ಕೊರೊನಾ ಸಂಕಷ್ಟದಲ್ಲಿ ನೆರವಾದ ವೈದ್ಯರಿಗೆ ಅನ್ಯಾಯ : ಗುತ್ತಿಗೆ ವೈದ್ಯರನ್ನು ಕೈಬಿಡಲು ಬಿಬಿಎಂಪಿ ಸಿದ್ಧತೆ

ಬೆಂಗಳೂರು : ಕೊರೋನಾ ಆತಂಕ ಮರೆಯಾಗಿರೋದರಿಂದ ಬಿಬಿಎಂಪಿ ಸಹಜ ಸ್ಥಿತಿಗೆ ಮರಳುತ್ತಿದ್ದು, ಆಡಳಿತಾತ್ಮಕವಾಗಿಯೂ ಕೊರೋನಾಕ್ಕಾಗಿ ಮಾಡಿಕೊಂಡಿದ್ದ ವ್ಯವಸ್ಥೆಯನ್ನು ಕೈಬಿಡಲಾರಂಭಿಸಿದೆ. ಹೀಗಾಗಿ ಕೋವಿಡ್ ಟೈಮ್ ನಲ್ಲಿ ಪಾಲಿಕೆ ಕೈ ಹಿಡಿದಿದ್ದ ವೈದ್ಯರ ಕೈ ಬಿಡುತ್ತಾ ಬಿಬಿಎಂಪಿ (BBMP) ಎಂಬ ಆತಂಕ ಆಯುಷ್ ವೈದ್ಯರನ್ನು (Ayush doctor) ಕಾಡಲಾರಂಭಿಸಿದೆ.

ಕೊರೋನಾ ಉತ್ತುಂಗದಲ್ಲಿದ್ದಾಗ ಬಿಬಿಎಂಪಿ ಜನರ ಚಿಕಿತ್ಸೆಗಾಗಿ ಗುತ್ತಿಗೆ ಆಧಾರದ ಮೇಲೆ 800 ರಿಂದ 1 ಸಾವಿರ BAMS ವೈದ್ಯರನ್ನ ಸೇವೆಗೆ ತೆಗೆದುಕೊಂಡಿತ್ತು. ಮೊದಲ ಅಲೆಯಲ್ಲಿ ಮೂರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸೇವೆಗೆ ತೆಗೆದುಕೊಳ್ಳಲಾಗಿತ್ತು. ಆದರೆ ಆ ವೇಳೆಗಾಗಲೇ ಎರಡನೇ ಅಲೆಯೂ ಎಂಟ್ರಿಕೊಟ್ಟಿದ್ದರಿಂದ ಬಿಬಿಎಂಪಿ ಈ ವೈದ್ಯರ (Ayush doctor) ಸೇವೆಯನ್ನು ಮುಂದುವರೆಸಿತ್ತು. ಕೋವಿಡ್ 2ನೇ, 3ನೇ ಅಲೆ ಹಿನ್ನೆಲೆ ಅವರ ಸೇವೆಯನ್ನ ಮುಂದುವರಿಸಿದ್ದ ಬಿಬಿಎಂಪಿ ಈಗ ಕೊರೋನಾ ಪ್ರಮಾಣ ತಗ್ಗುತ್ತಿದ್ದಂತೆ ಆರ್ಯುವೇದ ವೈದ್ಯರನ್ನು ಗುತ್ತಿಗೆಯಿಂದ ಮುಕ್ತಗೊಳಿಸಲು ಪಾಲಿಕೆ ನಿರ್ಧರಿಸಿದೆ.

ಸದ್ಯ ಸಾವಿರಕ್ಕೂ ಅಧಿಕ ವೈದ್ಯರು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಎಲ್ಲರನ್ನು ಮುಂದುವರೆಸದಿರಲು ಬಿಬಿಎಂಪಿ ನಿರ್ಧರಿಸಿದ್ದು, ಮಾರ್ಚ್ ಅಂತ್ಯಕ್ಕೆ ಈ ವೈದ್ಯರುಗಳ ಸೇವೆ ಕೊನೆಗೊಳ್ಳಲಿದೆ. ಈ ಬಗ್ಗೆ ವಿವರಣೆ ನೀಡಿರುವ ಬಿಬಿಎಂಪಿ ಆಧಿಕಾರು ಬಾಲ್ ಸುಂದರಂ, ಎಲ್ಲಾ ವೈದ್ಯರ ಸೇವೆಯನ್ನ ಮುಂದುವರಿಸದಿರಲು ಪಾಲಿಕೆ ನಿರ್ಧರಿಸಿದೆ. ಈ ಸಂಬಂಧ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ವರದಿ ನೀಡಲಾಗಿದೆ. ಬಿಬಿಎಂಪಿ ಆರೋಗ್ಯ ವಿಭಾಗದಿಂದ ವರದಿ ನೀಡಲಾಗಿದೆ. ಸರ್ಕಾರದ ಸೂಚನೆ ಮೇರೆಗೆ, ಈ ವೈದ್ಯರನ್ನ ಸೇವೆಯಲ್ಲಿ ಉಳಿಸಿಕೊಳ್ಳ ಬೇಕಾ ಅಥವಾ ಬೇಡವಾ ಎಂಬ ನಿರ್ಧಾರಕ್ಕೆ ಪಾಲಿಕೆ ಬರಲಿದೆ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಬಾಗಿಲು ತೆರೆಯಲಿದೆ ನಮ್ಮ ಕ್ಲಿನಿಕ್

ಆದರೆ ಬಿಬಿಎಂಪಿಯ ಈ ತೀರ್ಮಾನವನ್ನು ಆರ್ಯುವೇದ ವೈದ್ಯರು ಖಂಡಿಸಿದ್ದು, ಆಯುಷ್ ವೈದ್ಯರನ್ನು ಸೇವೆಯಿಂದ ತೆಗೆದು ಹಾಕದಂತೆ ಕರ್ನಾಟಕ ಆಯುಷ್ ವೈದ್ಯರ ಸಂಘ ಒತ್ತಾಯಿಸಿದೆ. ಕೊರೋನಾ ಸಮಯದಲ್ಲಿ ಬದುಕು ಒತ್ತೆ ಇಟ್ಟು ಜನರ ಹಾಗೂ ಸರ್ಕಾರದ ಸೇವೆ ಮಾಡಿದ್ದೇವೆ.ಈಗ ಕೆಲಸ ಮುಗಿದ ಬಳಿಕ ಏಕಾಏಕಿ ನಮ್ಮನ್ನು ತೆಗೆದು ಹಾಕಿದರೆ ಹೇಗೆ.!?ನಮ್ಮ ಬದುಕಿಗೆ ಭದ್ರತೆ ಒದಗಿಸಿ ಬೇಕಿದ್ದರೆ ತೆಗೆದು ಹಾಕಿ ನಮ್ಮ ಕ್ಲಿನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳು ಹೀಗೆ ನೂರಾರು ಅವಕಾಶಗಳಿವೆ.

ಇಲ್ಲಿ ಎಲ್ಲಾದರು ಆಯುಷ್ ವೈದ್ಯರಿಗೆ (Ayush doctor) ಸ್ಥಳ ನಿಯೋಜನ ಮಾಡಿ ಎಂದು ವೈದ್ಯರುಗಳು ಮನವಿ ಮಾಡಿದ್ದಾರೆ. ಕೊರೋನಾ ಕಾಲದಲ್ಲಿ ನಾವು ಮಾಡಿದ ಸೇವೆಯನ್ನು ಗಮನದಲ್ಲಿ ಇಟ್ಟುಕೊಂಡಾದರೂ ಬಿಬಿಎಂಪಿ ನಮಗೆ ನಮ್ಮ‌ಬದುಕಿಗೆ ದಿಕ್ಕು ತೋರಿಸಬೇಕು ಎಂದು ವೈದ್ಯರುಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಟ್ರಾಫಿಕ್ ಪೊಲೀಸರಿಗೆ ಬಂತು ಕಡ್ಡಾಯ ಬಾಡಿ ವೋರ್ನ್ ಕ್ಯಾಮರಾ

( BBMP ready to drop contract Ayush doctor )

Comments are closed.