ಸೋಮವಾರ, ಏಪ್ರಿಲ್ 28, 2025
HomeCinemaYash Next Movie : ಕೆವಿಎನ್ ಜೊತೆ ರಾಕಿಂಗ್ ಸ್ಟಾರ್: ಯಶ್ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

Yash Next Movie : ಕೆವಿಎನ್ ಜೊತೆ ರಾಕಿಂಗ್ ಸ್ಟಾರ್: ಯಶ್ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

- Advertisement -

Yash Next Movie : ಕನ್ನಡ ಚಿತ್ರರಂಗವನ್ನು ವಿಶ್ವದ ಗಮನ ಸೆಳೆಯುವಂತೆ ಮಾಡಿದ ಗೌರವ ರಾಕಿಂಗ್ ಸ್ಟಾರ್ ಯಶ್ ಪಾಲಿಗೆ ಸಲ್ಲುತ್ತದೆ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಯಶ್ ಮುಂದಿನ ನಡೆಯೇನು ಅನ್ನೋದು ಅಭಿಮಾನಿಗಳ ಕುತೂಹಲವಾಗಿತ್ತು. ಆದರೆ ಈ ಕುತೂಹಲ ಕ್ಕೆ ಅಧಿಕೃತವಾಗಿ ಉತ್ತರ ಸದ್ಯಕ್ಕಿಲ್ಲ ಎಂದು ಯಶ್ ಸೂಚ್ಯವಾಗಿ ಅಭಿಮಾನಿಗಳಿಗೆ ಹೇಳಿದ್ದರು. ಆದರೆ ಈಗ ಈ ಕುತೂಹಲಕ್ಕೆ ಭರ್ಜರಿ ಉತ್ತರ ಸಿಕ್ಕಿದ್ದು ಸಿನಿಮಾ ನಿರ್ಮಾಣ ಕ್ಷೇತ್ರದ ದೈತ್ಯ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಜೊತೆ ಯಶ್ ಕೈಜೋಡಿಸೋದು ಬಹುತೇಕ ಖಚಿತ ಎನ್ನಲಾಗ್ತಿದೆ.

ಸದ್ಯ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಕುಟುಂಬದ ಜೊತೆ ಆಚರಿಸಿಕೊಳ್ತಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಯಶ್ ವಿದೇಶಕ್ಕೆ ಹಾರಿದ್ದಾರೆ. ಇದರ ಮಧ್ಯೆಯೇ ಯಶ್ ಕೆವಿಎನ್ ಪ್ರೊಡಕ್ಷನ್ ಹೌಸ್ ಜೊತೆ ಮುಂದಿನ ಸಿನಿಮಾ ಮಾಡೋ ಗುಟ್ಟು ಕೂಡ ಬಿಟ್ಟು ಕೊಟ್ಟಿದ್ದಾರೆ. ಯಶ್ KVN Productions ಜೊತೆ ಇರುವ ಪೋಟೋ ವೊಂದು ವೈರಲ್ ಆಗಿದ್ದು ಆ ಮೂಲಕ ಯಶ್ 19 ನೇ ಸಿನಿಮಾ ಕೆವಿಎನ್ ಪ್ರೊಡಕ್ಷನ್ ಜೊತೆ ಎಂಬುದು ಬಹುತೇಕ ಖಚಿತವಾದಂತಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

