Rocking Star Yash and Radhika Pandit : ಹಬ್ಬ ಯಾವುದೇ ಇರಲಿ ಅದರ ಅಂದ ಹೆಚ್ಚಿಸೋದ್ರಲ್ಲಿ ಸ್ಯಾಂಡಲ್ ವುಡ್ ಮಂದಿ ಹಿಂದೆ ಬೀಳೋದಿಲ್ಲ. ಸಾಲು ಸಾಲು ಹಿಂದೂ ಹಬ್ಬಗಳ ಬಳಿಕ ಕಾಲಿಟ್ಟ ವರ್ಷದ ಕೊನೆಯ ಸೆಲಿಬ್ರೆಶನ್ ಕ್ರಿಸ್ಮಸ್ ಕೂಡ ಸ್ಯಾಂಡಲ್ ವುಡ್ ಸ್ಟಾರ್ಸ್ ಮನೆಯಲ್ಲಿ ಅದ್ದೂರಿಯಾಗಿ ನಡೆದಿದ್ದು ನಟಿ ರಾಧಿಕಾ ಪಂಡಿತ್ ಮನೆ ಶೃಂಗರಿಸಿ ಕೈಯ್ಯಾರೇ ಕೇಕ್ ತಯಾರಿಸಿ ಸಂಭ್ರಮಿಸಿದ್ದಾರೆ.

ಸ್ಯಾಂಡಲ್ ವುಡ್ ನಟ-ನಟಿಯರು ಯಾವಾಗಲೂ ಸೆಲಿಬ್ರೇಶನ್ ಮಾಡೋಕೆ ರೆಡಿ ಇರ್ತಾರೆ.ಹೀಗಾಗಿ ಹಬ್ಬ ಯಾವುದೇ ಇದ್ದರೂ ಆಚರಣೆ ಅದ್ದೂರಿಯಾಗಿ ನಡೆಯುತ್ತೆ. ಕ್ರಿಸ್ಮಸ್ ಕೂಡ ಚಂದನವನದ ತಾರೆಯರ ಮನೆಯಲ್ಲಿ ಸಂಭ್ರಮದಿಂದಲೇ ನಡೆದಿದೆ. ಅದರಲ್ಲೂ ಸ್ಯಾಂಡಲ್ ವುಡ್ ನ ಫರ್ಪೆಕ್ಟ್ ಪೇರ್ ಅನ್ನಿಸಿಕೊಂಡಿರೋ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಮನೆಯಲ್ಲೂ ಸಂಭ್ರಮಕ್ಕೇನು ಕೊರತೆಯಾಗಿಲ್ಲ.

ತಮ್ಮ ಇಬ್ಬರು ಮಕ್ಕಳು ಯಥರ್ವ್ ಮತ್ತು ಆಯ್ರಾ ಜೊತೆ ಮನೆಯಲ್ಲೇ ಅದ್ದೂರಿಯಾಗಿ ಕ್ರಿಸ್ಮಸ್ ಸೆಲಿಬ್ರೆಟ್ ಮಾಡಿದ್ದಾರೆ. ಮನೆಯಲ್ಲಿ ಕ್ರಿಸ್ಮಸ್ ಟ್ರೀ, ಜಿಂಗರ್ ಬೆಲ್ ಹಾಗೂ ಸಾಂತಾ ಕ್ಲಾಸ್ ಸೇರಿದಂತೆ ಎಲ್ಲ ಅಲಂಕಾರ ಮಾಡಿದ್ದು ಮಕ್ಕಳಿಗೂ ಅಲಂಕಾರ ಮಾಡಿ ರಾಧಿಕಾ ಏಸು ಕ್ರಿಸ್ತನ ಜನ್ಮದಿನವನ್ನು ಆಚರಿಸಿದ್ದಾರೆ.
ಇದನ್ನೂ ಓದಿ : ಬಂಗಾಳಿ ಬ್ಯೂಟಿ ನಟಿ ಐಂದ್ರಿತಾ ರೈ ಹೊಸ ಪೋಟೋಶೂಟ್
ಇದೆಲ್ಲದಕ್ಕಿಂತ ಮುಖ್ಯವಾಗಿ ನಟಿ ರಾಧಿಕಾ ಪಂಡಿತ್ ತಮ್ಮ ಕೈಯ್ಯಾರೇ ತಾವೇ ರುಚಿಯಾದ ಕೇಕ್ ತಯಾರಿಸಿದ್ದು ಯಮ್ಮಿ ಯಮ್ಮಿ ಕೇಕ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಕ್ರಿಸ್ಮಸ್ ಶುಭಾಶಯ ಕೋರಿದ್ದಾರೆ. ಇದಕ್ಕೂ ಮುನ್ನ ರಾಧಿಕಾ ಪಂಡಿತ್ ಯಶ್ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದು ವಿದೇಶದ ಬೀದಿಯಲ್ಲಿ ನಿಂತು ಕ್ರಿಸ್ಮಸ್ ವೈಬ್ಸ್ ಹೇಗಿದೆ ಎಂಬ ಪೋಸ್ಟ್ ಹಾಕಿದ್ದರು.

ಸದ್ಯ ತಮ್ಮ ಮುಂದಿನ ಸಿನಿಮಾದ ಸಿದ್ಧತೆಯಲ್ಲಿರೋದರಿಂದ ರಾಧಿಕಾ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿ ಕ್ರಿಸ್ಮಸ್ ಆಚರಿಸಿದ್ದಾರೆ. ರಾಧಿಕಾ ತಮ್ಮ ಬಾಲ್ಯವನ್ನು ಗೋವಾದಲ್ಲಿ ಕಳೆದಿದ್ದರಿಂದ ಹಾಗೂ ರಾಧಿಕಾ ಅಜ್ಜಿಯ ಮನೆ ಗೋವಾ ಆಗಿರೋದರಿಂದ ರಾಧಿಕಾ ಗೆ ಕ್ಯಾಥೋಲಿಕ ಸಂಸ್ಕೃತಿಯ ಒಡನಾಟವಿದೆ. ಹೀಗಾಗಿಯೇ ರಾಧಿಕಾ ಕ್ರಿಸ್ಮಸ್ ನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ಇದನ್ನೂ ಓದಿ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಗಾಯಕ ವಾಸುಕಿ ವೈಭವ್ : ಯಾರು ಈ ಹುಡುಗಿ..?
ಕೇವಲ ಕ್ರಿಸ್ಮಸ್ ಮಾತ್ರವಲ್ಲ ಹಿಂದೂ ಧರ್ಮದ ಹಬ್ಬಗಳನ್ನು ರಾಧಿಕಾ ತುಂಬಾ ಶೃದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಕೇವಲ ರಾಧಿಕಾ ಪಂಡಿತ್ ಮಾತ್ರವಲ್ಲ, ನಟಿ ಮೇಘನಾ ರಾಜ್, ನಟ ಶ್ರೀಮುರುಳಿ, ನಟಿ ಮೇಘನಾ ಶೆಟ್ಟಿ ಸೇರಿದಂತೆ ಹಲವು ನಟ-ನಟಿಯರು ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲಿಬ್ರೆಟ್ ಮಾಡಿದ್ದಾರೆ.
ಇದನ್ನೂ ಓದಿ : ಚಿರು ಸರ್ಜಾ – ರಾಯನ್ ರಾಜ್ ಸರ್ಜಾ ಪ್ರೀತಿಯ ಕುಟ್ಟಿಮಾ : ನಟಿ ಮೇಘನಾ ರಾಜ್ ಕ್ರಿಸ್ಮಸ್ ಸ್ಪೆಶಲ್ ಸೆಲಿಬ್ರೇಶನ್
Rocking Star Yash and Radhika Pandit Celebrating Christmas in House made her own cake