ಬಿಗ್ ಬಾಸ್ ಮನೆಯಲ್ಲಿ ರವಿಚಂದ್ರನ್, ತಮ್ಮ ಫಸ್ಟ್ ಲವ್ ಸ್ಟೋರಿ ಬಗ್ಗೆ ಟಾಕ್!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋಗೆ ಇಂದು ಸ್ಯಾಂಡಲ್‍ವುಡ್ ಫೇಮಸ್ ಹೀರೋ ರವಿಚಂದ್ರನ್ ಅವರು ಬಂದಿದ್ದಾರೆ. ಮನೆಯವರೆಲ್ಲಾ ತುಂಬಾ ಖುಷಿಯಾಗಿದ್ದು, ಅವರ ಜೊತೆ ನಗುತ್ತಾ ರವಿಚಂದ್ರನ್ ತಮ್ಮ ಹಳೆಯ ವಿಷಯಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲೂ ತಮ್ಮ ಲವ್ ಫಸ್ಟ್ ಸ್ಟೋರಿ ರಿವೀಲ್ ಮಾಡಿದ್ದಾರೆ. ನೋಡಿ ಹಾಗಾದ್ರೆ ಕ್ರೇಜಿಸ್ಟಾರ್ ಅವರ ಕ್ರೇಜಿ ಲವ್ ಸ್ಟೋರಿಯನ್ನು.
ಬಿಗ್ ಬಾಸ್ ಮನೆಗೆ ಕ್ರೇಜಿ ಸ್ಟಾರ್
ಹೌದು ಇವತ್ತು ಬಿಗ್ ಬಾಸ್ ಮನೆಗೆ ರವಿಚಂದ್ರನ್ ಅವರು ತಮ್ಮ ಸಿನಿಮಾ ಪ್ಯಾರ್ ಸಿನಿಮಾ ಪ್ರಮೋಷನ್‍ಗೆ ಬಂದಿದ್ದಾರೆ. ಅಲ್ಲಿ ಸ್ಪರ್ಧಿಗಳ ಬಳಿ ತಮ್ಮ ಪ್ರೇಮದ ಬಗ್ಗೆ ಹೇಳಿಕೊಂಡಿದ್ದಾರೆ.
ರವಿಚಂದ್ರನ್ ಪ್ರೀತಿ ಹುಟ್ಟಿದ್ದೇಗೆ?
ನಾ ನಿನ್ನ ಮರೆಯಲಾರೆ ಸಿನಿಮಾದಲ್ಲಿ ರಾಜಕುಮಾರ್ ಅವರು ಓಡಿಸಿದ್ದ ಮೋಟರ್ ಬೈಕ್ ತಗೊಂಡು, ಕಾಲೇಜ್‍ಗೆ ಎಂಟ್ರಿ ಆಗ್ತೀನಿ. ಕಾಲೇಜ್‍ಗೆ ಎಂಟ್ರಿಯಾಗುವಾಗ ಗೇಟ್ ಬಳಿ 10 ಹುಡ್ಗೀರು ನಿಂತಿರ್ತಾರೆ. ಮೋಟರ್ ಬೈಕ್ ಸೌಂಡ್‍ಗೆ ಒಂದು ಹುಡುಗಿ ತಿರುಗಿ ನೋಡ್ತಾಳೆ. ಇವತ್ತಿನವರೆಗೂ ಅದನ್ನು ಮರೆತಿಲ್ಲ ನಾನು. ಅದು ನನ್ನ ಫಸ್ಟ್ ಪ್ರೀತಿ ಎಂದು ರವಿಚಂದ್ರನ್ ಹೇಳಿದ್ದಾರೆ.
ಒಂದು ವರ್ಷ ಟೈಮ್ ತಗೊಂಡೆ
ಅವರಿಗೆ ಐ ಲವ್ ಯು ಹೇಳಲು ಒಂದು ವರ್ಷ ತೆಗೆದುಕೊಂಡಿದ್ದೇನೆ. ಆದ್ರೆ ಕಣ್ಣಲ್ಲೇ ಒಂದು ವರ್ಷ ಪ್ರೀತಿ ಮಾಡಿದ್ದೇವೆ. ಆದ್ರೆ ಇವತ್ತು ಮಾತಾಡಿಸಬೇಕು ಎಂದು ಹೋಗಿರುತ್ತೇನೆ. ಕಾರ್‍ನಲ್ಲಿ ಹೋಗಿ ಅವರ ಮುಂದೆ ಹೋಗಿ ಕ್ಯಾನ್ ಐ ಡ್ರಾಪ್ ಯು ಅಂತೀನಿ, ನೋ ಥ್ಯಾಂಕ್ಸ್ ಅಂದು ಹೊರಟು ಹೋಗ್ತಾಳೆ. ಅಷ್ಟೇ, ನೆಕ್ಸ್ಟ್ ಡೇ ಯಿಂದ ನಾನು ಕಾಳೆಜಿಗೆ ಬಂದಿಲ್ಲ ನಾನು ಎಂದು ರವಿ ಸರ್ ಹೇಳಿದ್ದಾರೆ.
ಇದನ್ನೂ ಓದಿ: https://kannada.newsnext.live/cinema/rakshita-dhruvanth-fight-in-the-secret-room-also/
ಅವಳೇ ಫೋನ್ ಮಾಡಿದ್ದಳು
ಒಂದು ವಾರ ಆದ ಮೇಲೆ ಲ್ಯಾಂಡ್ ಲೈನ್ ರಿಂಗ್ ಆಗುತ್ತೆ. ಅದು ಅಕಸ್ಮಾತ್ ಆಗಿ ನಾನೇ ಫೋನ್ ತೆಗೆಯುತ್ತೇನೆ. ಅವಳೇ ಫೋನ್ ಮಾಡಿರ್ತಾಳೆ. ಹೇಗೋ ನನ್ನ ನಂಬರ್ ತಗೊಂಡು. ಅಲ್ಲಿಂದ ಇಬ್ಬರು ಮಾತನಾಡಲು ಶುರು ಮಾಡ್ತೇವೆ ಎಂದು ರವಿಚಂದ್ರನ್ ಹೇಳಿದ್ದಾರೆ.



