Rishab shetty : ಮಗಳು ರಾಧ್ಯಾಳ ಕಿವಿ ಚುಚ್ಚುವ ವೀಡಿಯೋ ಹಂಚಿಕೊಂಡ ಕಾಂತಾರ ನಟ ರಿಷಬ್‌ ಶೆಟ್ಟಿ

ನಟ ರಿಷಬ್‌ ಶೆಟ್ಟಿ (Rishab shetty) ಪ್ಯಾನ್‌ ಇಂಡಿಯಾ ಸ್ಟಾರ್‌ ಆದ ಮೇಲೆ ಅಭಿಮಾನಿಗಳು ಅವರ ಎಲ್ಲಾ ಚಟುವಟಿಕೆಯನ್ನು ಗಮನಿಸುತ್ತಾ ಇದ್ದಾರೆ. ಇದೀಗ ನಟ ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ತಮ್ಮ ಮಗಳು ರಾಧ್ಯಾಳ ಕಿವಿ ಚುಚ್ಚಿಸುವ ಕಾರ್ಯಕ್ರಮದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ತಾನು ಹುಟ್ಟಿ ಬೆಳೆದ ಮನೆಯಲ್ಲಿ ಮಗಳು ರಾಧ್ಯಾಳ ಕಿವಿ ಚುಚ್ಚಿಸಿ ನಟ ರಿಷಬ್‌ ಶೆಟ್ಟಿ ಸಂಭ್ರಮಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ನಟ ರಿಷಬ್‌ ಶೆಟ್ಟಿ ಇನ್‌ಸ್ಟಾಗ್ರಾಮ್‌ನಲ್ಲಿ , “ನಾ ಹುಟ್ಟಿ ಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ. ಅದಕ್ಕೀಗ ರಾಧ್ಯಾಳ ಕಿವಿ ಚುಚ್ಚಿಸಿದ ಸಂಭ್ರಮದ ನೆನಪೊಂದು ಹೊಸದಾಗಿ ಜೊತೆ ಸೇರಿದೆ” ಎಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ನಟ ರಿಷಬ್‌ ಶೆಟ್ಟಿ ಮಗಳು ರಾಧ್ಯಳನ್ನು ತಮ್ಮ ತೊಡೆಯ ಮೇಲೆ ಕುಳಿಸಿಕೊಂಡು ಕಿವಿ ಚುಚ್ಚಿಸಿದ್ದಾರೆ. ಈ ಸಮಾರಂಭದಲ್ಲಿ ಅವರ ಕುಟುಂಬಸ್ಥರು ಸಾಕ್ಷಿಯಾಗಿದ್ದರು. ಅಷ್ಟೇ ಅಲ್ಲದೇ ಮಗಳ ಕಿವಿ ಚುಚ್ಚಿಸುವ ಕಾರ್ಯಕ್ರಮದೊಂದಿಗೆ ಕರಾವಳಿಯಲ್ಲಿ ಮಾಡುವ ತುಳಿಸಿ ಪೂಜೆಯನ್ನು ನೋಡಬಹುದು. ಪೂಜೆ ಮುಗಿದ ಮೇಲೆ ನಟ ರಿಷಬ್‌ ಶೆಟ್ಟಿ ತಮ್ಮ ತಂದೆ ತಾಯಿ ಹೆಂಡತಿ ಮಕ್ಕಳೊಂದಿಗೆ ಫೋಟೋಗೆ ಪೋಸ್‌ ನೀಡಿದ್ದನ್ನು ಕಾಣಬಹುದು.

ನಟ ರಿಷಬ್‌ ಶೆಟ್ಟಿ ಹಂಚಿಕೊಂಡ ಈ ವೀಡಿಯೋಗೆ ಅಭಿಮಾನಿಗಳು ಕಾಮೆಂಟ್‌ ಹಾಗೂ ಲೈಕ್‌ ಒತ್ತಿದ್ದಾರೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಊರಿನ ಆಚರಣೆ ವಿಚಾರವನ್ನು ಮರೆಯಬಾರದು ಎನ್ನುವುದಕ್ಕೆ ಇದೇ ಸಾಕ್ಷಿ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ : Nikhil Siddharth – Aishwarya Menon : ಸ್ಪೈ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದ ನಿಖಿಲ್ ಸಿದ್ಧಾರ್ಥ್ – ಐಶ್ವರ್ಯ ಮೆನನ್

ಇದನ್ನೂ ಓದಿ : Bangalore Boys movie : ಇದೇ 30ಕ್ಕೆ ತೆರೆಗೆ ಬರಲು ಸಿದ್ದವಾಯ್ತು ಬೆಂಗಳೂರು ಬಾಯ್ಸ್‌ ಸಿನಿಮಾ

ಆಗಸ್ಟ್‌ ತಿಂಗಳಲ್ಲಿ ಸಿನಿಮಾ ಮೂಹೂರ್ತ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ವರದಿ ಆಗಿದ್ದು, ಈ ವಿಷಯ ತಿಳಿದ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಕಾಂತಾರ 2 ಸಿನಿಮಾದ ಮೂಹೂರ್ತವು ಆಗಸ್ಟ್‌ 27ರಂದು ನೆರವೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ ತದನಂತರದ ದಿನಗಳಲ್ಲಿ ಸಿನಿತಂಡ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಲಿದೆ. ಇನ್ನು ಕಾಂತಾರ 2 ಸಿನಿಮಾಕ್ಕೆ ಮಳೆಗಾಲದ ಅವಶ್ಯಕತೆ ಇರುವುದರಿಂದ ಆಗಸ್ಟ್‌ ಯಿಂದ ಸೆಪ್ಟೆಂಬರ್‌ ತಿಂಗಳಲ್ಲಿ ಸಿನಿಮಾ ಶೂಟಿಂಗ್‌ ಮಾಡಲು ರಿಷಬ್‌ ಶೆಟ್ಟಿ ಆಯ್ಕೆ ಮಾಡಿಕೊಂಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ, ಅಚ್ಯುತ್‌ ಕುಮಾರ್‌ ಸೇರಿದಂತೆ ಬಹುತಾರಾಂಗಣದಿಂದ ಕೂಡಿತ್ತು. ಇನ್ನು ಈ ಸಿನಿಮಾದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Rishab Shetty: Kantara actor Rishab Shetty shared a video of daughter Radhya getting her ears pierced.

Comments are closed.