Diwali Festival 2022:ದೀಪಾವಳಿ ಹಿನ್ನೆಲೆ, ಪ್ರಯಾಣಿಕರಿಗಾಗಿ 82 ವಿಶೇಷ ರೈಲುಗಳಿಗೆ ಚಾಲನೆ

ನವದೆಹಲಿ :(Diwali Festival 2022) ದೀಪಾವಳಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಈ ಬಾರಿ ವಿಶೇಷ ರೈಲುಗಳನ್ನು ಆರಂಭಿಸಿದೆ. ಈಗಾಗಲೇ ನವದೆಹಲಿ – ಪಾಟ್ನಾ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಯೋಜನೆಯನ್ನು ಆರಂಭಿಸಿದೆ. ಇದೀಗ ಹೊಸ 82 ವಿಶೇಷ ರೈಲುಗಳ ಸಂಚಾರಕ್ಕೆ ಇಂದು ಚಾಲನೆ ನೀಡಲಾಗಿದೆ. ಒಡಿಶಾದ ಭುವನೇಶ್ವರದಲ್ಲಿ ರಾಜ್ಯದ ರೈಲ್ವೆ ಸಚಿವರಾದ ಅಶ್ವಿನ್‌ ವೈಷ್ಣವ್‌ 82 ವಿಶೇಷ ರೈಲುಗಳಿಗೆ ಚಾಲನೆ ನೀಡುವ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ರೈಲ್ವೆ ಇಲಾಖೆಯಲ್ಲಿಯೇ ಮೊದಲ ಬಾರಿಗೆ ಅಲ್ಯುಮೀನಿಯಂ ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಒದಗಿಸಲಾಗಿದೆ. ದೇಶದ ಮೊದಲ ಅಲ್ಯುಮೀನಿಯಂ ರೈಲು ಇಂದು ಪ್ರಯಾಣ ಬೆಳೆಸಿದೆ. ಹಿಂದಿನ ರೈಲಿಗಿಂತ ಈ ವಿಶೇಷ ರೈಲು ಕೊಂಚ ವಿಭಿನ್ನವಾಗಿದೆ. ಹೆಚ್ಚಿನ ಜನರ ಸಂಚಾರಕ್ಕೆ ಈ ರೈಲಿನಲ್ಲಿ ಅವಕಾಶವಿದೆ. ಅಲ್ಲದೇ ಮೊದಲ ಅಲ್ಯುಮೀನಿಯಂ ರೈಲು ಆಗಿರುವುದರಿಂದ ಇತರ ರೈಲುಗಳಿಗೆ ಹೋಲಿಸಿದ್ರೆ 180 ಟನ್‌ ಗಳಷ್ಟು ಹಗುರವಾಗಿದೆ. ಹೀಗಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ದೂರವನ್ನು ಪ್ರಯಾಣಿಸಲು ಸಾಧ್ಯವಾಗಲಿದೆ. ವಿಶೇಷ ಎಕ್ಸ್‌ ಪ್ರೆಸ್‌ ರೈಲು ಹೊರಡುವ ದಿನದಂದು ವಸತಿ ಸೌಕರ್ಯ ಹೊಂದಿರುವ ಎಸಿ ರೈಲಿನ ವ್ಯವಸ್ಥೆಯು ಕೂಡ ಇದೆ. ವಿಶೇಷ ರೈಲು ಮತ್ತುಎಸಿಯನ್ನು ಹೊಂದಿರುವ ರೈಲು ಹೊರಡುವ ಸಮಯ ಮತ್ತು ಮಾರ್ಗದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:Diwali Festival 2022 : ಕರಾವಳಿಯಲ್ಲಿ ವಿಶೇಷ ದೀಪಾವಳಿ : ಏನಿದು “ಬಲೀಂದ್ರ ಪೂಜೆ”

ಇದನ್ನೂ ಓದಿ:Scientific Reason Behind Diwali:ದೀಪಾವಳಿ ಆಚರಣೆಯ ಹಿಂದಿದೆ ವೈಜ್ಞಾನಿಕ ಕಾರಣ : ನಿಮಗಿದು ಗೊತ್ತೆ ?

02250 ನವದೆಹಲಿ – ಪಾಟ್ನಾ ದ ವಿಶೇಷ ಎಕ್ಸ್‌ ಪ್ರೆಸ್‌ ರೈಲು ದಿನಾಂಕ22.10.2022, 25.10.2022, ಮತ್ತು 27.10.2022 ರಂದು 7.10 ರ ಸಮಯಕ್ಕೆ ನವದೆಹಲಿಯಿಂದ ಹೊರಟು ಪಾಟ್ನಾದ ರೈಲ್ವೆ ಸ್ಟೆಷನ್‌ ಅನ್ನು ಮರುದಿನ ಬೆಳಿಗ್ಗೆ 6.50 ತಲುಪಲಿದೆ.

02249 ಪಾಟ್ನಾ – ನವದೆಹಲಿಯ ವಿಶೇಷ ಎಕ್ಸ್‌ ಪ್ರೆಸ್‌ ರೈಲು ದಿನಾಂಕ 23.10.2022 ಮತ್ತು 26 .10.2022 ರಂದು 09.00ರ ಸಮಯಕ್ಕೆ ಪಾಟ್ನಾದಿಂದ ಹೊರಟು ರಾತ್ರಿ 8.55 ಕ್ಕೆ ನವದೆಹಲಿ ಆಗಮಿಸಲಿದೆ.

02250/ 02249 ನವದೆಹಲಿ- ಪಾಟ್ನಾ ಎಸಿಯನ್ನು ಹೊಂದಿರುವ ರೈಲು ಕಾನ್ಪುರ್‌ ಸೆಂಟ್ರಲ್‌, ಪ್ರಯಾಗರಾಜ್, ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ನಿಲ್ದಾಣಗಳು ಇರುವಂತಹ ಮಾರ್ಗದಿಂದ ಸಂಚರಿಸುತ್ತದೆ.

Diwali festival , 82 special trains run for passengers

Comments are closed.