Delhi barbaric murder: ಪ್ರಿಯಕರನ ಜೊತೆ ಸೇರಿ ಪತಿಗೆ ಸ್ಕೆಚ್‌ ಹಾಕಿದ ಪತ್ನಿ: ಕತ್ತು ಸೀಳಿ ಬೆಂಕಿ ಹಚ್ಚಿ ಬರ್ಬರ ಕೊಲೆ

ನವದೆಹಲಿ: (Delhi barbaric murder) ಪೇಪರ್‌ ಕಟರ್ ನಿಂದ ತನ್ನ ಆಪ್ತ ಸ್ನೇಹಿತನ ಕತ್ತು ಸೀಳಿ ನಂತರ ದೇಹವನ್ನು ಬೆಂಕಿ ಹಾಕಿ ಸುಟ್ಟ ಘಟನೆ ನವದೆಹಲಿಯ ವಜೀರಾಬಾದ್‌ ಪ್ರದೇಶದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ವಜೀರಾಬಾದ ನಿವಾಸಿ ರಶೀದ್‌ ( 27 ವರ್ಷ) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಮುನಿಷುದ್ದೀನ್‌ ಎಂದು ಗುರುತಿಸಲಾಗಿದೆ.

ಮುನಿಷುದ್ದೀನ್‌ ಹಾಗೂ ಮೃತ ರಶೀದ್‌ ಪತ್ನಿ ಅಕ್ರಮ ಸಂಬಂಧ ಹೊಂದಿದ್ದರು. ಮುನಿಷುದ್ದೀನ್‌ ಮತ್ತು ರಶೀದ್‌ ಅವರು ಪ್ಲಂಬರ್‌ ಮತ್ತು ಎಲೆಕ್ಟ್ರಿಷಿಯನ್‌ ಆಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ಆಪ್ತ ಸ್ನೇಹಿತರಾಗಿದ್ದರು. ಪರಸ್ಪರ ಸ್ನೇಹಿತರಾದ ಇವರು ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಮುನಿಷುದ್ದೀನ್‌ ಹಾಗೂ ರಶೀದ್‌ ಪತ್ನಿ ನಡುವೆ ಸಂಬಂಧ ಬೆಳೆದಿತ್ತು. ರಶೀದ್‌ ಮದ್ಯಪಾನ ಮಾಡಿಕೊಂಡು ಬಂದು ತನ್ನ ಪತ್ನಿಗೆ ಥಳಿಸುತ್ತಿದ್ದ. ಇದರಿಂದಾಗಿ ಬೇಸತ್ತ ಮಹಿಳೆ ಮುನಿಷುದ್ದೀನ್‌ ಜೊತೆ ಸೇರಿ ಗಂಡನನ್ನೇ ಕೊಲ್ಲಲು ಸಂಚು (Delhi barbaric murder) ರೂಪಿಸಿದ್ದಳು. ಇದಕ್ಕೆ ಯೋಜನೆಯನ್ನು ಕೂಡ ರೂಪಿಸಿದ್ದರು.

ಅದರಂತೆ ಮುನಿಷದ್ದೀನ್ ರಶೀದ್‌ನನ್ನು ರಾಮ್ ಘಾಟ್‌ಗೆ ಕರೆದೊಯ್ದುಅಲ್ಲಿ ಇಬ್ಬರು ಮದ್ಯ ಸೇವಿಸಿದ್ದಾರೆ. ಕಂಠಪೂರ್ತಿ ಕುಡಿದು ನಶೆಯಲ್ಲಿದ್ದ ರಶೀದ್‌ ಗೆ ಪೇಪರ್‌ ಕಟರ್‌ ನಿಂದ ಇರಿದಿದ್ದಾನೆ. ನಂತರದಲ್ಲಿ ಅದೇ ಕಟರ್‌ ನಿಂದ ಗಂಟಲನ್ನು ಸೀಳಿ ನಂತರದಲ್ಲಿ ಮೃತದೇಹಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದಾನೆ. ಇದಾದ ಬಳಿಕ ಸಂಚಿಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಯತ್ನ ಕೂಡ ನಡೆಸಿದ್ದಾರೆ.

ಇದನ್ನೂ ಓದಿ : Kidnap and gifted: ಮಕ್ಕಳಿಲ್ಲದ ಚಿಕ್ಕಪ್ಪನಿಗೆ ಉಡುಗೊರೆ ನೀಡಲು ಅಪ್ರಾಪ್ತ ಬಾಲಕನನ್ನು ಅಪಹರಿಸಿದ ಯುವಕ

ಇದನ್ನೂ ಓದಿ : Mother killed 3 days girlchild: ಹೆಣ್ಣಾಯ್ತು 2ನೇ ಮಗು ಎಂಬ ಅಸಮಾಧಾನ: 3 ದಿನದ ಹಸುಳೆಯನ್ನು ಕೊಂದ ಕ್ರೂರಿ ತಾಯಿ

ವಜೀರಾಬಾದ್‌ನ ರಾಮ್ ಘಾಟ್ ಎದುರು ಸುಟ್ಟ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತನಿಖೆಗೆ ಇಳಿದ ಪೊಲೀಸರಿಗೆ ಮೃತದೇಹ ಸಿಕ್ಕ ಸ್ಥಳದ ಪಕ್ಕದ ಪೊದೆಯಲ್ಲಿ ರಕ್ತ ಪತ್ತೆಯಾಗಿದೆ. ಅಲ್ಲದೇ ಪೇಪರ್‌ ಕಟರ್‌ ಹಾಗೂ ಬೆಂಕಿಕಡ್ಡಿ ಕೂಡ ಪತ್ತೆಯಾಗಿದೆ. ನಂತರದಲ್ಲಿ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಮೃತ ರಶೀದ್‌ ಜೊತೆ ಮುನಿಷುದ್ದೀನ್‌ ಇರುವುದು ಕಂಡು ಬಂದಿದೆ. ಆರೋಪಿಗೆ ಬಲೆ ಬೀಸಿದ ಪೊಲೀಸರು ಆತ ಮುಂಜಾನೆ ರೋಹಿಣಿ ಸೆಕ್ಟರ್-16ರ ಬವಾನಾ ರಸ್ತೆ ಬಳಿ ಬರುತ್ತಾನೆ ಎಂಬ ಮಾಹಿತಿಯನ್ನಿಟ್ಟುಕೊಂಡು ಆತನನ್ನು ಬ‍ಂಧಿಸುವಲ್ಲಿ ಯಶಸ್ವಿಯಾಗುತ್ತಾರೆ.

Delhi barbaric murder: Wife who sketched her husband along with lover: barbaric murder

Comments are closed.