Rashmika Mandanna : ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಗೀತ ಗೋವಿಂದಂ ಬೆಡಗಿ ಭಾನುವಾರ ಆತ್ಮೀಯ ಸ್ನೇಹಿತರ ಮದುವೆಯಲ್ಲಿ ಕಾಣಿಸಿಕೊಂಡರು. ಸ್ನೇಹಿತೆಯ ಮದುವೆ ಫೋಟೋಗಳನ್ನು ನಟಿ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಸಮಾರಂಭಕ್ಕೆ ರಶ್ಮಿಕಾ ಮಂದಣ್ಣ ಕೊಡವರ ಶೈಲಿಯಲ್ಲಿ ಸೀರೆ ಧರಿಸಿದ್ದಾರೆ.
ಸ್ಟಡ್ ಕಿವಿಯೋಲೆ, ವಾಚ್ , ಸ್ಟೇಟ್ಮೆಂಟ್ ಚಿನ್ನದ ನೆಕ್ಲೇಸ್ನ್ನು ಕೊಡವರ ಸೀರೆಯ ಜೊತೆ ಧರಿಸಿದ್ದ ನಟಿ ರಶ್ಮಿಕಾ ಸಖತ್ ಕ್ಯೂಟ್ ಆಗಿ ಕಂಡಿದ್ದಾರೆ. ಎತ್ತರದ ಪೋನಿ ಟೇಲ್ ಹಾಕುವ ಮೂಲಕ ಅತ್ಯಂತ ಸರಳವಾಗಿ ಕೇಶ ವಿನ್ಯಾಸ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ರಶ್ಮಿಕಾ ಬಹಳ ಸಮಯದ ಬಳಿಕ ನಾನು ಬಾಲ್ಯದ ಸ್ನೇಹಿತೆಯರನ್ನು ಭೇಟಿಯಾಗಿದ್ದೇನೆ. ಅಲ್ಲದೇ ತಾನು 4 ಗಂಟೆಯ ವಿಮಾನವನ್ನು ಮಿಸ್ ಮಾಡಿಕೊಂಡ ಬಳಿಕ ಮದುವೆ ಕಾರ್ಯಕ್ರಮಕ್ಕೆ ಬಂದು ತಲುಪಲು ಏನೆಲ್ಲ ಹರಸಾಹಸ ಪಟ್ಟೆ ಎಂಬುದನ್ನೂ ವಿವರಿಸಿದ್ದಾರೆ.
ನನ್ನ ಸ್ನೇಹಿತೆ ರಾಗಿಣಿ ಮುದ್ದಯ್ಯ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾಳೆ. ಆಕೆಯ ಜೊತೆ ನನ್ನ ಇಂದಿನ ಫೋಟೋಗಳಿಲ್ಲ. ಆದರೆ ನಾನು ಇವುಗಳಲ್ಲಿ ಯಾವುದೇ ಕ್ಷಣವನ್ನೂ ಮಿಸ್ ಮಾಡಿಕೊಳ್ಳಲು ಬಯಸಿಲ್ಲ. ನಾಲ್ಕು ಗಂಟೆಯ ವಿಮಾನ ಮಿಸ್ ಆದ ಬಳಿಕ ನಾಲ್ಕರಿಂದ ಐದು ಸಲ ವಿಮಾನ ವಿಳಂಬಗೊಂಡ ಬಳಿಕವೂ ನಾನು ದೇವರ ದಯೆಯಿಂದ ಅವಳ ಮದುವೆಗೆ ಆಗಮಿಸಿದ್ದೇನೆ. ಈಕೆ ಎಷ್ಟು ಸುಂದರವಾಗಿ ಕಾಣುತ್ತಿದ್ದಾಳೆ. ಇವರನ್ನೆಲ್ಲ ನಾನು ಕಳೆದ 17 ವರ್ಷಗಳಿಂದ ನೋಡುತ್ತಿದ್ದೇನೆ. ಆದರೆ ಏನೂ ಬದಲಾವಣೆಯಾಗಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ಇದನ್ನು ಓದಿ : KL Rahul, Rohit Sharma :ಕೆಎಲ್ ರಾಹುಲ್, ರೋಹಿತ್ ಶರ್ಮಾ ವಿಶ್ರಾಂತಿ; ದಕ್ಷಿಣ ಆಫ್ರಿಕಾ ಟಿ20ಗೆ ಟೀಂ ಇಂಡಿಯಕ್ಕೆ ನೂತನ ನಾಯಕ
ಇದನ್ನೂ ಓದಿ : Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ
Rashmika Mandanna looks stunning as she dons silk saree in Coorgi style during a friend’s wedding