Malaika Arora : ಪಾರದರ್ಶಕ ಉಡುಪು ಧರಿಸಿದ ಮಲೈಕಾ ಅರೋರಾ : ಕಾಲೆಳೆದ ನೆಟ್ಟಿಗರು

Malaika Arora : ಮುಂಬೈನಲ್ಲಿ ಇತ್ತೀಚಿಗೆ ನಡೆದ ಫೆಮಿನಾ ಮಿಸ್​ ಇಂಡಿಯಾ 2022 ಸಮಾರಂಭದಲ್ಲಿ ಕನ್ನಡತಿ ಉಡುಪಿ ಮೂಲದ ಸಿನಿ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್​ ನಟಿ ಮಲೈಕಾ ಅರೋರಾ ಅಮೆರಿಕನ್​ ಮಾಡೆಲ್​​ ಕಿಮ್​ ಕಾರ್ಡಶಿಯಾನ್​ ಅವರ ನೋಟವನ್ನು ನಕಲು ಮಾಡಲು ಹೋಗಿ ನೆಟ್ಟಿಗರಿಂದ ಸಖತ್​ ಟ್ರೋಲ್​ ಆಗ್ತಿದ್ದಾರೆ . ಸೆಲಬ್ರಿಟಿ ಡಿಸೈನರ್​ ಮೇನಕಾ ಹರಿ ಸಿಂಘಾನಿ ವಿನ್ಯಾಸಗೊಳಿಸಿರುವ ಮಿನುಗುವ, ಡೀಪ್​ ನೆಕ್​ಲೈನ್​​ ಹೊಂದಿರುವ ಫಿಶ್​ ಟೈಲ್​ ಸಿಥ್ರೂ ಗೌನ್ ಇದಾಗಿದೆ. ನ್ಯೂಡ್​ ಮೇಕಪ್​, ನುಣುಪಾದ ಕೂದಲು ಹಾಗೂ ಕೆಂಪು ಬಣ್ಣದ ನೇಲ್​ಪೇಯಿಂಟ್​​ಗಳನ್ನು ಮಲೈಕಾ ಅರೋರಾ ಧರಿಸಿದ್ದರು.

‘ಫಿಟ್ನೆಸ್ ಕ್ವೀನ್’ ಎಂದು ಕರೆಯಲ್ಪಡುವ ಮಲೈಕಾ ಅವರು ನಟರಾದ ನೇಹಾ ಧೂಪಿಯಾ ಮತ್ತು ಡಿನೋ ಮೋರಿಯಾ ಅವರೊಂದಿಗೆ ಗಾಲಾ ಸಮಾರಂಭದಲ್ಲಿ ತೀರ್ಪುಗಾರರ ಸದಸ್ಯರಲ್ಲಿ ಒಬ್ಬರಾಗಿದ್ದರು. ಇದು ಸೀ-ಥ್ರೂ ಗೌನ್ ಆಗಿದ್ದರಿಂದ, ಅವಳ ವ್ಯತಿರಿಕ್ತ ಒಳಉಡುಪುಗಳು ನೆಟಿಜನ್‌ಗಳಿಂದ ಗಮನ ಸೆಳೆದವು.

ನೀಳವಾದ ಕಂಠರೇಖೆಯನ್ನು ಹೊಂದಿದ್ದ ಈ ಡ್ರೆಸ್​​ಗೆ ಮಲೈಕಾ ಅರೋರಾ ಚೋಕರ್​ ಧರಿಸಿದ್ದರು. ಎದೆಯ ಸೀಳುಗಳನ್ನು ಸ್ಪಷ್ಟವಾಗಿ ತೋರಿಸುತ್ತಿದ್ದ ಡ್ರೆಸ್​ ಇದಾಗಿದ್ದು ಮಲೈಕಾ ಮೈಮಾಟ ಸಂಪೂರ್ಣವಾಗಿ ಕಾಣುವಷ್ಟು ಫಿಟ್​ ಆಗಿತ್ತು. ಈ ಕಾರ್ಯಕ್ರಮದಲ್ಲಿ ಮಲೈಕಾ ಅರೋರಾ ಜ್ಯೂರಿ ಮೆಂಬರ್​ ಆಗಿದ್ದರು. ಮಲೈಕಾ ಅರೋರಾ ಜೊತೆಯಲ್ಲಿ ನೇಹಾ ಧೂಪಿಯಾ ಹಾಗೂ ಡಿನೋ ಮೋರಿಯಾ ಕೂಡ ನಿರ್ಣಾಯಕರ ಸ್ಥಾನ ಅಲಂಕರಿಸಿದ್ದರು. ಇದು ಸೀಥ್ರೂ ಗೌನ್​ ಆಗಿದ್ದರಿಂದ ಮಲೈಕಾ ಧರಿಸಿದ್ದ ಒಳ ಉಡುಪು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.


ಮಲೈಕಾ ಅರೋರಾ ಉಡುಪನ್ನು ಅಮೆರಿಕದ ಮಾಡೆಲ್​ ಕಿಮ್​ ಕಾರ್ಡಶಿಯಾನ್​​ರ ಪಾರದರ್ಶಕ ಗೌನ್​ ನೋಟಕ್ಕೆ ಹೋಲಿಕೆ ಮಾಡಲಾಗಿದೆ. ಮಲೈಕಾ ಕಿಮ್ ಕಾರ್ಡಶಿಯಾನ್​ ಆಗಲು ಯತ್ನಿಸುತ್ತಿದ್ದಾಳೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಇನ್ನೂ ಕೆಲವರು ನೀವು ಬ್ರಾ ಹಾಗೂ ಒಳ ಉಡುಪು ಮಾತ್ರ ಧರಿಸಿ ಬಂದಿದ್ದರೂ ಸಾಕಿತ್ತು ಎಂದಿದ್ದಾರೆ.

ಇದನ್ನು ಓದಿ : kishore pattikonda hospitalised : ‘ಜೇಮ್ಸ್​’ ಸಿನಿಮಾ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆಸ್ಪತ್ರೆಗೆ ದಾಖಲು : ಸ್ಥಿತಿ ಗಂಭೀರ

ಇದನ್ನೂ ಓದಿ : Racist Abuse : ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರಿಗೆ ಇಂಗ್ಲೀಷರಿಂದ ಜನಾಂಗೀಯ ನಿಂದನೆ !

Malaika Arora trolled for ‘trying to be Kim Kardashian’ as she wears THIS under a see-through gown

Comments are closed.