Pfizer vaccine : ಫೈಜರ್ ಲಸಿಕೆಯ ಮೂರು ಡೋಸ್​ ಸ್ವೀಕರಿಸಿದ್ದ ವ್ಯಕ್ತಿಯಲ್ಲೂ ಓಮಿಕ್ರಾನ್​ ಪತ್ತೆ

ಒಮಿಕ್ರಾನ್​ ರೂಪಾಂತರಿಯ (Omicron variant) ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ದೇಶದಲ್ಲಿ ಜನತೆಗೆ ಆತಂಕ ಹೆಚ್ಚಾಗಿದೆ. ತಜ್ಞರು ಸಂಭವನೀಯ ಮೂರನೇ ಅಲೆಯ ಬಗ್ಗೆ ಎಚ್ಚರಿಸುತ್ತಿರುವ ಬೆನ್ನಲ್ಲೇ ಒಮಿಕ್ರಾನ್​ ದೇಶಕ್ಕೆ ಕಾಲಿಟ್ಟಿರುವುದು ಇನ್ನಷ್ಟು ಕಳವಳಗಳಿಗೆ ಕಾರಣವಾಗಿದೆ. ಅದೇ ರೀತಿ ನ್ಯೂಯಾರ್ಕ್​ನಿಂದ ಮಹಾರಾಷ್ಟ್ರದ ಮುಂಬೈಗೆ ಶುಕ್ರವಾರ ಮರಳಿದ್ದ 29 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಒಮಿಕ್ರಾನ್​ ರೂಪಾಂತರಿ ಪತ್ತೆಯಾಗಿದೆ ಬೃಹತ್​​ಮುಂಬೈ ಮಹಾನಗರ ಪಾಲಿಕೆ ಅಧಿಕೃತ ಮಾಹಿತಿ ನೀಡಿದೆ. ಅದರಲ್ಲೂ ಫೈಜರ್ ಲಸಿಕೆಯ ( three doses of Pfizer vaccine ) ಮೂರು ಡೋಸ್​ ಸ್ವೀಕರಿಸಿದ್ದ ವ್ಯಕ್ತಿಯಲ್ಲೂ ಓಮಿಕ್ರಾನ್​ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

ಕೊರೊನಾ ಒಮಿಕ್ರಾನ್​ ರೂಪಾಂತರಿಯ ಸೋಂಕಿಗೆ ಒಳಗಾಗಿರುವ ಈ ವ್ಯಕ್ತಿಯಲ್ಲಿ ಯಾವುದೇ ಲಕ್ಷಣಗಳು ಪತ್ತೆಯಾಗಿಲ್ಲ. ಇನ್ನೊಂದು ವಿಚಾರ ಅಂದರೆ ಈತ ಫೈಜರ್​ ಲಸಿಕೆಯ ಮೂರು ಡೋಸ್​ಗಳನ್ನು ಸ್ವೀಕರಿಸಿದ್ದಾನೆ ಎನ್ನಲಾಗಿದೆ. ನವೆಂಬರ್​ 9ರಂದು ಮುಂಬೈಗೆ ಮರಳಿದ್ದ ಈತನಿಗೆ ಕೋವಿಡ್​ ಪರೀಕ್ಷೆಯಲ್ಲಿ ನಡೆಸಿದ ವೇಳೆಯಲ್ಲಿ ಸೋಂಕು ಇರುವುದು ಧೃಡವಾಗಿತ್ತು. ಬಳಿಕ ಈ ವ್ಯಕ್ತಿಯ ಸ್ಯಾಂಪಲ್​ಗಳನ್ನು ಜಿನೋಮ್​ ಸಿಕ್ವೆನ್ಸಿಂಗ್​​ಗೆ ಕಳುಹಿಸಲಾಗಿದೆ. ಈ ವೇಳೆಯಲ್ಲಿ ಈತನಿಗೆ ಓಮಿಕ್ರಾನ್​ ರೂಪಾಂತರಿ ಇರುವುದು ಪತ್ತೆಯಾಗಿದೆ.

ಅದೃಷ್ಟವಶಾತ್​ ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ದಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಸೋಂಕು ನೆಗೆಟಿವ್​ ಬಂದಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಈವರೆಗೆ 15 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಮೂವರು ಮುಂಬೈ ಹೊರಗಿನವರಾಗಿದ್ದಾರೆ. ಇದರಲ್ಲಿ 13 ರೋಗಿಗಳು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅದೃಷ್ಟ ವಶಾತ್​ ಈವರೆಗೆ ಮುಂಬೈ ನಗರದಲ್ಲಿ ಪತ್ತೆಯಾದ 15 ಒಮಿಕ್ರಾನ್​ ಪ್ರಕರಣಗಳಲ್ಲಿ ಯಾರೊಬ್ಬರ ಸ್ಥಿತಿಯೂ ಗಂಭೀರವಾಗಿರಲಿಲ್ಲ ಎಂದು ಬೃಹನ್​ ಮುಂಬೈ ಮಹಾನಗರದ ಪಾಲಿಕೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಓಮಿಕ್ರಾನ್ ಸ್ಪೋಟ : ಮತ್ತೆ ಐವರಿಗೆ ಮಾರಣಾಂತಿಕ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಭೀತಿ, ಓಮಿಕ್ರಾನ್ ಭೀತಿ ಆತಂಕ ಹೆಚ್ಚುತ್ತಿರುವಾಗಲೇ ರಾಜ್ಯದಲ್ಲಿ ಓಮಿಕ್ರಾನ್ ಸ್ಪೋಟಗೊಂಡಿದೆ. ಒಂದೇ ದಿನ ಐದು ಪ್ರಕರಣಗಳು ದಾಖಲಾಗಿವೆ. ಸ್ವತಃ ಆರೋಗ್ಯ ಸಚಿವ ಡಾ.ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದು ಮಾಹಿತಿ ನೀಡಿದ್ದಾರೆ. ಯುಕೆಯಿಂದ ಹಿಂತಿರುಗಿದ 19 ವರ್ಷದ ಪುರುಷ, ದೆಹಲಿಯಿಂದ ಆಗಮಿಸಿದ 36 ವರುಷದ ಪುರುಷ, ದೆಹಲಿಯಿಂದ ಆಗಮಿಸಿದ 70 ವರ್ಷದ ಮಹಿಳೆ ಹಾಗೂ ನೈಜಿರಿಯಾದಿಂದ ಬಂದ 52 ವರ್ಷದ ಪುರುಷ ಹಾಗೂ ಸೌತ್ ಅಫ್ರಿಕಾದಿಂದ ಬಂದ 33 ವರ್ಷದ ಪುರುಷನಿಗೆ ಓಮಿಕ್ರಾನ್ ಸೋಂಕು ತಗುಲಿದೆ.

ಕಳೆದ ಎರಡು ತಿಂಗಳಿನಿಂದ ಸಾವಿರಾರು ಜನರು ನಗರಕ್ಕೆ ಆಗಮಿಸಿದ್ದಾರೆ. ಈ ಪೈಕಿ ಹೈ ರಿಸ್ಕ್ ದೇಶಗಳಿಂದ ಆಗಮಿಸಿದವರ ಮೇಲೆ ಕಣ್ಣಿಡಲಾಗಿತ್ತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರು ಹಂತಗಳಲ್ಲಿ ತಪಾಸಣೆಗೊಳಪಡಿಸಿ ಕೊರೋನಾ ಟೆಸ್ಟ್ ನಡೆಸಿ ಹೊರಬಿಡಲಾಗುತ್ತಿತ್ತು.ಈ ಪೈಕಿ ಕೊರೋನಾ ಸೋಂಕು ಕಂಡುಬಂದವರನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಐವರಿಗೆ ಒಮಿಕ್ರಾನ್ ಸೋಂಕು ಧೃಡಪಟ್ಟಿದೆ. ಈ ಪೈಕಿ ಇಬ್ಬರು ದೆಹಲಿಯಿಂದ ಆಗಮಿಸಿದವರಾಗಿದ್ದು ಉಳಿದವರು ಹೈರಿಸ್ಕ್ ದೇಶದಿಂದ ಬೆಂಗಳೂರಿಗೆ ಬಂದಿದ್ದರು.

ಸರ್ಕಾರದ ನಿಯಮದಂತೆ ಓಮಿಕ್ರಾನ್ ಸೋಂಕಿತರನ್ನು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸೋಂಕಿತರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ಈ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರು ಯಾರು, ಅವರಲ್ಲಿ ಯಾರಿಗಾದರೂ ಕೊರೋನಾ ಅಥವಾ ಓಮಿಕ್ರಾನ್ ತಗುಲಿದ್ಯಾ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಅಲ್ಲದೇ ದೆಹಲಿಯಿಂದ ಆಗಮಿಸಿದವರಿಗೆ ಕೊರೋನಾ ಟೆಸ್ಟ್ ಕಡ್ಡಾಯವಾಗಿರಲಿಲ್ಲ. ಹೀಗಾಗಿ ಈ ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು ದೆಹಲಿಯಿಂದ ಬಂದ ಸೋಂಕಿತರು ಎಲ್ಲೆಲ್ಲಿ ಓಡಾಡಿದ್ದಾರೋ ಎಂಬ ಸಂದೇಹ ಜನರಲ್ಲಿ ಮೂಡಿದೆ. ಆದರೆ ಕೇಸ್ ಬಗ್ಗೆ ಸರ್ಕಾರವಾಗಲಿ,ಆರೋಗ್ಯ ಸಚಿವರಾಗಲಿ ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಇಂದಿನ ಐದು ಪ್ರಕರಣಗಳ ಮೂಲಕ ಒಟ್ಟು ಕರ್ನಾಟಕದಲ್ಲಿ 8 ಪ್ರಕರಣಗಳು ದಾಖಲಾದಂತಾಗಿದೆ. ಈಗಾಗಲೇ ನಗರದಲ್ಲಿ ಸರ್ಕಾರ ಓಮಿಕ್ರಾನ್ ಚಿಕಿತ್ಸೆಗಾಗಿ ಎರಡು ಸರ್ಕಾರಿ ಆಸ್ಪತ್ರೆಗಳನ್ನು ಗುರುತಿಸಿದ್ದು ಒಟ್ಟು 320 ಹಾಸಿಗೆಗಳನ್ನು ಮೀಸಲಿರಿಸಿದೆ.

ಇದನ್ನು ಓದಿ: 156 Kidney Stones From A Single Patient : ವ್ಯಕ್ತಿಯೊಬ್ಬನ ಮೂತ್ರಪಿಂಡದಿಂದ ಬರೊಬ್ಬರಿ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು ..!

ಇದನ್ನೂ ಓದಿ : Gen Bipin Rawat :ಸೋಶಿಯಲ್​ ಮೀಡಿಯಾದಲ್ಲಿ ಜನರಲ್​ ಬಿಪಿನ್​ ರಾವತ್​​ರಿಗೆ ಅಪಮಾನ ಮಾಡಿದ್ದ ಮಹಿಳೆಗೆ ಜಾಮೀನು

Mumbai man tests positive for Omicron variant after taking three doses of Pfizer vaccine

Comments are closed.