದಲ ಬಾರಿಗೆ ತಾಯಿ ಹಾಗೂ ಅಜ್ಜಿ ಜೊತೆ ಮ್ಯೂಸಿಕ್ ಗೆ ನೃತ್ಯ ಮಾಡಿ ವಿಡಿಯೋ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ.

1.3 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಿವೇದಿತಾ ಅಜ್ಜಿ ಮತ್ತು ಅಮ್ಮನ ಜೊತೆ ಕುಣಿದಿರೋ ವಿಡಿಯೋಗೆ ಲಕ್ಷಾಂತರ ಲೈಕ್ಸ್ ಹರಿದು ಬಂದಿದ್ದು 303 ಹೆಚ್ಚು ಜನ‌ ಕಮೆಂಟ್ ಮಾಡಿದ್ದಾರೆ. ಕೆಲದಿನಗಳ ಹಿಂದೆ ನಿವೇದಿತಾ ಗೌಡ ತಮ್ಮ ತಾಯಿ ಜೊತೆ ನೂ ಡ್ಯಾನ್ಸ್ ಮಾಡಿ ವಿಡಿಯೋ ಸೋಷಿಯಲ್‌ ಮೀಡಿಯಾಗೆ ಅಪ್ಲೋಡ್ ಮಾಡಿದ್ದರು. ಬಿಗ್ ಬಾಸ್ ನಿಂದ ಪ್ರಸಿದ್ಧಿಗೆ ಬಂದ ನಿವೇದಿತಾ ಗೌಡ, ಬಳಿಕ ರ್ಯಾಪರ್ ಹಾಗೂ ಗಾಯಕ ಚಂದನ್ ಶೆಟ್ಟಿ ವಿವಾಹವಾಗಿದ್ದರು. ಬಳಿಕ ಚಂದನ್ ಹಾಗೂ ನಿವೇದಿತಾ ಹಲವು ಸಾಂಗ್ ಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು.

ಇತ್ತೀಚಿಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ರಾಜಾ ರಾಣಿ ಕಪಲ್ಸ್ ಶೋದಲ್ಲೂ ಈ ಜೋಡಿ ಪಾಲ್ಗೊಂಡು ಹೆಸರು ಗಳಿಸಿತ್ತು. ಈಗ ನಿವೇದಿತಾ ಫ್ಯಾಮಿಲಿ ಡ್ಯಾನ್ಸ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಅಮ್ಮ ಮಗಳು ಅಕ್ಕ ತಂಗಿಯಂತಿದ್ದಿರಿ ಅಂತ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : ಮಕ್ಕಳಾಗೋ ಟೈಂ ಬಂದ್ರೂ ಮಕ್ಕಳಾಟ ಬಿಟ್ಟಿಲ್ಲ….! ನಿವೇದಿತಾ ಗೌಡ ಪೋಸ್ಟ್ ಗೆ ಬೇಕಾಬಿಟ್ಟಿ ಕಮೆಂಟ್….! ಟ್ರೋಲ್..!!

ಇದನ್ನು ಓದಿ : ಈ ಪೋಟೋದಲ್ಲಿರೋರನ್ನು ಗುರುತಿಸಿ…! ಬಾರ್ಬಿಡಾಲ್ ಖ್ಯಾತಿಯ ನಿವೇದಿತಾ ಕೊಟ್ರು ಟಾಸ್ಕ್..!

(Rapper Chandan Shetty wife Niveditha Gowda Instagram reels with her mother and grandmother)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular