Kidnap and gifted: ಮಕ್ಕಳಿಲ್ಲದ ಚಿಕ್ಕಪ್ಪನಿಗೆ ಉಡುಗೊರೆ ನೀಡಲು ಅಪ್ರಾಪ್ತ ಬಾಲಕನನ್ನು ಅಪಹರಿಸಿದ ಯುವಕ

ದೆಹಲಿ: (Kidnap and gifted) ಮಕ್ಕಳಿಲ್ಲದ ತನ್ನ ಚಿಕ್ಕಪ್ಪನಿಗೆ ಉಡುಗೊರೆ ನೀಡಲು ಬಯಸಿದ್ದ 21 ವರ್ಷದ ಯುವಕ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಅಪಹರಿಸಿದ್ದಾನೆ. ಗೌತಮಪುರಿ ಭಾಗ-೧ ರಲ್ಲಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕ ಅಪಹರಣವಾದವನಾಗಿದ್ದಾನೆ. ಇದೀಗ ಅಪಹರಿಸಿದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಯುವಕನ ಚಿಕ್ಕಪ್ಪನಿಗೆ ನಾಲ್ಕು ಗಂಡು ಮಕ್ಕಳು ಜನಿಸುತ್ತಾರೆ. ಅದರೆ ನಾಲ್ಕು ಮಕ್ಕಳು ಬದುಕುಳಿಯಲಿಲ್ಲ. ತನ್ನ ಚಿಕ್ಕಪ್ಪನಿಗೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ಉಡುಗೊರೆ ನೀಡಲು ಯುವಕ ಮುಂದಾಗುತ್ತಾನೆ. ಇದಕ್ಕಾಗಿಯೇ ಗೌತಮಪುರಿಯಲ್ಲಿ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನ್ನು ಅಪಹರಿಸಿ (Kidnap and gifted) ಅಲಿಘರ್‌ ನಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಸ್ಥಳಾಂತರಿಸುತ್ತಾನೆ.

ಕಾಣೆಯಾದ ಬಾಲಕನನ್ನು ತಂದೆ ಎರಡು ದಿನಗಳ ಕಾಲ ಹುಡುಕುತ್ತಾರೆ. ಸಿಗದೇ ಇದ್ದಾಗ ಪೊಲೀಸರ ಮೊರೆ ಹೋಗುತ್ತಾರೆ. ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು ಮಗು ಕಾಣೆಯಾದ ಸ್ಥಳಕ್ಕೆ ಬಂದು ವಿಚಾರಣೆ ನಡೆಸುತ್ತಾರೆ. ನೆರೆಹೊರೆಯವರನ್ನು ತನಿಖೆ ನಡೆಸಿದ್ದ ವೇಳೆ ಮಗು ಕಾಣೆಯಾದ ದಿನದಿಂದ ನೀರಜ್‌ ಎಂಬಾತ ಕೂಡ ಕಾಣೆಯಾಗಿರುವುದು ತಿಳಿದುಬಂದಿದೆ. ದಿನಗಳು ಕಳೆದರೂ ಆತ ಮನೆಗೆ ಹಿಂತಿರುಗದಿರುವುದು ತಿಳಿದು ಬರುತ್ತದೆ. ಇದೇ ಜಾಡನ್ನು ಹಿಡಿದು ಪೊಲೀಸರು ತನಿಖೆಯನ್ನು ಮುಂದುವರಿಸುತ್ತಾರೆ. ಈ ವೇಳೆ ಆತ ಆ ಊರನ್ನು ಬಿಟ್ಟು ಬೇರೆ ಕಡೆ ಹೋಗಿರುವುದು ತಿಳಿದುಬರುತ್ತದೆ.

ಶೋಧ ಕಾರ್ಯ ನಡೆಸಿದ ಪೊಲೀಸರು ಶಂಕಿತ ನೀರಜ್‌ ನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ. ಈ ವೇಳೆ ಆತ ಬಾಲಕನನ್ನು ಅಪಹರಿಸಿ (Kidnap and gifted) ಅಲಿಘರ್‌ನಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಸ್ಥಳಾಂತರಿಸಿರುವುದಾಗಿ ತಿಳಿಸುತ್ತಾನೆ. ಕಾರಣ ಕೇಳಿದಾಗ ತನ್ನ ಚಿಕ್ಕಪ್ಪನಿಗೆ ಮಕ್ಕಳಿಲ್ಲ. ಆ ಕಾರಣ ಅವರಿಗೆ ಉಡುಗೊರೆ ನೀಡಲೂ ಈ ರೀತಿಯಾಗಿ ಮಾಡಿರುವುದಾಗಿ ಆತ ಹೇಳಿಕೆ ನೀಡುತ್ತಾನೆ.

“ತನ್ನ ಚಿಕ್ಕಪ್ಪನ ಹೆಂಡತಿ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಅವರಲ್ಲಿ ಯಾರೂ ಬದುಕುಳಿಯಲಿಲ್ಲ. ಅದಕ್ಕಾಗಿಯೇ ನಾನು ಅಪ್ರಾಪ್ತ ಬಾಲಕನನ್ನು ಚಿಕ್ಕಪ್ಪನ ಬಳಿಗೆ ಕರೆದೊಯ್ದಿದ್ದೇನೆ” ಎಂದು ಹೇಳುತ್ತಾನೆ.

ಇದನ್ನೂ ಓದಿ : Mother killed 3 days girlchild: ಹೆಣ್ಣಾಯ್ತು 2ನೇ ಮಗು ಎಂಬ ಅಸಮಾಧಾನ: 3 ದಿನದ ಹಸುಳೆಯನ್ನು ಕೊಂದ ಕ್ರೂರಿ ತಾಯಿ

ಸದ್ಯ ಆರೋಪಿ ಯುವಕನನ್ನು ಪೊಲೀಸರು ಬ‍ಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ. ಮತ್ತು ಕಾಣೆಯಾದ ಬಾಲಕನನ್ನು ಸುರಕ್ಷಿತವಾಗಿ ತಂದೆಗೆ ಒಪ್ಪಿಸಿದ್ದಾರೆ.

A young man kidnaps a minor boy to give a gift to his childless uncle

Comments are closed.