eating meat at dattapeetha : ದತ್ತಪೀಠದಲ್ಲಿ ಮಾಂಸಾಹಾರ ಸೇವನೆ : ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕಮಗಳೂರು : eating meat at dattapeetha : ವಿವಾದಿತ ಜಾಗವಾದ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಶ್ರೇಣಿಯ ದತ್ತ ಪೀಠದಲ್ಲಿ ಹೋಮ – ಹವನ ನಡೆಯುವ ಸ್ಥಳದಲ್ಲಿ ಸಮುದಾಯವೊಂದರ ಜನರು ಮಾಂಸಾಹಾರ ಸೇವನೆ ಮಾಡಿರುವ ಆರೋಪವು ಕೇಳಿ ಬಂದಿದ್ದು ವಿವಾದದ ಕಿಡಿ ಹೊತ್ತಿ ಉರಿದಿದೆ. ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಈ ಕೃತ್ಯ ಎಸಗಿರುವುದು ಹಿಂದೂ ಪರ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ. ದತ್ತಾತ್ರೇಯ ಪೀಠದಲ್ಲಿ ಮಾಂಸಾಹಾರ ಸೇವನೆ ಮಾಡುತ್ತಿರುವ ವಿಡಿಯೋ ಕೂಡ ವೈರಲ್​ ಆಗಿದ್ದು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿವೆ.


ಕೋರ್ಟ್ ಆದೇಶವನ್ನು ಉಲ್ಲಂಘಿಸಿರುವ ಸಮುದಾಯದ ಜನತೆ ದತ್ತ ಪೀಠದ ಗೋರಿಗಳಿಗೆ ಪೂಜೆಗಳನ್ನು ಮಾಡಿ ಅದೇ ಸ್ಥಳದಲ್ಲಿಯೇ ತಾತ್ಕಾಲಿಕ ಶೆಡ್​ ನಿರ್ಮಿಸಿ ಮಾಂಸಾಹಾರ ಸೇವನೆ ಮಾಡಿದ್ದಾರೆ. ಈ ಸಂಬಂಧ ಹಿಂದೂಪರ ಸಂಘಟನೆಯ ಮುಖಂಡರು ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.


ಪವಿತ್ರ ಸ್ಥಳದಲ್ಲಿ ಮಾಂಸವನ್ನು ಬೇಯಿಸುವ ಮೂಲಕ ಈ ಸ್ಥಳಕ್ಕೆ ಅಪಚಾರ ಎಸಗಲಾಗಿದೆ. ದತ್ತ ಪೀಠದಲ್ಲಿ ಈಗ ಹೋಮದ ಹೊಗೆಯಾಡುತ್ತಿಲ್ಲ. ಮಾಂಸದ ಹೊಗೆಯಾಡುತ್ತಿದೆ. ಮುಂದಿನ ದತ್ತ ಜಯಂತಿಯ ಹೋಮವನ್ನು ತಾತ್ಕಾಲಿಕ ಶೆಡ್​ನಲ್ಲಿ ನಾವು ಮಾಡುವುದಿಲ್ಲ. ಗುಹೆ ಸಮೀಪದ ತುಳಸಿಕಟ್ಟೆ ಬಳಿ ಹೋಮ ಮಾಡುತ್ತೇವೆ ಎಂದು ಬಜರಂಗದಳ ಪ್ರಾಂತ್ಯ ಸಂಚಾಲಕ ರಘು ಸಕಲೇಶಪುರ ಹೇಳಿದರು.


ಇಲ್ಲಿ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ. ಆದರೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ದತ್ತ ಪೀಠಕ್ಕೆ ಅಪಚಾರ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ದತ್ತ ಜಯಂತಿಯ ಹೋಮವನ್ನು ನಿಷೇಧಿತ ಜಾಗವಾದ ಗುಹೆಯಲ್ಲಿಯೇ ಮಾಡುತ್ತೇವೆ. ಇದಕ್ಕಾಗಿ ಯಾವುದೇ ವಿರೋಧ ಕಟ್ಟಿಕೊಳ್ಳಲು ಭಜರಂಗದಳ ತಯಾರಿದೆ ಎಂದು ರಘು ಸಕಲೇಶಪುರ ಸವಾಲೆಸೆದರು.

ಇದನ್ನು ಓದಿ : Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ

ಇದನ್ನೂ ಓದಿ : Rashmika Mandanna : ಸ್ನೇಹಿತೆಯ ಮದುವೆಯಲ್ಲಿ ರಶ್ಮಿಕಾ ಮಿಂಚಿಂಗ್​​ : ಕೊಡವರ ಶೈಲಿಯ ಸೀರೆ ಧರಿಸಿದ ಕಿರಿಕ್​ ಬೆಡಗಿ

hindu organisations outrage against allegations of eating meat at dattapeetha

Comments are closed.