Vikrant Rona OTT 100cr Offer : ವಿಕ್ರಾಂತ್ ರೋಣ ಓಟಿಟಿ ರಿಲೀಸ್ ಗೆ 100 ಕೋಟಿ ಆಫರ್ : ನಿರ್ಮಾಪಕ ಜಾಕ್ ಮಂಜು ಹೇಳಿದ್ದೇನು ಗೊತ್ತಾ

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ನೀರಿಕ್ಷೆ ಮೂಡಿಸಿದ ಬಿಗ್ ಬಜೆಟ್ ಸಿನಿಮಾಗಳಲ್ಲಿ ವಿಕ್ರಾಂತ್ ರೋಣ ಕೂಡ ಒಂದು. ತ್ರೀಡಿ ತಂತ್ರಜ್ಞಾನದಲ್ಲಿ ಮೂಡಿ ಬರ್ತಿರೋ ಈ ಸಿನಿಮಾ ಸಖತ್ ನೀರಿಕ್ಷೆ ಹಾಗೂ ಕುತೂಹಲ ಮೂಡಿಸಿದೆ. ವಿಕ್ರಾಂತ್ ರೋಣ ಲೋಗೋ ಬುರ್ಝಾ ಖಲೀಫಾದಲ್ಲಿ ಅನಾವರಣಗೊಂಡಿತ್ತು. ಹೀಗೆ ನಾನಾ ಕಾರಣಕ್ಕೆ ರಿಲೀಸ್ ಗೂ ಮುನ್ನವೇ ಫೇಮಸ್ ಆಗಿರೋ ಸಿನಿಮಾ ಈಗ ಓಟಿಟಿಯಲ್ಲಿ ಸಖತ್ ಬೇಡಿಕೆ (Vikrant Rona OTT 100cr Offer) ಪಡೆಯೋ‌ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಕ್ರಾಂತ್ ರೋಣವನ್ನು ಥಿಯೇಟರ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಮಾಡಲು ಚಿತ್ರತಂಡ ಸಿದ್ಧವಾಗಿದೆ. ಸದ್ಯ ಸಿನಿಮಾ ರಿಲೀಸ್ ಗೆ ಫೆ.24 ರಂದು ಮುಹೂರ್ತ ಕೂಡ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಆದರೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಚಿತ್ರತಂಡ. ಈ‌ ಮಧ್ಯೆ ಸುದೀಪ್ ನಟನೆಯ ಈ ಬಹುನೀರಿಕ್ಷಿತ ಸಿನಿಮಾವನ್ನು ಓಟಿಟಿಯಲ್ಲೇ ರಿಲೀಸ್ ಮಾಡುವಂತೆ ಆಫರ್ ನೀಡಲಾಗುತ್ತಿದೆಯಂತೆ. ಎರಡು ಓಟಿಟಿ ಸಂಸ್ಥೆಗಳು ಸುದೀಪ್ ಸಿನಿಮಾಕ್ಕೆ ಆಫರ್ ನೀಡುತ್ತಿದ್ದು, ಈ ಪೈಕಿ ಒಂದು ಓಟಿಟಿ 100 ಕೋಟಿ ರೂಪಾಯಿ ಆಫರ್ ನೀಡಿದೆಯಂತೆ.

ಸದ್ಯ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಈಗಾಗಲೇ ಥಿಯೇಟರ್ ಗಳಿಗೆ ಶೇಕಡಾ 50 ರಷ್ಟು ಮಾತ್ರ ಪ್ರವೇಶಾವಕಾಶ ನೀಡಲಾಗಿದೆ. ಇನ್ನೊಂದು ತಿಂಗಳ ವೇಳೆಗೆ ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಹೀಗಾಗಿ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ರಿಲೀಸ್ ಆಗಬೇಕಿದ್ದ ಬಿಗ್ ಬಜೆಟ್ ಸಿನಿಮಾಗಳ‌ ಮೇಲೆ ಸಂಕಟದ ಕತ್ತಿ ತೂಗುತ್ತಿದೆ.

ಈ‌ ಮಧ್ಯೆ ವಿಕ್ರಾಂತ್ ರೋಣಗೆ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಎನ್ನಲಾದ 100 ಕೋಟಿ ಆಫರ್ ಬಂದಿದೆ. ಈ ವಿಚಾರವನ್ನು ಸ್ವತಃ ವಿಕ್ರಾಂತ್ ರೋಣ ನಿರ್ಮಾಪಕ ಜಾಕ್‌ಮಂಜು ಖಚಿತಪಡಿಸಿದ್ದಾರೆ. ವಿಕ್ರಾಂತ್ ರೋಣವನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಲು ವಿವಿಧ ಓಟಿಟಿಗಳಿಂದ ನಮಗೆ 95-100 ಕೋಟಿ ಆಫರ್ ಬಂದಿದೆ. ಆರ್ ಆರ್ ಆರ್ ,ರಾಧೇ ಶ್ಯಾಮ್ ನಂತಹ ಸಿನಿಮಾಗಳು ಪೋಸ್ಟ್ ಪೋನ್ ಆದ ಮೇಲೆ ನಮಗೆ ಓಟಿಟಿ ಮಧ್ಯವರ್ತಿಗಳಿಂದ ಅಫರ್ ಬರ್ತಿದೆ. ಆದರೆ ನಾವು ಈ ಆಫರ್ ಗಳನ್ನು ಪರಿಗಣಿಸುತ್ತಿಲ್ಲ.

ಎರಡು ಮೂರು ವರ್ಷಗಳಿಂದ ಶ್ರಮಪಟ್ಟು ಸಿನಿಮಾ ಮಾಡಿದ್ದೇವೆ. ಕ್ವಾಲಿಟಿಗೆ ಆದ್ಯತೆ ನೀಡಿದ್ದೇವೆ. ತ್ರೀಡಿಯಲ್ಲಿ ಕೂಡ ಸಿನಿಮಾ ಸಿದ್ಧವಾಗಿದೆ. ಇದನ್ನು ಜನರು ಥಿಯೇಟರ್ ನಲ್ಲಿ ನೋಡಿದ್ರೇನೆ ನಮಗೆ ಸಮಾಧಾನ. ಆದರೆ ಈಗ ಮೂರನೇ ಅಲೆಯ ಮಾತನ್ನಾಡುತ್ತಿದ್ದಾರೆ. ಹೀಗಾಗಿ ನಿರ್ಮಾಪಕನಾಗಿ ಈ ಆಫರ್ ಗಳನ್ನು ತೆಗೆದುಕೊಳ್ಳಬೇಕಾ ಬೇಡವಾ ಎಂಬ ಗೊಂದಲದಲ್ಲಿದ್ದೇನೆ ಎಂದು ಜಾಕ್‌ಮಂಜು ಹೇಳಿದ್ದಾರೆ.

ಇದನ್ನೂ ಓದಿ : ಪತಿ ಜೊತೆ ಪತ್ನಿಯೂ ಕ್ರಿಕೆಟ್ ಪ್ಲೇಯರ್ : ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅನುಷ್ಕಾ ಶರ್ಮಾ ಹೊಸ ಸಾಹಸ

ಇದನ್ನೂ ಓದಿ : ಸಮಂತಾ ಊ ಅಂಟಾವಾ ಸಾಂಗ್ ಹಿಂದಿತ್ತು ಕಠಿಣ ಪರಿಶ್ರಮ ವಿಡಿಯೋ ವೈರಲ್

(Sudeep new Movie Vikrant Rona OTT Release 100cr Offer, You know, producer Jack Manju said)

Comments are closed.