ಸೋಮವಾರ, ಏಪ್ರಿಲ್ 28, 2025
HomeCinemaAsha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ

Asha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ

- Advertisement -

ನಾಯಕಿಯರು ಅಂದ್ರೇ ಡಬ್ಬಿಂಗ್ ಕೂಡ ಮಾಡೋದಿಲ್ಲ ಅನ್ನೋ ಮಾತಿದೆ. ಆದರೆ ಈ ನಟಿ ಮಾತ್ರ ಡಬ್ಬಿಂಗ್ ಮಾತ್ರವಲ್ಲ ನಟನೆ, ಡ್ಯಾನ್ಸಿಂಗ್ ಹಾಗೂ ಹಾಡು ಹಾಡೋದಿಕ್ಕೂ ಸೈ ಎನ್ನಿಸಿಕೊಂಡಿದ್ದಾರೆ. ಹೌದು ಇದ್ಯಾವ ನಟಿ ಬಗ್ಗೆ ಮಾತಾಡ್ತಿದ್ದೀವಿ ಎಂದ್ರಾ ಅದು ಮತ್ಯಾರು ಅಲ್ಲ ಅಪ್ಪಟ ಕನ್ನಡತಿ , ಮಲೆನಾಡ ಹುಡುಗಿ, ಮಿಸ್ ಸುಪ್ರಾ ಇಂಟರ್ ನ್ಯಾಶನಲ್ ಖ್ಯಾತಿಯ ಮಿಸ್ ಆಶಾ ಭಟ್ (Asha Bhat ).

ಹೌದು ತೆಳ್ಳಗೆ,ಬೆಳ್ಳಗೆ ಬಳುಕೋ ಬಳ್ಳಿಯಂತಿರೋ ನಟಿ ಆಶಾ ಭಟ್ ನಟನೆ ಮಾತ್ರವಲ್ಲ ತಮ್ಮಲ್ಲಿರೋ ವಿಶೇಷ ಟ್ಯಾಲೆಂಟ್ ಗಳಿಂದನೇ ಸಖತ್ ಫೇಮಸ್. ರಾಬರ್ಟ್ ಸಿನಿಮಾದಲ್ಲಿ ಮಿಂಚಿದ ಈ ಚೆಂದುಳ್ಳಿ ಚೆಲುವೆಗೆ ಅದ್ಯಾಕೋ ಗೊತ್ತಿಲ್ಲ ಹೇಳಿಕೊಳ್ಳುವಂತ ಅವಕಾಶಗಳು ಒಲಿಯಲಿಲ್ಲ. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ನಟಿ ಆಶಾ ಭಟ್ ತಮ್ಮ ಸ್ಪೆಶಲ್ ಟ್ಯಾಲೆಂಟ್ ನಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.

ಅಪ್ಪಟ ಮಲೆನಾಡಿನ ಹುಡುಗಿಯಾಗಿರೋ ಆಶಾ ಭಟ್ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಈಗಾಗಲೇ ಹಲವಾರು ಹಾಡು ಹೇಳಿ ಪ್ರೇಕ್ಷಕರ ಮನಗೆದ್ದಿರೋ ಆಶಾ ಭಟ್ ಮತ್ತೊಮ್ಮೆ ರಾಮಮಂತ್ರವ ಜಪಿಸೋ ಮನುಜಾ ಎಂಬ ಹಾಡಿನ ಮೂಲಕ ಮತ್ತೊಮ್ಮೆ ಜನರ ಮನಗೆದ್ದಿದ್ದಾರೆ. ಸುಶ್ರಾವ್ಯವಾಗಿ, ರಾಗಬದ್ಧವಾಗಿ,ಇಂಪಾಗಿ ಆಶಾ ಭಟ್ ಹಾಡಿರೋ ಈ ಭಕ್ತಿಗೀತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಂಗೀತ ಅಭ್ಯಾಸ ಮಾಡಿದ್ದರೂ ಆಶಾ ಭಟ್ ಹಾಡುವುದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲವಂತೆ. ಆದರೆ ಸುಮ್ನೇ ಒಮ್ಮೆ ಅಮೃತ ವರ್ಷಿಣಿ ಸಿನಿಮಾದ ತುಂತುರು ಅಲ್ಲಿ ನೀರ ಹಾಡು ಹಾಡನ್ನು ಹಾಡಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಆ ವಿಡಿಯೋ ನೋಡಿದ ಆಶಾ ಭಟ್ ಅಭಿಮಾನಿಗಳು ಸಖತ್ ಖುಷಿ ಯಾಗಿದ್ದು ಮತ್ತಷ್ಟು ಹಾಡು ಹೇಳುವಂತೆ ಒತ್ತಾಯಿಸಿದ್ದರು. ಇದೆ ಕಾರಣಕ್ಕೆ ಆಶಾ ಈಗ ಒಂದೊಂದೆ ಹಾಡು ಹೇಳಿ ವಿಡಿಯೋವನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅವಕಾಶ ಸಿಕ್ಕರೇ ತಮಿಳು, ತೆಲುಗು, ಹಿಂದಿ, ಇಂಗ್ಲೀಷ್ ಭಾಷೆಯಲ್ಲೂ ಹಾಡಲು ಸಿದ್ಧ ಎಂದಿದ್ದಾರೆ . ಕೇವಲ ಸಂಗೀತ ಮಾತ್ರವಲ್ಲ ಆಶಾ ಭಟ್ ಭರತನಾಟ್ಯ ಸೇರಿದಂತೆ ಸಾಂಪ್ರದಾಯಿಕ ನೃತ್ಯ ಪ್ರಾಕಾರಗಳನ್ನು ಅಭ್ಯಾಸ ಮಾಡಿದ್ದು, ಮಾರ್ಷಲ್ ಆರ್ಟ್ಸ್ ಕೂಡ ಕಲಿತಿದ್ದಾರಂತೆ. ಒಟ್ಟಿನಲ್ಲಿ ನಟಿ ಆಶಾ ಭಟ್ ನಟನೆಯ ಜೊತೆ ತಮ್ಮ ಪ್ರತಿಭೆಯಿಂದಲೂ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ.

ಇದನ್ನೂ ಓದಿ : ಕಾಪು ಮಾರಿಗುಡಿಗೆ ರಾಧೇ ಶ್ಯಾಮ್ ಬೆಡಗಿ ಪೂಜಾ ಹೆಗ್ಡೆ : ಸೋಲಿನಿಂದ ಕಂಗೆಟ್ಟ ನಟಿಗೆ ದೇವರ ಅಭಯ

ಇದನ್ನೂ ಓದಿ : ದಿ ಕಾಶ್ಮೀರಿ ಫೈಲ್ಸ್ ಬಗ್ಗೆ ಅಪಪ್ರಚಾರ : ವೀಕಿಪಿಡಿಯಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ಗರಂ

Robert Actress Asha Bhat as a Singer, Singing Rama Mantra

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular