ಸೋಮವಾರ, ಜೂನ್ 16, 2025
HomeCinemaRashmika Mandanna : X ಬಗ್ಗೆ ಬೇಡ Y ಬಗ್ಗೆ ಮಾತಾಡೋಣ : ನಟಿ...

Rashmika Mandanna : X ಬಗ್ಗೆ ಬೇಡ Y ಬಗ್ಗೆ ಮಾತಾಡೋಣ : ನಟಿ ರಶ್ಮಿಕಾ ಮಂದಣ್ಣ ಹೊಸ ವರಸೆ

- Advertisement -

ಸೆಲೆಬ್ರೆಟಿಗಳು, ನಟ-ನಟಿಯರು ಸದ್ಯ ನಟನೆ,ಸಿನಿಮಾಗಳಿಗಿಂತ ಹೆಚ್ಚು ಸೋಷಿಯಲ್ ಮೀಡಿಯಾದಲ್ಲೇ ಸದ್ದು ಮಾಡ್ತಿದ್ದಾರೆ. ಇದಕ್ಕೆ ಕೊಡಗಿನ‌ ಕುವರಿ, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೊರತಲ್ಲ. ಸದ್ಯ ಟ್ವೀಟರ್, ಇನ್ ಸ್ಟಾಗ್ರಾಂಗಳಲ್ಲಿ ಮಿಂಚ್ತಿರೋ ರಶ್ಮಿಕಾ ಮಂದಣ್ಣ (Rashmika Mandanna ) ಈಗ ತಮ್ಮದೇ ಆದ ಯೂಟ್ಯೂಬ್ ಚಾನೆಲ್ (YouTube Channel) ಆರಂಭಿಸಿದ್ದು, ಮೊದಲ ದಿನವೇ ಪುಷ್ಪಾ ಬೆಡಗಿಯ ವೀಡಿಯೋ ಗೆ ಗ್ರ್ಯಾಂಡ್ ವೆಲ್‌ಕಂ ಸಿಕ್ಕಿದೆ ‌

ರಶ್ಮಿಕಾ‌ ಮಂದಣ್ಣ ಎಂಬ ಹೆಸರಿನ ವೆರಿಫೈಯ್ಡ್ ಯೂ ಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ ನಟಿ ರಶ್ಮಿಕಾ‌ ಮಂದಣ್ಣ.‌ ಅಷ್ಟೇ ಅಲ್ಲ‌ ಮೊದಲ‌ ದಿನವೇ ನಟಿ ರಶ್ಮಿಕಾ, ತಮ್ಮ ಪುಟ್ಟ ಇಂಟರವ್ಯೂ ವೊಂದನ್ನು ಶೇರ್‌ಮಾಡಿದ್ದಾರೆ. ಆದರೆ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮೊದಲ ದಿನವೇ ರಶ್ಮಿಕಾ ಯೂ ಟ್ಯೂಬ್ ಚಾನೆಲ್ ಗೆ ಬರೋಬ್ಬರಿ 37 ಸಾವಿರ ಸಬ್ ಸ್ಕೈಬರ್ ಗಳು ಸಿಕ್ಕಿದ್ದು, ಅಭಿಮಾನಿಗಳು ಯೂ ಟ್ಯೂಬ್ ಗೂ ಬಂದ ರಶ್ಮಿಕಾ ಕಂಡು ಫುಲ್ ಖುಷಿಯಾಗಿದ್ದಾರೆ.

ಇನ್ನೂ ಸದ್ಯ ಬಾಲಿವುಡ್, ಟಾಲಿವುಡ್,ಕಾಲಿವುಡ್ ನಲ್ಲಿ ಮಿಂಚ್ತಿರೋ ರಶ್ಮಿಕಾ ಬಗ್ಗೆ ಹೆಚ್ಚು ಹೆಚ್ಷು ತಿಳಿದುಕೊಳ್ಲೋ ಉತ್ಸಾಹ ಅಭಿಮಾನಿಗಳಿಗೇ ಇದ್ದೇ ಇರುತ್ತೆ. ‌ಇದಕ್ಕೆ ಪೂರಕ ವಾಗಿಯೇ ನಟಿ ರಶ್ಮಿಕಾ‌ತಮ್ಮ ಯೂ ಟ್ಯೂಬ್ ವಿಡಿಯೋದಲ್ಲಿ ಚುಟುಕಾದ ಸಂದರ್ಶನವೊಂದನ್ನು ಹಂಚಿಕೊಂಡಿದ್ದಾರೆ. 56 ಸೆಕೆಂಡಿನ ಈ ವೀಡಿಯೊದಲ್ಲಿ ರಶ್ಮಿಕಾ ಸಖತ್ ಬೋಲ್ಡಾಗಿ ಮಾತನಾಡಿದ್ದು, ಗಮನ ಸೆಳೆದಿದೆ.

