ಸೋಮವಾರ, ಜೂನ್ 16, 2025
HomeCinemaಕೊನೆಗೂ ಬಹುದಿನಗಳ ಕನಸನ್ನು ನನಸು ಮಾಡಿಕೊಂಡ ಕಿರಿಕ್ ಬೆಡಗಿ ರಶ್ಮಿಕಾ

ಕೊನೆಗೂ ಬಹುದಿನಗಳ ಕನಸನ್ನು ನನಸು ಮಾಡಿಕೊಂಡ ಕಿರಿಕ್ ಬೆಡಗಿ ರಶ್ಮಿಕಾ

- Advertisement -

ಸ್ಯಾಂಡಲ್ ವುಡ್ ನ ಕಿರಿಕ್ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣ ಈಗಂತೂ ಬಹು ಬೇಡಿಕೆಯ ನಟಿ..ಸ್ಯಾಂಡಲ್ ವುಡ್ ಮಾತ್ರವಲ್ದೆ ಟಾಲಿವುಡ್, ಬಾಲಿವುಡ್ ನಲ್ಲೂ ರಶ್ಮಿಕ ಹೆಸ್ರು ಸದ್ದು ಮಾಡೋಕೆ ಶುರುಮಾಡಿದೆ. ಹೊಸ ಹೊಸ ಸಿನಿಮಾ ಗಳನ್ನು ಒಂದರಮೇಲೊಂದು ಒಪ್ಪಿಕೊಳ್ಳುತ್ತಾ ಬಂದಿರುವ ಈ ಬೆಡಗಿ ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡುತ್ತಲೇ ಇದ್ದಾರೆ.

Rashmika 2
(adsbygoogle = window.adsbygoogle || []).push({});

ಹೌದು, ಕನ್ನಡದ ಚೆಲುವೆ ಹೈದರಾಬಾದ್ನಲ್ಲಿ ಮನೆ ಕೊಂಡುಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಈಗ ತೆಲುಗಿನಲ್ಲಿ ಸಿಕ್ಕಾಪಟ್ಟೆ ಅವಕಾಶಗಳು ಇರುವುದರಿಂದ ಹೈದರಾಬಾದ್ನಲ್ಲೇ ನಟಿ ರಶ್ಮಿಕಾ ವಾಸ ಮಾಡುವುದಕ್ಕೆ ಯೋಚನೆ ಮಾಡಿಕೊಂಡಿದ್ದರಂತೆ.

Rashmika 1
(adsbygoogle = window.adsbygoogle || []).push({});

ಹೈದರಾಬಾದ್ನ ಜನರು ನನ್ನನ್ನು ಮನೆ ಮಗಳಂತೆ ಪ್ರೀತಿಸುತ್ತಾರೆ.ಈ ನಗರವೆಂದರೆ ನನಗೆ ಇಷ್ಟ. ಹಾಗಾಗಿ ಇಲ್ಲೊಂದು ಮನೆ ಮಾಡುವ ಆಲೋಚನೆ ಇದೆ ಎಂದು ಹೇಳಿಕೊಂಡಿದ್ದ ಈ ನಟಿ, ಇದೀಗ ಹೈದರಾಬಾದ್ನ ಗಚ್ಚಿಬೌಲಿ ಏರಿಯಾದಲ್ಲಿ ಐಷಾರಾಮಿ ಮನೆ ಖರೀದಿಸಿದ್ದಾರೆ.

851263 Rashmika Mandanna Anti Kannada

ಆದ್ರೆ ಮನೆ ಖರೀದಿಸಿ ಸ್ವಲ್ಪ ಸಮಯದಲ್ಲೇ ಅಭಿಮಾನಿಗಳೊಂದಿಗೆ ಮತ್ತೊಂದು ಸಂತಸದ ವಿಚಾರವನ್ನೂ ರಶ್ಮಿಕಾ ಶೇರ್ ಮಾಡಿದ್ದಾರೆ. ಹೌದು, ತಮ್ಮ ಕನಸಿನ ಐಷಾರಾಮಿ ಕಾರು ಖರೀದಿ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಮ್ಮ ಹೊಸ ರೇಂಜ್ ರೋವರ್ ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

(adsbygoogle = window.adsbygoogle || []).push({});
Rashmika Mandana E1610077469556

“ನಾನು ಹೆಚ್ಚಾಗಿ ಈ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಯಸುವುದಿಲ್ಲ.. ಆದರೆ ನಾನು ಇದನ್ನು ಈ ಸಮಯದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಮನಃಸ್ಪೂರ್ತಿಯಾಗಿ ಇಷ್ಟ ಪಡುತ್ತೇನೆ. ಏಕೆಂದರೆ ನೀವು ಕೂಡ ಈ ನನ್ನ ಪ್ರಯಾಣದ ಭಾಗವಾಗಿದ್ದೀರಿ. ಹಾಗಾಗಿ ಈ ವಿಚಾರವನ್ನ ನಿಮಗೆ ತಿಳಿಸಬೇಕೆಂದು ಬಯಸುತ್ತೇನೆ.

(adsbygoogle = window.adsbygoogle || []).push({});

ಈ ಪ್ರಯಾಣದ ಭಾಗವಾಗಿದ್ದಕ್ಕಾಗಿ ಮತ್ತು ನಿಮ್ಮಂತೆಯೇ ನನ್ನನ್ನು ಪ್ರೀತಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಮನದಾಳದಿಂದ ಧನ್ಯವಾದಗಳು. ನಿಮ್ಮೆಲ್ಲರನ್ನು ನಾನು ಪ್ರೀತಿಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾರೆ.

Rashmika 7

ಒಟ್ಟಿನಲ್ಲಿ ಬಹುಭಾಷಾ ನಟಿ ರಶ್ಮಿಕಾ ಕನಸು ಒಂದೊಂದಾಗಿ ನೆರವೇರುತ್ತಿದ್ದು, ಅಭಿಮಾನಿಗಳೂ ಈ ಸಂಭ್ರಮದ ವೇಳೆ ಶುಭ ಕೋರಿದ್ದಾರೆ..

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular