ಸ್ಯಾಂಡಲ್ ವುಡ್ ನಟನಾಗಿ ಕೆರಿಯರ್ ಆರಂಭಿಸಿದ ರಾಕಿಂಗ್ ಸ್ಟಾರ್ ಯಶ್ ಈಗ ಫ್ಯಾನ್ ಇಂಡಿಯಾ ಸ್ಟಾರ್. ದೇಶದಾದ್ಯಂತ ಕುತೂಹಲ ಮೂಡಿಸಿರುವ ಕೆಜಿಎಫ್-2 ಸಿನಿಮಾ ರಿಲೀಸ್ ಗೆ ಸಿದ್ಧವಾಗಿರುವ ಬೆನ್ನಲ್ಲೇ ಯಶ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ನಡೆದಿದೆ. ಈ ಮಧ್ಯೆ ಕೊರೋನಾದಿಂದ ಯಶ್ ಅದ್ದೂರಿ ಬರ್ತಡೇಗೆ ಬ್ರೇಕ್ ಬಿದ್ದಿದ್ದರೂ ಅಭಿಮಾನಿಗಳ ಸಂಭ್ರಮ ಅದ್ದೂರಿಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಯಶ್ ಕಾಮನ್ ಡಿಪಿ (Yash birthday common DP)ವೈರಲ್ ಆಗಿದೆ.
ಜನವರಿ 8ರಂದು ಅಂದ್ರೇ ಇಂದು ರಾಕಿಂಗ್ ಸ್ಟಾರ್ ಯಶ್ 36 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಈ ವರ್ಷವೂ ಅದ್ದೂರಿ ಆಚರಣೆ ಬೇಡ. ನೀವು ಇದ್ದಲ್ಲಿಂದಲೇ ಶುಭಹಾರೈಸಿ ಎಂದು ನಟ ಯಶ್ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಯಶ್ ನೀವಿದ್ದಲ್ಲಿಂದಲೇ ಶುಭಹಾರೈಸಿ ಎಂದು ಮನವಿಮಾಡಿರೋದರಿಂದ ಅದ್ದೂರಿ ಆಚರಣೆ, ಕೇಕ್ ಕಟಿಂಗ್ ಗಳಿಗೆ ಕಡಿವಾಣ ಬಿದ್ದಿದ್ದರೂ ಅಭಿಮಾನಿಗಳ ಸಂಭ್ರಮಕ್ಕೆ ಕೊರತೆಯಾಗಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಯಶ್ ವೈರೈಟಿ ವೈರೈಟಿ ಪೋಟೋಗಳು ವೈರಲ್ ಆಗ್ತಿದೆ. ಇದರ ಬೆನ್ನಲ್ಲೇ ಯಶ್ ಅಭಿಮಾನಿಗಳು ನೆಚ್ಚಿನ ನಾಯಕನ ಬರ್ತಡೇಗಾಗಿ ಕಾಮನ್ ಡಿಪಿ ಸಿದ್ಧಗೊಳಿಸಿದ್ದಾರೆ. ಕಾಮನ್ ಡಿಪಿಯನ್ನು ಯಶ್ ಗಾಗಿ ಗೂಗ್ಲಿ ಸಿನಿಮಾ ನಿರ್ದೇಶಿಸಿದ್ದ ಪವನ್ ಒಡೆಯರ್ ಬಿಡುಗಡೆಗೊಳಿಸಿದ್ದು, ನಮ್ಮ ನ್ಯಾಶನಲ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಯಶ್ ಬಳಗ ಸೃಷ್ಟಿಸಿದ ಈ ಕಾಮನ್ ಡಿಪಿ ಬಿಡುಗಡೆಗೊಳಿಸಲು ಖುಷಿಯಾಗುತ್ತಿದೆ ಎಂದು ಪವನ್ ಒಡೆಯರ್ ಟ್ವೀಟ್ ಮಾಡಿದ್ದಾರೆ.
ಯಶ್ ಬರ್ತಡೇ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 7 ಗಂಟೆಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆರಂಭವಾಗಿದ್ದು ಜನವರಿ 8 ರ ಸಂಜೆಯವರೆಗೂ ಟ್ರೆಂಡ್ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಟೀಸರ್ ಗಿಫ್ಟ್ ಮಾಡಿತ್ತು ಚಿತ್ರತಂಡ. ಆದರೆ ಈ ಭಾರಿ ಟೀಸರ್ ಬರೋದು ಡೌಟ್ ಎನ್ನಲಾಗುತ್ತಿದೆ.
Happy to release the CDP of Our national Star 🙂🙂🙂 on the occasion of his birthday from team @Yashbalaga @prathapyash8055 pic.twitter.com/4QLM6nIkA0
— Pavan Wadeyar (@PavanWadeyar) January 7, 2022
ಮೊನ್ನೆ ಮೊನ್ನೆಯಷ್ಟೇ ಯಶ್ ಪತ್ನಿ ರಾಧಿಕಾ ಜೊತೆ ಅದ್ದೂರಿ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಸೆಲಿಬ್ರೇಟ್ ಮಾಡಿದ್ದು, ಪೋಟೋಸ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನು ನಾಳೆ ಸಣ್ಣ ಪ್ರಮಾಣದಲ್ಲಿ ಯಶ್ ಬರ್ತಡೇ ಸೆಲಿಬ್ರೆಟ್ ಮಾಡೋ ಅಭಿಮಾನಿಗಳ ಆಸೆಗೂ ವೀಕೆಂಡ್ ಕರ್ಪ್ಯೂ ಅಡ್ಡಿಯಾಗಿದ್ದು, ಯಶ್ ಬರ್ತಡೆ ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತವಾಗಲಿದೆ.
(Rocking Star Yash Birthday Fan Gift, Released Common DP)