ಸಂದರ್ಶಕಿ ರಶ್ಮಿಕಾರನ್ನು ಎಲ್ಲರೂ ನಿಮ್ಮ ಎಕ್ಸ್ ಬಗ್ಗೆ ಮಾತನಾಡುತ್ತಾರೆ.ಆದರೆ ನಾವು ಇವತ್ತು ನಿಮ್ಮ ವೈಗಳ ಬಗ್ಗೆ ಮಾತನಾಡೋಣ ಎಂದಿದ್ದು, ಅದಕ್ಕೆ ರಶ್ಮಿಕಾ ಹೌದು, ಇದು ನನಗೆ ಇಷ್ಟ ಎಂದಿದ್ದಾರೆ . ಮಾತ್ರವಲ್ಲ ನಿಮಗೆ ಪ್ರವಾಸ ಮಾಡೋದು ಯಾಕೆ ಇಷ್ಟ? ನಿಮಗೆ ಆಕ್ಟಿಂಗ್ ಅಂದ್ರೇ ಯಾಕೆ ಇಷ್ಟ? ಡ್ಯಾನ್ಸ್ ಎಂದರೇ ನಿಮಗೆ ಯಾಕೆ ಇಷ್ಟ ಎಂದೆಲ್ಲ ಪ್ರಶ್ನೆಗಳನ್ನು ಕೇಳಲಾಗಿದ್ದು, ಎಲ್ಲದಕ್ಕೂ ರಶ್ಮಿಕಾ ಕ್ಯೂಟಾಗಿ ಉತ್ತರಿಸಿದ್ದಾರೆ.

ಅಷ್ಟೇ ಅಲ್ಲ ತಮ್ಮ ಇಷ್ಟ ಕಷ್ಟಗಳ ಬಗ್ಗೆಯೂ ಮಾತನಾಡಿರುವ ರಶ್ಮಿಕಾ ನನಗೆ ಸಿಹಿತಿಂಡಿ ಎಂದರೇ ಇಷ್ಟ, ಅದಕ್ಕಾಗಿಯೇ ನಾನು ಜಿಮ್‌ ನಲ್ಲಿ ವರ್ಕೌಟ್ ಮಾಡುತ್ತೇನೆ ಎಂದೆಲ್ಲ ಹೇಳಿದ್ದಾರೆ. ಮಾತ್ರವಲ್ಲ ನನ್ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಯೂಟ್ಯೂಬ್ ನಲ್ಲಿ ನನ್ನನ್ನು ಪಾಲೋ ಮಾಡಿ ಎಂದೂ ಮನವಿ ಮಾಡಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಈ ಹೊಸ ಪ್ರಯತ್ನ ಸಖತ್ ಹಿಟ್ ಆಗಲಿದ್ದು ಅಭಿಮಾನಿಗಳು ಖುಷಿಯಿಂದ ರಶ್ಮಿಕಾ ಯೂಟ್ಯೂಬ್ ನೋಡ್ತಿದ್ದಾರೆ.

ಇದನ್ನೂ ಓದಿ : ತಂದೆ ಸಾಲಕ್ಕೆ ಪುತ್ರಿ ಹೊಣೆ : ಸಂಕಷ್ಟಕ್ಕೆ ಸಿಲುಕಿದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ

ಇದನ್ನೂ ಓದಿ : Rachitha Ram : ಜ್ಯೂನಿಯರ್ಸ್ ಡ್ರಾಮಾ ನೋಡೋಕೆ ಬಂದ ರಚ್ಚು: ಸೆಟ್ ನಲ್ಲೇ ರಚಿತಾರಾಮ್ ಕಿಡ್ನಾಪ್

Rashmika Mandanna Starts Her YouTube Channel

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular