Vijayananda: ವಿಜಯ್‌ ಸಂಕೇಶ್ವರ್‌ ಜೀವನಾಧಾರಿತ ಚಿತ್ರ ವಿಜಯಾನಂದ ಬಿಡುಗಡೆ

(Vijayananda) ವಿಜಯಾನಂದ ಚಿತ್ರ ತಾರಗಣದಿಂದಲೇ ಜನರಲ್ಲಿ ಅತಿ ಕುತೂಹಲ ಮೂಡಿಸಿತ್ತು. ಈ ಚಿತ್ರವು ಕನ್ನಡ ಚಿತ್ರರಂಗದ ದಿಗ್ಗಜರು ಮತ್ತು ಹೊಸ ಪ್ರತಿಭೆಗಳ ಸಮ್ಮಿಲನವಾಗಿದೆ. ವಿಆರ್‌ ಎಲ್‌ ಅಮೂಹ ಸಂಸ್ಥೆಗಳ ಚೇರ್ಮನ್‌ ಆದ ಡಾ.ವಿಜಯ್‌ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ ವಿಜಯಾನಂದ ಆಗಿದೆ. ಕನ್ನಡಿಗರೇ ನಿರ್ಮಿಸಿರುವ ಸಾಧಕನ ಕುರಿತು ಮೊಟ್ಟ ಮೊದಲ ಬಯೋಪಿಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ.

ವಿಜಯಾನಂದ(Vijayananda) ಚಿತ್ರ ಪ್ರಾರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಚಿತ್ರದ ಟೀಸರ್‌, ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಟ್ರೇಲರ್‌ ಕೂಡ ಯುಟ್ಯೂಬ್‌ ನಲ್ಲಿ ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ಸದ್ದು ಮಾಡಿತ್ತು. ಇಂದು ಕನ್ನಡ, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲಿ ಸಾವಿರದ ಮುನ್ನೂರಕ್ಕೂ ಹೆಚ್ಚು ಸ್ಕ್ರೀನ್‌ ಗಳ ಮೇಲೆ ವಿಜಯಾನಂದ ಚಿತ್ರ ತೆರೆಕಾಣಲಿದೆ.

ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಆನಂದ ಸಂಕೇಶ್ವರ ನಿರ್ಮಿಸಿರುವ ಈ ಚಿತ್ರಕ್ಕೆ ಟ್ರಂಕ್‌ ಖ್ಯಾತಿಯ ರಿಷಿಕಾ ಶರ್ಮಾ ನಿರ್ದೇಶನ ಮಾಡಿದ್ದಾರೆ. ದಕ್ಷಿಣ ಭಾರತದ ಹೆಸರಾತ ಸಂಗೀತ ನಿರ್ದೇಶಕ ಗೋಪಿ ಸುಂದರ್‌ ಸಂಗೀತ ನೀಡಿದ್ದು, ಕೀರ್ತನ್‌ ಪೂಜಾರಿ ಅವರ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬಂದಿದೆ.

ವಿಜಯಾನಂದ ಚಿತ್ರದಲ್ಲಿ ವಿಜಯ್‌ ಸಂಕೇಶ್ವರ್‌ ಪಾತ್ರದಲ್ಲಿ ನಿಹಾಲ್‌ ರಜಪೂತ್‌ ಅವರು ಅಭಿನಯಿಸಿದ್ದು, ಸಿರಿ ಪ್ರಹ್ಲಾದ್‌, ಅನಂತ್‌ ಅನಗ್‌, ವಿನಯಾ ಪ್ರಸಾದ್‌, ಭರತ್‌ ಭೂಪಣ್ಣ, ಅರ್ಚನಾ ಕೊಟ್ಟಿಗೆ ಹಾಗೂ ರವಿಚಂದ್ರನ್‌ ಅವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ :Yash Radhika Wedding Anniversary : 6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಯಶ್‌ ನಟಿ ರಾಧಿಕಾ ಪಂಡಿತ್‌

ಇದನ್ನೂ ಓದಿ : Shivanna in Tamil Movie: ಕಾಲಿವುಡ್ ಗೆ ಎಂಟ್ರಿ ಕೊಟ್ಟ ಶಿವಣ್ಣ; ಧನುಷ್ ಅಣ್ಣನ ಪಾತ್ರದಲ್ಲಿ ಮಿಂಚಲಿದ್ದಾರೆ ಹ್ಯಾಟ್ರಿಕ್ ಹೀರೋ

(Vijayananda) Vijayananda’s film was very interesting to the people. The film is a combination of Kannada film stalwarts and new talent. Vijayananda is a film based on the life of Dr. Vijay Sankeshwara, the Chairman of VRL Amoha Corporations. This is the much awaited movie which has earned the distinction of being the first biopic on a Sadhaka produced by Kannadigas themselves.

Comments are closed.