ಸೋಮವಾರ, ಏಪ್ರಿಲ್ 28, 2025
HomeCinemaRavichandran joins Darshan in Kranti : ಚಾಲೆಂಜಿಂಗ್ ಸ್ಟಾರ್ ಗೆ ಕ್ರೇಜಿಸ್ಟಾರ್ ಸಾಥ್:...

Ravichandran joins Darshan in Kranti : ಚಾಲೆಂಜಿಂಗ್ ಸ್ಟಾರ್ ಗೆ ಕ್ರೇಜಿಸ್ಟಾರ್ ಸಾಥ್: ದರ್ಶನ್ ಕ್ರಾಂತಿ ಸಿನಿಮಾ ಸೆಟ್ ಸೇರಿದ ರವಿಚಂದ್ರನ್

- Advertisement -

ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಚಿತ್ರಗಳು ತೆರೆಗೆ ಬರ್ತಿರೋ ಬೆನ್ನಲ್ಲೇ ಒಂದಿಷ್ಟು ಸಿನಿಮಾಗಳು ಸದ್ದಿಲ್ಲದೇ ಶೂಟಿಂಗ್ ನಡೆಸುತ್ತಿವೆ. ಈ ಸಾಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ( Ravichandran joins Darshan in Kranti ) ಕೂಡಾ ಒಂದು. ಇತ್ತೀಚಿಗಷ್ಟೇ ಹೈದ್ರಾಬಾದ್ ನಲ್ಲಿ ಶೂಟಿಂಗ್ ಮುಗಿಸಿರೋ ಚಿತ್ರತಂಡ ಈಗ ಸ್ಯಾಂಡಲ್ ವುಡ್ ಹಿರಿಯ ಸ್ಟಾರ್ ಗಳನ್ನು ತಾರಾಗಣಕ್ಕೆ ಸೇರಿಸಿಕೊಳ್ಳುವ ಮೂಲಕ ಸಿನಿಮಾದ ಮೇಲಿನ ನೀರಿಕ್ಷೆ ಮತ್ತಷ್ಟು ಹೆಚ್ಚಿಸಿಕೊಂಡಿದೆ.

ದರ್ಶನ್ ಕೆರಿಯರ್ ನ 55 ನೇ ಸಿನಿಮಾವಾಗಿರೋ ಕ್ರಾಂತಿ ಈಗಾಗಲೇ ಹಲವು ಹೊಸತುಗಳಿಂದ ಗಮನಸೆಳೆದಿದೆ. ಬಹುವರ್ಷಗಳ ಬಳಿಕ ಮತ್ತೊಮ್ಮೆ ಈ ಸಿನಿಮಾದಲ್ಲಿ ನಟಿ ರಚಿತಾರಾಮ್ ದರ್ಶನ್ ಗೆ ಜೊತೆಯಾಗಿದ್ದಾರೆ. ಈ ಮಧ್ಯೆ ಚಿತ್ರತಂಡಕ್ಕೆ ಕನಸುಗಾರನ ಎಂಟ್ರಿಯಾಗಿದೆ. ಹೌದು ಕ್ರೇಜಿಸ್ಟಾರ್ ರವಿಚಂದ್ರನ್ ಈಗ ನಾಯಕ ಪಾತ್ರವಲ್ಲ ಪೋಷಕ ಪಾತ್ರಗಳಲ್ಲಿ ಹಾಗೂ ಗೆಸ್ಟ್ ರೋಲ್ ಗಳಲ್ಲೂ ಮಿಂಚಲಾರಂಭಿಸಿದ್ದಾರೆ. ಹೀಗಾಗಿ ಕ್ರಾಂತಿ ಸಿನಿಮಾದಲ್ಲೂ ದರ್ಶನ್ ಜೊತೆ ನಟಿಸಲಿದ್ದು ಮೂಲಗಳ ಪ್ರಕಾರ ದರ್ಶನ್ ತಂದೆಯ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರಂತೆ.

