BJP leader Suicide Honey trap : ಹನಿಟ್ರ್ಯಾಪ್ ಗೆ ಬಿಜೆಪಿ ಮುಖಂಡ ಬಲಿ : ಡೆತ್ ನೋಟ್ ನಲ್ಲಿ ಬಯಲಾಯ್ತು ಸತ್ಯ

ಬೆಂಗಳೂರು : ಬಿಜೆಪಿ ನಾಯಕರ ಸಿಡಿ ಪ್ರಕರಣಗಳು ತಣ್ಣಗಾಗುವ ಹೊತ್ತಿನಲ್ಲಿ ಬಿಜೆಪಿ ಮುಖಂಡರೊಬ್ಬರ ಹನಿಟ್ರ್ಯಾಪ್ ಪ್ರಕರಣ (BJP leader Suicide Honey trap) ಬೆಳಕಿಗೆ ಬಂದಿದೆ. ಹೇರೋಹಳ್ಳಿ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪತಿಯ ಆತ್ಮಹತ್ಯೆಗೆ ಬ್ಲ್ಯಾಕ್ ಮೇಲ್ ಕಾರಣ ಎಂದು ಆರೋಪಿಸಿ ಅನಂತರಾಜು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಸಚಿವರಿಗೆ ಆಪ್ತರಾಗಿದ್ದ ಬಿಜೆಪಿ ಮುಖಂಡ ಅನಂತರಾಜು ಮೇ 13 ರಂದು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಈ ಪ್ರಕರಣ ಈಗ ಸ್ಪೋಟಕ ತಿರುವು ಪಡೆದುಕೊಂಡಿದೆ. ಅನಂತರಾಜು ಆತ್ಮಹತ್ಯೆಗೆ ಶರಣಾದ ವೇಳೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಅನಂತರಾಜು ಸಾವಿಗೆ‌ಹನಿಟ್ರ್ಯಾಪಿಂಗ್ ಕಾರಣ ಎಂಬುದು ಪತ್ತೆಯಾಗಿದೆ. ಅನಂತರಾಜು ಪತ್ನಿ ಬಿ.ಕೆ.ಸುಮ‌ ಮನೆಯಲ್ಲಿ ಅನಂತರಾಜು ಡೆತ್ ನೋಟ್ ಪತ್ತೆಯಾಗಿರುವ ಸಂಗತಿಯನ್ನು ಪೊಲೀಸರ ಗಮನಕ್ಕೆ ತಂದಿದ್ದು, ಕೆ ಆರ್ ಪುರಂನ ರೇಖಾ ವಿನೋದ್ ಹಾಗೂ ಸ್ಪಂದನ ಎಂಬುವವರು ಬ್ಲ್ಯಾಕ್‌ಮೇಲ್ ಮಾಡಿ ತನ್ನ ಪತಿಯನ್ನು ಹಣಕ್ಕಾಗಿ ಪೀಡಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಾರೆ ಎಂದು ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅನಂತರಾಜು ರೇಖಾ ಹಾಗೂ ಸ್ಪಂದನಾ ಜೊತೆಯಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ರೇಖಾ ಹಾಗೂ ಸ್ಪಂದನಾ ಒಂದಿಷ್ಟು ಪೋಟೋ ವಿಡಿಯೋ ಸಂಗ್ರಹಿಸಿಟ್ಟುಕೊಂಡು ಅವುಗಳನ್ನು ತೋರಿಸಿ ಅನಂತರಾಜು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಅಶ್ಲೀಲ ಪೋಟೊಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.‌ ಅವರ ಕಾಟ ತಡೆಯಲಾಗುತ್ತಿಲ್ಲ. ನನ್ನ ಕ್ಷಮಿಸು ಎಂದು ಅನಂತರಾಜು ಪತ್ರದಲ್ಲಿ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಇದೇ ಡೆತ್ ಆಧರಿಸಿ ಅನಂತರಾಜು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅನಂತರಾಜು ಶಾಸಕರು, ಸಚಿವರುಗಳ ಜೊತೆಗೆ ಆಪ್ತವಾಗಿದ್ದು, ಅವರೆಲ್ಲರಿಗೂ ಅನೈತಿಕ ಸಂಬಂಧದ ಪೋಟೋ ಕಳಿಸುವುದಾಗಿ ಬೆದರಿಸಿ ರೇಖಾ‌ ಹಾಗೂ ಸ್ಪಂದನಾ ಬೆದರಿಕೆ ಒಡ್ಡುತ್ತಿದ್ದರು ಎನ್ನಲಾಗಿದೆ. ಬುಸಿನೆಸ್ ಮಾಡ್ತಿದ್ದ ಅನಂತರಾಜು ಸಾಕಷ್ಟು ಭಾರಿ ಈ ಬ್ಲ್ಯಾಕ್ ಮೇಲ್‌ಮಾಡೋ ಹೆಣ್ಣುಮಕ್ಕಳಿಗೆ ಹಣ ನೀಡಿದ್ದರು ಎನ್ನಲಾಗಿದೆ. ಆದರೂ ಅವರ ಕಾಟ ವಿಪರೀತವಾಗಿದ್ದು ಪೋಟೋ ವೈರಲ್ ಮಾಡೋದಾಗಿ ಬೆದರಿಸಿದ್ದರಿಂದ ಅನಂತರಾಜು ಪತ್ನಿ ಹಾಗೂ ಮೂರು ಮಕ್ಕಳನ್ನು ಬಿಟ್ಟು ನೇಣಿಗೆ ಶರಣಾಗಿದ್ದಾರೆ. ಈಗ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ : ಆಗತಾನೆ ಜನಿಸಿದ ಕಂದಮ್ಮನನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಪಾಪಿ ತಾಯಿ!

ಇದನ್ನೂ ಓದಿ : ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಫ್ಲಾಟ್​ನಲ್ಲಿ ಶವವಾಗಿ ಪತ್ತೆ

BJP leader Suicide Honey trap Truth unfolded in death note

Comments are closed.