ಕನ್ನಡ ಸಿನಿಮಾರಂಗದಲ್ಲಿ ರಶ್ಮಿಕಾ ಮಂದಣ್ಣ ಬ್ಯಾನ್ (Rashmika Mandanna Ban)ಮಾಡುವುದಾಗಿ ಒಂದಷ್ಟು ಸುದ್ದಿಗಳು ಹರಿದಾಡಿದವು. ಕಳೆದ ಒಂದು ವಾರದಿಂದ ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಕುರಿತು ನಟಿ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದು, “ನನ್ನನ್ನು ಯಾರು ಬ್ಯಾನ್ ಮಾಡಿಲ್ಲ, ಇದೆಲ್ಲಾ ಸುಳ್ಳು ಪ್ರಚಾರ ಎಂದಿದ್ದಾರೆ”.
ನಟಿ ರಶ್ಮಿಕಾ ಮಂದಣ್ಣ ಪದೇ ಪದೇ ಟ್ರೋಲ್‌ಗೆ ಗುರಿ ಆಗುತ್ತಿದ್ದಾರೆ. ಇತ್ತೀಚೆಗೆ ‘ಕಾಂತಾರ’ ಇನ್ನೂ ನೋಡಿಲ್ಲ ಎಂದಿದ್ದು, ಸಂದರ್ಶನದಲ್ಲಿ ಪರಂವಃ ಸ್ಟುಡಿಯೋಸ್ ಹೆಸರು ಹೇಳದೇ ಕೈ ಸನ್ನೆ ಮಾಡಿದ್ದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ರಶ್ಮಿಕಾ ಮಂದಣ್ಣ ಸಿನಿಮಾಗಳನ್ನು ನೋಡಬಾರದು. ಆಕೆಯ ಸಿನಿಮಾಗಳು ರಾಜ್ಯದಲ್ಲಿ ಬಿಡುಗಡೆ ಆಗುವುದು ಬೇಡ, ಆಕೆಯನ್ನು ಬ್ಯಾನ್ ಮಾಡಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ನಿನ್ನೆ(ಡಿಸೆಂಬರ್ 8) ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಶ್ಮಿಕಾ ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
“ಯಾರೋ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇದರಲ್ಲಿ ಸತ್ಯಾಂಶ ಇಲ್ಲ. ಅವರು ಏನು ಹೇಳುತ್ತಿದ್ದಾರೆ ಅದು ಸರಿನೋ ತಪ್ಪೋ ಎನ್ನುವುದನ್ನು ಅವರ ವಿವೇಚನೆಗೆ ಬಿಡುತ್ತೇನೆ” ಎಂದು ರಶ್ಮಿಕಾ ಎಂದಿದ್ದಾರೆ. ರಶ್ಮಿಕಾ ಮಂದಾಣ್ಣ ಬ್ಯಾನ್ ಮಾಡಬೇಕು ಎನ್ನುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ಆದ ಚರ್ಚೆ ಅಷ್ಟೆ. ಸಿನಿರಂಗದಿಂದ ಯಾರು ಈ ಮಾತನ್ನು ಹೇಳಿಲ್ಲ. ಇದೇ ವಿಚಾರವನ್ನು ರಶ್ಮಿಕಾ ಕೂಡ ಹೇಳಿದ್ದಾರೆ. ‘ಕನ್ನಡ ಸಿನಿರಂಗದಿಂದ ನನ್ನನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳುತ್ತಿರುವ ಸುದ್ದಿಯಲ್ಲಿ ವಾಸ್ತವ ಇಲ್ಲ. ಈವರೆಗೆ ಇಂತಹ ವಿಚಾರ ನನ್ನ ಬಳಿಗೆ ಬಂದಿಲ್ಲ” ಎಂದಿದ್ದಾರೆ.
ಪರಭಾಷೆ ಸಿನಿರಂಗದಲ್ಲಿ ಸಕ್ಸಸ್ ಸಿಕ್ಕಿದ ಕೂಡಲೇ ರಶ್ಮಿಕಾ ಕನ್ನಡ ಸಿನಿಮಾಗಳನ್ನು, ಕನ್ನಡ ಸಿನಿರಂಗವನ್ನು ಮರೆತುಬಿಟ್ಟರು. ಹತ್ತಿದ ಏಣಿಯನ್ನು ಒದ್ದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ ‘ಕನ್ನಡ ಸಿನಿಮಾಗಳ ಬಗ್ಗೆ ನನಗೆ ಯಾವಾಗಲೂ ಪ್ರೀತಿ ಇದ್ದೇ ಇರುತ್ತದೆ. ವಾಸ್ತವ ತಿಳಿದುಕೊಳ್ಳದೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಕಾಂತಾರ” ಸಿನಿಮಾ ನೋಡಿಲ್ಲ ಎಂದು ರಶ್ಮಿಕಾ ಹೇಳಿದ್ದು ಕೆಲವರು ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ”ಕಾಂತಾರ” ಬಿಡುಗಡೆಯಾದ ಎರಡು ದಿನಕ್ಕೆ ಸಿನಿಮಾ ನೋಡಿದ್ರಾ? ಎಂದು ಕೇಳಿದ್ದರು. ನೋಡಿರಲಿಲ್ಲ. ಅದಕ್ಕೆ ಸರಿಯಾಗಿ ಸ್ಪಂದಿಸಿರಲಿಲ್ಲ. ಆ ನಂತರ ಸಿನಿಮಾ ನೋಡಿ ಸಿನಿತಂಡಕ್ಕೆ ಮೆಸೇಜ್ ಮಾಡಿದ್ದೆ. ಅವರು ಥ್ಯಾಂಕ್ಯೂ ಎಂದು ರಿಪ್ಲೇ ಮಾಡಿದ್ದರು’ ಎಂದಿದ್ದಾರೆ.
ಇದನ್ನೂ ಓದಿ : Shivanna in Tamil Movie: ಕಾಲಿವುಡ್ ಗೆ ಎಂಟ್ರಿ ಕೊಟ್ಟ ಶಿವಣ್ಣ; ಧನುಷ್ ಅಣ್ಣನ ಪಾತ್ರದಲ್ಲಿ ಮಿಂಚಲಿದ್ದಾರೆ ಹ್ಯಾಟ್ರಿಕ್ ಹೀರೋ
ಇದನ್ನೂ ಓದಿ : Yash Radhika Wedding Anniversary : 6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಯಶ್ ನಟಿ ರಾಧಿಕಾ ಪಂಡಿತ್
ಇದನ್ನೂ ಓದಿ : Tomorrow Release Movies : ನಾಳೆ ಒಂದೇ ದಿನ 18 ಸಿನಿಮಾ ತೆರೆಗೆ : ಸಿನಿಮಾ ಸುನಾಮಿಗೆ ಸಿನಿಪ್ರೇಕ್ಷಕರೇ ತತ್ತರ
ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ‘ನನ್ನ ವೈಯಕ್ತಿಕ ವಿಚಾರಗಳನ್ನು ಕ್ಯಾಮರಾ ಇಟ್ಟು ಪ್ರಪಂಚಕ್ಕೆ ತೋರಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ನನ್ನ ವೈಯಕ್ತಿಕ ವಿಚಾರಗಳು ಪ್ರಪಂಚಕ್ಕೆ ಬೇಕಾಗಿಲ್ಲ. ವೃತ್ತಿಪರವಾಗಿ ನನ್ನ ಸಿನಿಮಾಗಳ ಬಗ್ಗೆ ಮಾತನಾಡುವುದು ನನ್ನ ಜವಾಬ್ದಾರಿ. ನನ್ನ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದನ್ನೆಲ್ಲಾ ಅವರ ವಿವೇಚನೆಗೆ ಬಿಡುತ್ತೇನೆ’ ಎಂದು ರಶ್ಮಿಕಾ ಹೇಳಿದ್ದಾರೆ.
Rashmika Mandanna Ban : Who hasn’t banned me : Has love for Kannada cinema