ಸೋಮವಾರ, ಏಪ್ರಿಲ್ 28, 2025
HomeCinemaRashmika Mandanna : ರಿಲೀಸ್ ಗೆ ರೆಡಿಯಾಯ್ತು ರಶ್ಮಿಕಾ ಬಾಲಿವುಡ್ ಮೂವಿ ಮಿಶನ್ ಮಜ್ನು

Rashmika Mandanna : ರಿಲೀಸ್ ಗೆ ರೆಡಿಯಾಯ್ತು ರಶ್ಮಿಕಾ ಬಾಲಿವುಡ್ ಮೂವಿ ಮಿಶನ್ ಮಜ್ನು

- Advertisement -

ಸಾಲು ಸಾಲು ಸಿನಿಮಾಗಳಲ್ಲಿ ನಟನೆ, ಪುಷ್ಪ ಸಿನಿಮಾದ ಅದ್ಭುತ ಯಶಸ್ಸಿನ ಬಳಿಕ ಸಂಭ್ರಮದಲ್ಲಿದ್ದ ನಟಿ ನ್ಯಾಶನಲ್ ಕ್ರಶ್ ರಶ್ಮಿಕಾ‌ ಮಂದಣ್ಣಗೆ (Rashmika Mandanna) ತೆಲುಗಿನ ಆಡವಾಳ್ಳು ಮೀಕು ಜೋಹರ್ಲು ಸಿನಿಮಾ ಸೋಲು ಚುಚ್ಚಲಾರಂಭಿಸಿತ್ತು. ಹಾಗಿದ್ರೇ ರಶ್ಮಿಕಾ ಅಭಿಮಾನಿಗಳ ಪಾಲಿಗೆ ಬೇಸರ ತರಿಸುತ್ತಿದ್ದಾರಾ ಅಂತ ಅಂದುಕೊಳ್ಳುವಷ್ಟರಲ್ಲಿ ನಟಿ ರಶ್ಮಿಕಾ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಶ್ಮಿಕಾ (Rashmika Mandanna) ನಟನೆಯ ಬಾಲಿವುಡ್ ನ ಚೊಚ್ಚಲ ಸಿನಿಮಾ ಮಿಶನ್ ಮಜ್ನು (mission majnu) ರಿಲೀಸ್ ಡೇಟ್ ಅನೌನ್ಸ್ ಆಗಿದೆ.

2020 ರಲ್ಲಿಯೇ ರಶ್ಮಿಕಾ ಮಂದಣ್ಣ ಬಾಲಿವುಡ್ ಪ್ರವೇಶಿಸಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೇ ಪುಷ್ಪ ಸಿನಿಮಾ ರಿಲೀಸ್ ಗೂ ಮುನ್ನವೇ ರಶ್ಮಿಕಾರ ಚೊಚ್ಚಲ ಬಾಲಿವುಡ್ ಸಿನಿಮಾ ರಿಲೀಸ್ ಆಗಬೇಕಿತ್ತು.‌ಆದರೆ ಕೊರೋನಾ ಎಲ್ಲವನ್ನು ಬದಲಾಯಿಸಿತು. ಹಿಂದೊಮ್ಮೆ ಮಿಶನ್ ಮಜ್ನು ಚಿತ್ರತಂಡ ಸಿನಿಮಾ 2022 ರ ಮೇ 13 ರಂದು ತೆರೆಗೆ ಬರೋದಾಗಿ ಘೋಷಿಸಿತ್ತು.‌ಆದರೆ ಈಗ ರಿಲೀಸ್ ದಿನಾಂಕ ಬದಲಿಸಿದ್ದು 2022 ರ ಜೂನ್ 10 ರಂದು ತೆರೆಗೆ ಬರೋದಾಗಿ ಮಿಶನ್ ಮಜ್ನು ಘೋಷಿಸಿದೆ.

ಈ ಖುಷಿ ಸುದ್ದಿಯನ್ನು ನಟಿ ರಶ್ಮಿಕಾ‌ ಮಂದಣ್ಣ (Rashmika Mandanna) ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಭಾರತ ಹೆಮ್ಮೆ ಪಡುವಂತ ಮಿಶನ್ ಇದು. ಹೇಳದೇ ಉಳಿದ ಇತಿಹಾಸದ ಪುಟದ ಅನುಭವ ಪಡೆಯಲು ನೀವು ಸಜ್ಜಾಗಿ. 2022 ಜೂನ್ 10 ಕ್ಕೆ‌ಮಿಶನ್ ಮಜ್ನು ರಿಲೀಸ್ ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಶಾಂತನು ಬಗ್ಜಿ ನಿರ್ದೇಶನದ ಈ ಸಿನಿಮಾ 2020 ರಲ್ಲಿ ಅನೌನ್ಸ್ ಆಗಿದ್ದು, ಇದನ್ನು ನೈಜ ಘಟನೆ ಅಧಾರಿತ ಸಿನಿಮಾ ಎಂದು ಚಿತ್ರತಂಡ ಬಣ್ಣಿಸಿದೆ‌‌. 2021 ರ ಫೆಬ್ರವರಿಯಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಿತ್ತು. ಆದರೆ ಕೊರೋನಾ ಕಾರಣಕ್ಕೆ ಶೂಟಿಂಗ್ ಸ್ಥಗಿತಗೊಂಡಿತ್ತು.

ಇದನ್ನೂ ಓದಿ : Rakul Preet Singh : ನಟನೆ ಬಿಟ್ಟು ಕಾಂಡೋಮ್‌ ಟೆಸ್ಟ್ ಗೆ ಮುಂದಾದ ನಟಿ ರಕುಲ್ ಪ್ರೀತ್ ಸಿಂಗ್

ಶೂಟಿಂಗ್ ಪೂರ್ತಿಗೊಳಿಸಿದ ಬಳಿಕ ಮಿಶನ್ ಮಜ್ನು ಸಿನಿಮಾ ತಂಡ ಸಖತ್ ಗ್ರ್ಯಾಂಡ್ ಪಾರ್ಟಿ ಕೂಡ ಮಾಡಿತ್ತು. ಇದೀಗ ಸಿನಿಮಾದ ಹೊಸ‌ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಇನ್ನು ರಶ್ಮಿಕಾ ವಿಚಾರಕ್ಕೆ ಬರೋದಾದರೇ ಮಿಶನ್ ಮಜ್ನು ಬಳಿಕ ನಟಿ ರಶ್ಮಿಕಾ‌ ಮಂದಣ್ಣ ಬಿಗ್ ಬೀ ಅಮಿತಾಬ್ ಬಚ್ಚನ್ ಜೊತೆಗೆ ಗುಡ್ ಬೈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಪುಷ್ಪ ಸಿಕ್ವೆನ್ಸ್ ಟೂ ದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ನಟಿ ರಶ್ಮಿಕಾ ಬಾಲಿವುಡ್ ನಲ್ಲಿ ಕರಣ್ ಜೋಹರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಸಂಭಾವನೆ ಬಗ್ಗೆ ಧ್ವನಿ ಎತ್ತಿ ಸಂಕಷ್ಟಕ್ಕೆ ಸಿಲುಕಿದ ಪೂಜಾ ಹೆಗ್ಡೆ

(Rashmika Mandanna Bollywood Movie mission majnu Ready To Release)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular