ರಾಕಿ ಹಿಟ್ ಲಿಸ್ಟ್ ನಲ್ಲಿ ಏನಿದೆ…?! ಕೆಜಿಎಫ್-2 ಕತೆಯ ಕ್ಲೂ ಕೊಟ್ಟ ಕೆಜಿಎಫ್ ಟೈಂಮ್ಸ್..!!

ಕೆಜಿಎಫ್ ಸಾಮ್ರಾಜ್ಯದ ಮೂಲಕ ಕನ್ನಡ ಸಿನಿಇತಿಹಾಸದಲ್ಲಿ ಹೊಸ ಶಕೆ ಬರೆದ ರಾಕಿಂಗ್ ಸ್ಟಾರ್ ಯಶ್ ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ನಾಯಕ ನಟನ ಹುಟ್ಟುಹಬ್ಬವನ್ನು ಸಂಭ್ರಮಿಸೋಕೆ ಒಂದು ವಾರದಿಂದ ಸಿದ್ಧತೆ ನಡೆಸಿರುವ ಚಿತ್ರತಂಡ ನಾಳೆ ಟೀಸರ್ ರಿಲೀಸ್ ಗೆ ಮುಂದಾಗಿದೆ. ಅದಕ್ಕು ಮುನ್ನ ಅಭಿಮಾನಿಗಳಿಗಾಗಿ ಕೆಜಿಎಫ್-2 ನ ಕೆಜಿಎಫ್ ಟೈಂ ಅಂತಿಮ ಆವೃತ್ತಿ ಪ್ರಕಟಿಸಿದೆ.

ಕೆಜಿಎಫ್-2 ನಿರ್ದೇಶಕ ಒನ್ ಡೇ ಟೂ ಗೋ ಎಂಬ ತಲೆಬರಹದಡಿ ಕೆಜಿಎಫ್ ಟೈಂನ ಅಂತಿಮ ಆವೃತ್ತಿ ಎಂದು ಕಪ್ಪುಬಿಳುಪು ಪತ್ರಿಕೆಯನ್ನು ಪ್ರಕಟಿಸಿದ್ದು, ರಾಕಿಯ ಹಿಟ್ ಲಿಸ್ಟ್ ನಲ್ಲಿ ಮುಂದಿನವರು ಯಾರು? ಎಂಬ ತಲೆಬರಹ ನೀಡಲಾಗಿದೆ.

ಪ್ರತಿಯೊಬ್ಬರಿಗೂ ತಮ್ಮದೇ ಆದ  ಉದ್ದೇಶವಿದೆಯೇ ಎಂದು ಪ್ರಶ್ನಿಸುವ ಹೆಡ್ಡಿಂಗ್ ಪ್ರಕಟಿಸಲಾಗಿರುವ ಪತ್ರಿಕೆಯಲ್ಲಿ ಎಲ್ಲ ಪಾತ್ರದಾರಿಗಳ ಪೋಟೋ ಕೂಡ ಹಾಕಲಾಗಿದೆ.

ರಾಕಿ ಗರುಡನನ್ನು ಮಾರಿ ಜಾತ್ರೆಯಲ್ಲಿ ಕೊಂದ ನಂತರ ಎಲ್ಲರ ಕಣ್ಣು ಕೆಜಿಎಫ್ ಮೇಲಿದೆ. ಅದರ ಮೇಲೆ ಹಿಡಿತ ಸಾಧಿಸಲು ಯಾರ್ಯಾರ ಪ್ರಯತ್ನ ಹೇಗೆ ನಡೆಯಲಿದೆ. ಆಂಡ್ರ್ಯೂಸ್ , ಕಮಲ್,ರಾಜೇಂದ್ರ ದೇಸಾಯಿ,ದಯಾ ರಾಕಿಯೊಂದಿಗೆ ಕೈ ಜೋಡಿಸುತ್ತಾರಾ? ಅಥವಾ ಚೂರಿ ಹಾಕುತ್ತಾರಾ?  ಎಂದು ಪ್ರಶ್ನಿಸುವ ಮೂಲಕ ಕತೆಯ ಲೀಡ್ ನೀಡಲಾಗಿದ್ದು, ಕೆಜಿಎಫ್-2 ಕತೆ ಇದರ ಸುತ್ತವೇ ನಡೆಯಲಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.

https://twitter.com/prashanth_neel/status/1347113175372632064?s=19

ಇದಲ್ಲದೇ, ರಾಜಕೀಯದ ಸಮ್ಮಿಶ್ರ ಶಕ್ತಿಗಳಾದ ಗುರುಪಾಂಡಿಯನ್ ಹಾಗೂ ರಮೀಕಾ ಸೇನ್,ನರಾಚಿಯ ಗುಲಾಮರ ಪ್ರಾಣ ಉಳಿಸುತ್ತಾರಾ ಅಥವಾ ತಮ್ಮದೇ ವೈಯಕ್ತಿಕ ದಾಳ ಉರುಳಿಸುತ್ತಾರಾ ಎಂಬ ಕತೆಯ ಟ್ವಿಸ್ಟ್ ಗಳನ್ನು ಪ್ರಕಟಿಸಲಾಗಿದೆ.

ಈ ಎಲ್ಲ ಪೋಸ್ಟರ್ ಗಳು ಕೆಜಿಎಫ್-2 ಬಗೆಗಿನ ಪ್ರೇಕ್ಷಕರು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದು, ಚಿತ್ರ ಯಾವಾಗ ತೆರೆಗೆ ಬರಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ನಾಳೆ ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ  ಬೆಳಗ್ಗೆ 10.18 ಕ್ಕೆ ಕೆಜಿಎಫ್-2 ಟೀಸರ್ ರಿಲೀಸ್ ಆಗಲಿದೆ.

ಚಿತ್ರದ ಬಗ್ಗೆ ಒಂದೊಂದೆ ಅಪ್ಡೇಟ್ ಗಳನ್ನು ತಮ್ಮ ಟ್ವೀಟರ್ ಮೂಲಕ ಪ್ರಕಟಿಸುತ್ತಲೇ ಇರುವ ನಿರ್ದೇಶಕ ಪ್ರಶಾಂತ್ ನೀಲ್ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದು, ನಾಳೆ ಬಿಡುಗಡೆಯಾಗುವ ಕೆಜಿಎಫ್-2 ಟೀಸರ್ ಹೊಸ ದಾಖಲೆ ಬರೆಯುವ ನೀರಿಕ್ಷೆ ಇದೆ.

Comments are closed.