Rishab Shetty : “ಗೀತಾ ಆರ್ಟ್ಸ್” ಬ್ಯಾನರ್ ನಲ್ಲಿ ರಿಷಬ್ ಶೆಟ್ಟಿ ಸಿನಿಮಾ

ಭಾರತೀಯರ ಸಿನಿಮಾ ರಂಗದಲ್ಲಿಯೇ ಕಾಂತಾರ ಹೊಸ ಇತಿಹಾಸ ಸೃಷ್ಟಿಸಿದೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿ ಮೂಡಿ ಬಂದಿರುವ ಕಾಂತಾರ ಸೂಪರ್ ಹಿಟ್ ಆಗಿದೆ. ಮಾತ್ರವಲ್ಲದೇ ಕಾಂತಾರ ಮೂಲಕ ನಟ ರಿಷಬ್‌(Rishab Shetty ) ವಿಶ್ವದಾದ್ಯಂತ ಖ್ಯಾತಿ ಗಳಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ವೀಕ್ಷಿಸಿದ ಸಿನಿಗಣ್ಯರು ಸಿನಿಮಾ ಹಾಗೂ ರಿಷಬ್‌ ಶೆಟ್ಟಿ ಬಗ್ಗೆ ಗುಣಗಾನ ಮಾಡಿದ್ದಾರೆ. ಕಿರಿಕ್ ಪಾರ್ಟಿ, ರಿಕ್ಕಿ, ಸ.ಹಿ.ಪ್ರಾ.ಶಾಲೆ ಕಾಸರಗೋಡು ಸೇರಿದಂತೆ ಮುಂತಾದ ಸೂಪರ್ ಹಿಟ್ ಚಿತ್ರ ನೀಡಿದ ಅವರು ‘ಕಾಂತಾರ’ ಚಿತ್ರದ ಮೂಲಕ ಮತ್ತೊಂದು ದೊಡ್ಡ ಯಶಸ್ಸು ಪಡೆದುಕೊಂಡಿದ್ದಾರೆ. ಈ ಸಿನಿಮಾವು ಭಾರತೀಯ ಸಿನಿಪ್ರೇಕ್ಷಕರನ್ನು ಮಾತ್ರವಲ್ಲದೇ ವಿದೇಶಿಗರು ಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಸಿನಿಮಾರಂಗದಲ್ಲಿ ರಿಷಬ್ ಶೆಟ್ಟಿ ಖ್ಯಾತಿ ಹೆಚ್ಚಾಗಲು ಕಾರಣವಾಗಿದೆ. ಅಷ್ಟೇ ಅಲ್ಲದೇ ರಿಷಬ್‌ ಶೆಟ್ಟಿ ಅಲ್ಲು ಅರ್ಜುನ್ “ಗೀತಾ ಆರ್ಟ್ಸ್” ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರ ‘ಗೀತಾ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಚಿತ್ರ ಮಾಡಲು ರಿಷಬ್‌ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಮಾತನ್ನು ಸ್ವತಃ ಅಲ್ಲು ಅರವಿಂದ್ ಖಚಿತಪಡಿಸಿದ್ದಾರೆ. ‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ಮಂದಿ ಈ ಚಿತ್ರಕ್ಕೆ ಉತ್ತಮ ರೇಟಿಂಗ್ ನೀಡಿದ್ದಾರೆ. ಈ ಸಿನಿಮಾವನ್ನು ವೀಕ್ಷಿಸಿದ ಹೊರ ರಾಜ್ಯದವರು ಹಾಗೂ ವಿದೇಶಿಗರ ಕುತೂಹಲವನ್ನು ಕೆರಳಿಸಿದೆ. ಹೆಚ್ಚಿನ ಹೊರ ಪ್ರದೇಶದವರು ಈ ಸಿನಿಮಾವನ್ನು ಬಹಳಷ್ಟು ಕೂತುಹಲದಿಂದ ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಕಾಂತಾರ ಸಿನಿಮಾವು ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ಬಿಡುಗಡೆಯಾಗಿ ಸಿನಿಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಇಂದು (ಅಕ್ಟೋಬರ್ 20) ಚಿತ್ರ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಕಾಂತಾರ ಸಿನಿಮಾವನ್ನು ತೆಲುಗಿನಲ್ಲಿ ಅಲ್ಲು ಅರವಿಂದ್ ಬಿಡುಗಡೆ ಮಾಡಿದ್ದಾರೆ, ಹಾಗೆ ಸಿನಿಮಾವನ್ನು ಅವರು 3 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾವು ಎಲ್ಲಡೆ ಉತ್ತಮ ಲಾಭವನ್ನು ತಂದು ಕೊಟ್ಟಿರುವುದಲ್ಲದೇ, ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಲ್ಲೂ ಕೂಡ ಉತ್ತಮ ಲಾಭವನ್ನು ತಂದುಕೊಟ್ಟಿರುತ್ತದೆ.

ಇದನ್ನೂ ಓದಿ : Chetan Kantara : ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ ವಿರುದ್ಧ ದೂರು ದಾಖಲು

ಇದನ್ನೂ ಓದಿ : ಹೋಟೆಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ

ಇದನ್ನೂ ಓದಿ : Kantara Effect : ಕಾಂತಾರ ಸಕ್ಸಸ್, ದೈವನರ್ತಕರಿಗೆ 2 ಸಾವಿರ ರೂ. ಮಾಶಾಸನ

ಇದೇ ಖುಷಿಯಲ್ಲಿ ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಆಸೆಯನ್ನು ಅಲ್ಲು ಅರವಿಂದ್ ವ್ಯಕ್ತಪಡಿಸಿಕೊಂಡಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿ ಕೂಡ ಯೆಸ್ ಎಂದಿದ್ದಾರೆ. ಇತ್ತೀಚೆಗಷ್ಟೇ ಅಲ್ಲು ಅರವಿಂದ್ ಈ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ನಲ್ಲಿ ಕೂಡಲೇ ಸಿನಿಮಾ ಮಾಡುವಂತೆ ರಿಷಬ್ ಶೆಟ್ಟಿಗೆ ಹೇಳಿದ್ದೇನೆ. ಅವರು ತಕ್ಷಣ ಒಪ್ಪಿಕೊಂಡರು. ಶೀಘ್ರದಲ್ಲೇ ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ. ಈ ಸುದ್ದಿ ಕೇಳಿ ರಿಷಬ್ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

Rishabh Shetty’s movie under “Geeta Arts” banner

Comments are closed.