ಸದ್ಯ ಸೌತ್ ಇಂಡಸ್ಟ್ರಿ ಸೇರಿದಂತೆ ಬಾಲಿವುಡ್ ಅಂಗಳದವರೆಗೂ ಮಿಂಚುತ್ತಿರೋ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna ). ಬರಿ ಸಿನಿಮಾ ಮಾತ್ರವಲ್ಲ ಅದರಾಚೆಗಿನ ವರ್ಕೌಟ್ ಸೇರಿದಂತೆ ಹಲವು ವಿಚಾರಕ್ಕೆ ಸದ್ದು ಮಾಡ್ತಿರೋ ರಶ್ಮಿಕಾ ಈಗ ಅಮಿತಾಬ್ ಬಚ್ಚನ್ ಗೆ ನಾವು ತಲೆ ಬಾಗಲ್ಲ ಎನ್ನೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇಷ್ಟಕ್ಕೂ ರಶ್ಮಿಕಾ ತಲೆಬಾಗಲ್ಲ ಎಂದಿದ್ದ್ಯಾಕೆ ಅನ್ನೋ ಕುತೂಹಲ ನಿಮಗಿದ್ದರೇ ಈ ಸ್ಟೋರಿ ಓದಿ.

ನ್ಯಾಶನಲ್ ಕ್ರಶ್ ಎನ್ನಿಸಿಕೊಂಡಿರೋ ನಟಿ ರಶ್ಮಿಕಾಮಂದಣ್ಣ (Rashmika Mandanna) ಪುಷ್ಪ ಗೆಲುವಿನ ಬೆನ್ನಲ್ಲೇ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ ಬಾಲಿವುಡ್ ಸಿನಿಮಾದಲ್ಲಿ ಸಖತ್ ಮಿಂಚುತ್ತಿ ದ್ದಾರೆ. ಮಿಶನ್ ಮಜ್ನು ರಶ್ಮಿಕಾರ ಚೊಚ್ಚಲ ಬಾಲಿವುಡ್ ಸಿನಿಮಾ ರಿಲೀಸ್ ಗೂ ಮುನ್ನವೇ ಎರಡನೇ ಸಿನಿಮಾ ಗುಡ್ ಬೈ ರಶ್ಮಿಕಾರ ಪ್ರತಿಭೆಗೆ ಅವಕಾಶ ನೀಡಿದೆ. ಈ ಮಧ್ಯೆ ಅಮಿತಾಬ್ ಬಚ್ಚನ್ ರಶ್ಮಿಕಾ ಜೊತೆ ಸೆಟ್ ನಲ್ಲಿ ತೆಗೆದ ಪೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಮಿತಾಬ್ ಜೊತೆ ರಶ್ಮಿಕಾ ಕೂಡ ಈ ಪೋಟೋದಲ್ಲಿರೋದರಿಂದ ಬಿಗ್ ಬೀ ಅದಕ್ಕೆ ಪುಷ್ಪಾ (Pushpa) ಎಂದು ಹೆಡ್ಡಿಂಗ್ ನೀಡಿದ್ದಾರೆ. ಪುಷ್ಪ ಎಂಬ ಕ್ಯಾಪ್ಸನ್ ನೀಡಲಾದ ಈ ಪೋಸ್ಟ್ ಗೆ Sir Hum #jhukengenahi….(ಸರ್ ನಾವು ತಲೆಬಾಗಲ್ಲ) ಎಂದು ಕಮೆಂಟ್ ಮಾಡಿದ್ದಾರೆ. ಇಷ್ಟಕ್ಕೂ ರಶ್ಮಿಕಾ ಅಮಿತಾಬ್ ಬಚ್ಚನ್ ರಂತಹ ಹಿರಿಯ ನಟರ ಬಗ್ಗೆ ಸರ್ ನಾವು ತಲೆಬಾಗಲ್ಲ ಎಂದು ಕಮೆಂಟ್ ಮಾಡಿದ್ದ್ಯಾಕೆ ಎಂದು ಎಲ್ಲರೂ ಯೋಚಿಸುತ್ತಿದ್ದಾರೆ. ಆದರೆ ಅಸಲಿ ಸತ್ಯ ಏನೆಂದರೇ, ಇದು ಪುಷ್ಪ ಸಿನಿಮಾದ ಫೇಮಸ್ ಡೈಲಾಗ್.

ರಶ್ಮಿಕಾ ಹಾಗೂ ಅಮಿತಾಬ್ ನಡುವಿನ ಈ ಸಂಭಾಷಣೆ ಹಾಗೂ ಕಮೆಂಟ್ ನ್ನು ಲಕ್ಷಾಂತರ ಜನರು ಲೈಕ್ ಮಾಡಿದ್ದರೇ ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ.ಸದ್ಯ ತಮ್ಮ ಎರಡು ಬಾಲಿವುಡ್ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಮೂರನೇ ಬಾಲಿವುಡ್ ಸಿನಿಮಾಗೂ ಸಿದ್ಧವಾಗುತ್ತಿದ್ದಾರೆ.
ಚೊಚ್ಚಲ ಹಿಂದಿ ಸಿನಿಮಾ ರಿಲೀಸ್ ಆಗೋ ಮೊದಲೇ ರಶ್ಮಿಕಾ ಮೂರನೇ ಬಾಲಿವುಡ್ ಸಿನಿಮಾ ಸೆಟ್ಟೆರಲಿದ್ದು, ರಶ್ಮಿಕಾ ರಣಬೀರ್ ಕಪೂರ್ ಪತ್ನಿ ಪಾತ್ರದಲ್ಲಿ ಮಿಂಚಲಿದ್ದಾರೆ ಅನ್ನೋದು ಬಾಲಿವುಡ್ ಅಂಗಳದಿಂದ ಹೊರಬಿದ್ದಿರೋ ಲೆಟೇಸ್ಟ್ ನ್ಯೂಸ್. ಇತ್ತೀಚಿಗಷ್ಟೇ ರಶ್ಮಿಕಾ ತಮ್ಮದೇ ಯೂಟ್ಯೂಬ್ ಚಾನೆಲ್ ವೊಂದನ್ನು ಆರಂಭಿಸುವ ಮೂಲಕ ಗಮನಸೆಳೆದಿದ್ದರು.
ಇದನ್ನೂ ಓದಿ : ಸೋಷಿಯಲ್ ಮೀಡಿಯಾದಲ್ಲಿ ಸನ್ನಿ ಮೇನಿಯಾ : ಮಾಲ್ಡೀವ್ಸ್ ಹಾಟ್ ವಿಡಿಯೋ ವೈರಲ್
ಇದನ್ನೂ ಓದಿ : ಕೆಜಿಎಫ್-2 ಗೆ ಸೆನ್ಸಾರ್ ಬೋರ್ಡ್ U/A ಗ್ರೀನ್ ಸಿಗ್ನಲ್ : ಪ್ರಮೋಶನ್ ಗೆ ಖಾಸಗಿ ವಿಮಾನ ಏರಿದ ಯಶ್
Actress Rashmika Mandanna Reply To Amitabh Bachchan Pushpa Post