ಈ ಹಿಂದೆ ರವಿಚಂದ್ರನ್ ಸುದೀಪ್ ಜೊತೆ ಎರಡು ಸಿನಿಮಾದಲ್ಲಿ ನಟಿಸಿದ್ದು, ಹೆಬ್ಬುಲಿಯಲ್ಲಿ ಅಣ್ಣನ ಪಾತ್ರ ಹಾಗೂ ಮಾಣಿಕ್ಯ ದಲ್ಲಿ ತಂದೆಯ ಪಾತ್ರದಲ್ಲಿ ಮಿಂಚಿದ್ದರು. ಅಷ್ಟೇ ಅಲ್ಲ ಬಹುಸ್ಟಾರ್ ತಾರಾಗಣದ ಕುರುಕ್ಷೇತ್ರ ದಲ್ಲಿ ಶ್ರೀಕೃಷ್ಣ್ ನ ಪಾತ್ರದಲ್ಲಿ ನಟಿಸಿದ್ದರು. ಈಗ ಕ್ರಾಂತಿಯಲ್ಲಿ ದರ್ಶನ್ ಗೆ ಜೊತೆಯಾಗುತ್ತಿದ್ದಾರೆ. ಕೇವಲ ರವಿಚಂದ್ರನ್ ಮಾತ್ರವಲ್ಲ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕೂಡಾ ಈ ಸಿನಿಮಾತಂಡವನ್ನು ಸೇರಿಕೊಂಡಿದ್ದಾರೆ. ಕ್ರಾಂತಿ ಮುಖ್ಯಮಂತ್ರಿ ಚಂದ್ರು ಅವರ 515 ಸಿನಿಮಾ ಅನ್ನೋದು ಗಮನಿಸಬೇಕಾದ ಸಂಗತಿ.

ಕ್ರಾಂತಿ ಸಿನಿಮಾದಲ್ಲಿ ದರ್ಶನ್ ವಿಭಿನ್ನ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಮುಖ್ಯಮಂತ್ರಿ ಚಂದ್ರು ದರ್ಶನ್ ತಾತನಾಗಿ ನಟಿಸಲಿದ್ದಾರಂತೆ. 2019 ರಲ್ಲಿ ದರ್ಶನ್ ಗೆ ಹೆಸರು ತಂದುಕೊಟ್ಟ ಯಜಮಾನ ಸಿನಿಮಾದ ತಂಡವೇ ಕ್ರಾಂತಿಯಲ್ಲಿ ಕೈಜೋಡಿಸಿದ್ದು, ವಿ.ಹರಿಕೃಷ್ಣ್ ಸಿನಿಮಾ ನಿರ್ದೇಶಿಸಲಿದ್ದಾರೆ. ಇನ್ನು ಶೈಲಜಾ ನಾಗ್ ಹಾಗೂ ಬಿ.ಸುರೇಶ್ ಬಂಡವಾಳ ಹೂಡಿದ್ದಾರೆ.

ಸಿನಿಮಾಗೆ ವಿ.ಹರಿಕೃಷ್ಣ ಅವರೇ ಸಂಗೀತ ನಿರ್ದೇಶನವನ್ನು ಮಾಡಲಿದ್ದಾರೆ. ಬುಲ್ ಬುಲ್ ಸಿನಿಮಾ ಬಳಿಕ ದರ್ಶನ್ ಜೊತೆ ಮತ್ತೊಮ್ಮೆ ರಚಿತಾರಾಮ್ ಮೋಡಿ ಮಾಡಲು ಸಿದ್ಧವಾಗಿದ್ದು ದರ್ಶನ್ ಹುಟ್ಟುಹಬ್ಬದಂದು ಸಿನಿಮಾದ ಫರ್ಸ್ಟ್ ಲುಕ್ ರಿಲೀಸ್ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ : Pushpa-The Rise : ದೇಶ ಮಾತ್ರವಲ್ಲ ವಿದೇಶದಲ್ಲೂ ಪುಷ್ಪ ಹವಾ: ಒಂದೇ ವಾರಕ್ಕೆ 229 ಕೋಟಿ ಗಳಿಸಿದ ಸಿನಿಮಾ

ಇದನ್ನೂ ಓದಿ : Pushpa Samantha Good News : ಪುಷ್ಪ ಗೆಲುವಿನ ಖುಷಿಯಲ್ಲಿ ಸಮಂತಾ : ಅಭಿಮಾನಿಗಳಿಗೆ ಕೊಟ್ರು ಮತ್ತೊಂದು ಸಿಹಿಸುದ್ದಿ

( Ravichandran joins Darshan in Kranti Cinema Set for Challenging Star)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular