ಆರ್ ಮಾಧವನ್ (R Madhava) ನಟನೆಯ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್'(Rocketry: The Nambi Effect) ಜುಲೈ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಮಾಜಿ ಇಸ್ರೋ ವಿಜ್ಞಾನಿ ಮತ್ತು ಏರೋಸ್ಪೇಸ್ ಇಂಜಿನಿಯರ್, ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ. ಆರ್ ಮಾಧವನ್ ಅವರು ಹೆಸರಾಂತ ವಿಜ್ಞಾನಿಯ ಪ್ರಮುಖ ಪಾತ್ರವನ್ನು ಅಭಿನಯಿಸಿದ್ದಾರೆ.
52 ವರ್ಷ ವಯಸ್ಸಿನ ಮಾಧವನ್, ಚಿತ್ರದಲ್ಲಿ ನಟಿಸುವುದರ ಜೊತೆಗೆ ಚಿತ್ರವನ್ನು ನಿರ್ದೇಶಿಸಿದ್ದಾರೆ, ನಿರ್ಮಿಸಿದ್ದಾರೆ ಮತ್ತು ಬರೆದಿದ್ದಾರೆ. ರಾಕೆಟ್ರಿ: ನಂಬಿ ಎಫೆಕ್ಟ್ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಈಗಾಗಲೇ ಪಡೆದಿದೆ. ತಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಮಾಧವನ್ ಥ್ರಿಲ್ ಆಗಿದ್ದಾರೆ.ಇತ್ತೀಚೆಗೆ, ಅವರು ಟ್ವಿಟರ್‌ನಲ್ಲಿ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ನ ಬಾಕ್ಸ್ ಆಫೀಸ್ ಪ್ರದರ್ಶನದ ಕುರಿತು ಲೇಖನದ ಲಿಂಕ್ ಅನ್ನು ಹಂಚಿಕೊಂಡಾಗ IMDB ನಲ್ಲಿ ತನ್ನ ಚಿತ್ರವು 9.3 ರ ಅತ್ಯುತ್ತಮ ರೇಟಿಂಗ್ ಅನ್ನು ಪಡೆದುಕೊಂಡಿದೆ ಎಂದು ಬಹಿರಂಗಪಡಿಸಿದರು. “ಆರ್ ಮಾಧವನ್ ಅವರ ‘ರಾಕೆಟ್ರಿ’ ಗಲ್ಲಾಪೆಟ್ಟಿಗೆಯಲ್ಲಿ ಬೆಳವಣಿಗೆಗೆ ಸಾಕ್ಷಿಯಾಗಿದೆ, 9.2 ರೇಟಿಂಗ್‌ಗಳೊಂದಿಗೆ IMDB ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ, ಈಗ ಅದು 9.3ಕ್ಕೆ ತಲುಪಿದೆ ” ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ.
ಮಾಧವನ್ ಅವರ ಟ್ವೀಟ್ 11,000 ಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ವೈರಲ್ ಆಗಿದೆ. ನಂಬಿ ನಾರಾಯಣನ್ ಅವರು ಗೂಢಚಾರಿಕೆ ಹಗರಣದ ಸುಳಿಯಲ್ಲಿ ಸಿಕ್ಕಿಬಿದ್ದಿದ್ದರು ಮತ್ತು 1990 ರ ದಶಕದಲ್ಲಿ ಬೇಹುಗಾರಿಕೆಯ ಸುಳ್ಳು ಆರೋಪ ಹೊರಿಸಲಾಗಿತ್ತು ಎಂಬುದು ಉಲ್ಲೇಖಾರ್ಹ. ಜನರಿಗೆ ಪರಿಚಿತವಲ್ಲದ ನಾಯಕನ ಕಥೆಯನ್ನು ಜನರಿಗೆ ತರಲು ರಾಕೆಟ್ರಿ: ದಿ ನಂಬಿ ಎಫೆಕ್ಟ್ ಮಾಡಲು ನಿರ್ಧರಿಸಿದ್ದೇನೆ ಎಂದು ನಟ ಬಹಿರಂಗಪಡಿಸಿದರು.
ಮಾಧವನ್ ಅವರ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಬಝ್ ಅನ್ನು ಸೃಷ್ಟಿಸಿದೆ ಮತ್ತು ಕಳೆದ ಕೆಲವು ದಿನಗಳಿಂದ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ ಆಗಿದೆ. ಮೆಗಾಸ್ಟಾರ್ ರಜನಿಕಾಂತ್ ಇತ್ತೀಚೆಗೆ ಆರ್ ಮಾಧವನ್ ಅವರು ಅತ್ಯುತ್ತಮವಾದ ಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ಹೊಗಳಿದ್ದರು. ರಜನಿಕಾಂತ್ ಟ್ವಿಟ್ಟರ್‌ನಲ್ಲಿ ತಮಿಳಿನಲ್ಲಿ ವಿಶೇಷ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ ಮತ್ತು ರಾಕೆಟ್ರಿ: ನಂಬಿ ಎಫೆಕ್ಟ್ ಪ್ರತಿಯೊಬ್ಬರೂ ನೋಡಲೇಬೇಕಾದದ್ದು ಎಂದು ಹೇಳಿದ್ದಾರೆ.
ರಾಕೆಟ್ರಿ: ನಂಬಿ ಎಫೆಕ್ಟ್ ಚಿತ್ರದಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಿಂದಿ ಮತ್ತು ಇಂಗ್ಲಿಷ್ ಆವೃತ್ತಿಗಳಲ್ಲಿ ಕಿಂಗ್ ಖಾನ್ ಪತ್ರಕರ್ತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Ola Cab Driver Arrested: ಚೆನ್ನೈ ಮಹಾಬಲಿಪುರಂನಲ್ಲಿ ಒಟಿಪಿ ವಿಷಯಕ್ಕೆ ವಾಗ್ವಾದ ; ಓಲಾ ಚಾಲಕನಿಂದ ಟೆಕ್ಕಿಯ ಹತ್ಯೆ
(Rocketry: Nambi effect getting huge response )