Indian Biggest Venture ಎನ್ನಿಸಿಕೊಂಡಿರೋ ಕೆವಿಎನ್ ಈಗಾಗಲೇ ಸಿನಿ ಜಗತ್ತಿನಲ್ಲಿ ಬಿಗ್ ಬಜೆಟ್ ಸಿನಿಮಾಗಳ ಮೂಲಕ ಸದ್ದು ಮಾಡಿದೆ. ಸಖತ್, ಬೈಟೂ ಲವ್, ದಂತಹ ಸಿನಿಮಾ ನಿರ್ಮಿಸಿರೋ ಕೆವಿಎನ್ ಇತ್ತೀಚಿಗಷ್ಟೇ ಧ್ರುವ್ ಸರ್ಜಾ ಹಾಗೂ ಪ್ರೇಮ್ ಕಾಮಿನೇಶನ್ ನಲ್ಲಿ ಕೆಡಿ ಸಿನಿಮಾ ನಿರ್ಮಾಣಕ್ಕೆ ಸಿದ್ಧವಾಗಿದೆ. ಅಲ್ಲದೇ ಆಸ್ಕರ್ ಅಂಗಳವನ್ನು ತಲುಪಿದ ಆರ್ ಆರ್ ಆರ್ ಸಿನಿಮಾವನ್ನು ಕನ್ನಡದಲ್ಲಿ ಡಿಸ್ಟ್ರಿಬ್ಯೂಶನ್ ಮಾಡಿದ ಕೀರ್ತಿ ಕೂಡ ಕೆವಿಎನ್ ಸಂಸ್ಥೆಗಿದೆ. ಮೂಲಗಳ ಮಾಹಿತಿ ಪ್ರಕಾರ ಈಗ ಯಶ್ ಗಾಗಿ ಕೆವಿಎನ್ ಪ್ರೊಡಕ್ಷನ್ ಹೌಸ್ ಬರೋಬ್ಬರಿ 400 ಕೋಟಿ ಬಜೆಟ್ ನಲ್ಲಿ ಸಿನಿಮಾ ನಿರ್ಮಿಸಲು ಮುಂದಾಗಿದ್ದು ಸದ್ಯದಲ್ಲೇ ಯಶ್ ಅಧಿಕೃತವಾಗಿ ಈ ಸುದ್ದಿ ಪ್ರಕಟಿಸಲಿದ್ದಾರಂತೆ.

ಮತ್ತೊಂದು ಪ್ಯಾನ್ ಇಂಡಿಯಾ ಕತೆಯೊಂದಿಗೆ ಯಶ್ ಬರೋದು ಬಹುತೇಕ ಫಿಕ್ಸ್ ಆಗಿದ್ದು, ಹುಟ್ಟುಹಬ್ಬದಂದು ಚಿತ್ರ ಅನೌನ್ಸ್ ಮಾಡೋ ನೀರಿಕ್ಷೆ ಇತ್ತು. ಆದರೆ ಕೆಲವು ಕಾರಣ ಕ್ಕಾಗಿ ಯಶ್ ಸಿನಿಮಾ ಅನೌನ್ಸ್ ಮುಂದೂಡಿದ್ದು, ಸೂಕ್ತ ಸಂದರ್ಭದಲ್ಲಿ ನಿಮ್ಮ ನೀರಿಕ್ಷೆ ಹುಸಿಯಾಗದಂತ ಸುದ್ದಿಯೊಂದಿಗೆ ಬರುತ್ತೇನೆ ಎಂದು ಯಶ್ ಹುಟ್ಟುಹಬ್ಬದ ವೇಳೆ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ಭರವಸೆ ನೀಡಿದ್ದಾರೆ. ಹೀಗಾಗಿ ಸದ್ಯದಲ್ಲೇ ಕೆವಿಎನ್ ಜೊತೆ ತಮ್ಮ ಸಿನಿಮಾದ ಬಗ್ಗೆ ಯಶ್ ಅಧಿಕೃತ ಮಾಹಿತಿ ನೀಡಲಿದ್ದಾರೆ.

ಇದನ್ನೂ ಓದಿ : ಕವಿಯಾದ ‘ನಟ ರಾಕ್ಷಸ’ ಡಾಲಿ ಧನಂಜಯ್ : ಹತ್ತು ಸಾಲುಗಳ ಕವಿತೆಯ ಹಿಂದಿನ ಮರ್ಮವೇನು ?

ಇದನ್ನೂ ಓದಿ : Actor Yash Birthday : ನಟ‌‌ ಯಶ್ ಬರ್ತ್ ಡೇ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ: ಆದ್ರೆ ಪತ್ರದ ಮೂಲಕ ರಾಕಿಂಗ್ ಸ್ಟಾರ್ ಕೊಟ್ಟ ಸಿಹಿ ಸುದ್ದಿ ಏನು..?

Rocking star Yash Next Movie with KVN Production Good news for KGF Yash fans

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular