Election Planning : ಪಂಚ ರಾಜ್ಯ ಚುನಾವಣೆ ಎಫೆಕ್ಟ್: ಸಚಿವ ಸಂಪುಟ ಸಭೆಯಲ್ಲೇ ಎಲೆಕ್ಷನ್ ಪ್ಲ್ಯಾನಿಂಗ್

ಬೆಂಗಳೂರು : ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ರಾಜ್ಯ ರಾಜಕೀಯದಲ್ಲಿ ಬಿಜೆಪಿಗೆ ಹೊಸ ಜೀವ ಕಳೆ ಬಂದಿದೆ. ಪಂಚ ರಾಜ್ಯ ಚುನಾವಣಾ ಫಲಿತಾಂಶ ದಿಂದ ಹೊಸ ಉತ್ಸಾಹ ಪಡೆದಿರುವ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ‌ ನೇತೃತ್ವದಲ್ಲೇ ಕರ್ನಾಟಕ ವಿಧಾನಸಭಾ (Karnataka Assembly ) ಚುನಾವಣೆಗೆ (Election Planning ) ಸಿದ್ಧತೆ ಆರಂಭಿಸಿದ್ದು, ಸರ್ಕಾರಿ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸು ಗೆಲ್ಲುವ ಪ್ಲ್ಯಾನ್ ಮಾಡಿದ್ದಾರೆ.

ಸರ್ಕಾರದ ಕಾರ್ಯಕ್ರಮಗಳ ಮೂಲಕ ಬಿಜೆಪಿ ಪರ ಅಲೆ ಎಬ್ಬಿಸಲು ಸರ್ಕಾರ ಪಣ‌ತೊಟ್ಟಂತಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಅನೌಪಚಾರಿಕ ವಾಗಿ ರಾಜಕೀಯ ಚರ್ಚೆ (Election Planning ) ನಡೆಸಿದ್ದು ಗಮನ ಸೆಳೆದಿದೆ. ಸಚಿವ ಸಂಪುಟ ಸಭೆ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಹೊರಗೆ ಕಳುಹಿಸಿದ ಸಿಎಂ ಬೊಮ್ಮಾಯಿ ಎಲ್ಲ ಸಚಿವರೊಂದಿಗೆ ಮುಂದಿನ ರಾಜಕೀಯ ರಣತಂತ್ರಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ಕ್ಷೇತ್ರಗಳಲ್ಲಿ ಜನರಿಗೆ ನಮ್ಮ ಸರ್ಕಾರದ ಕಾರ್ಯಕ್ರಮ ತಲುಪಿಸಬೇಕು. ಆಡಳಿತ ವಿರೋಧಿ ಅಲೆಯನ್ನ ಯುಪಿ ಹೇಗೆ ಮೆಟ್ಟಿ ನಿಂತು ಅಧಿಕಾರಕ್ಕೆ ಬರಲಾಯಿತೋ ಅದೇ ಮಾದರಿಯಲ್ಲಿ ನಾವು ರಾಜ್ಯದಲ್ಲಿ ಕೆಲಸ ನಿರ್ವಹಿಸಬೇಕೆಂದು ಸಿಎಂ ಸಚಿವರುಗಳಿಗೆ ಸೂಚನೆ ನೀಡಿದ್ದಾರಂತೆ.

ಇದನ್ನೂ ಓದಿ :  ಪಂಜಾಬ್‌ ಗೆಲುವು, ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ !

ಅಷ್ಟೇ ಅಲ್ಲ ನಮ್ಮ ಕಾರ್ಯಕ್ರಮಗಳು ಮತ್ತು ಬಜೆಟ್ ಬಗ್ಗೆ ರಾಜ್ಯದ ಜನೆತೆಗೆ ತಲುಪಿಸಬೇಕು.ಅಲ್ಲದೆ ಕೇಂದ್ರ ಸರ್ಕಾರದ ಯೋಜನೆ ಗಳು ಕೂಡ ಜನರಿಗೆ ತಲುಪಿಸಬೇಕು.ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಮೂಡಿಸಬೇಕು ಬರುವ ತಿಂಗಳಲ್ಲಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡ್ತಿದ್ದಾರೆ. ಅಷ್ಟೊತ್ತಿಗೆ ಸರ್ಕಾರದ ಯೋಜನೆ ಗಳ ಮೂಲಕ ರಾಜ್ಯದಲ್ಲಿ ಬಿಜೆಪಿ ಪರ ಮತದಾರರ ಸೆಳೆಯುವ ಕೆಲಸ ಆಗಬೇಕು ಎಂದು ಸಿಎಂ ಖಡಕ್ ಸೂಚನೆ ರವಾನಿಸಿದ್ದಾರೆ ಎನ್ನಲಾಗಿದೆ.ಇದಲ್ಲದೇ ಬಿಬಿಎಂಪಿ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯ್ತಿ ಚುನಾವಣೆ ಕೂಡ ಬರ್ತಿವೆ. ಇವುಗಳಲ್ಲಿ ನಾವು ಹೆಚ್ಚು ಗೆದ್ದರೆ, ಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬಹುದು.

ಹೀಗಾಗಿ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು, ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಕೆಲಸ ಮಾಡುವಂತೆ ಸಂಪುಟ ಸಚಿವರಿಗೆ ಸೂಚಿಸಿರುವ ಸಿಎಂ ಬೊಮ್ಮಾಯಿ ಶತಾಯ ಗತಾಯ ಮುಂದಿನ ಎಲೆಕ್ಷನ್ ನಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆದ್ದು ಬರುವುದು ನಮ್ಮ ಗುರಿ ಎಂಬುದನ್ನು ಸಚಿವರುಗಳಿಗೆ ಮನದಟ್ಟು ಮಾಡಿಸಿದ್ದಾರಂತೆ. ಸದ್ಯದಲ್ಲೇ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಈ ವೇಳೆಗೆ ಚುನಾವಣೆಗೆ ಸಿದ್ಧತೆ ನಡೆಸಿ ಮೋದಿಯವರನ್ನು ಮೆಚ್ಚಿಸುವ ಸರ್ಕಸ್ ರಾಜ್ಯ ಬಿಜೆಪಿಯಿಂದ ಆರಂಭಗೊಂಡಿದೆ.

ಇದನ್ನೂ ಓದಿ : ಪಂಚ ರಾಜ್ಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ಗೆ ಶಾಕ್‌ : ಕೈಗೆ ಇಬ್ರಾಹಿಂ, ರೋಷನ್‌ ಬೇಗ್‌ ಗುಡ್‌ಬೈ

(Election Planning at Cabinet Meeting in Karnataka Assembly Election)

Comments are closed.