ಕಿರಿಕ್’ ಬೆಡಗಿಗೆ ಕನ್ನಡದ ಈ‌‌ ಸ್ಟಾರ್ ನಟನ ಜೊತೆ ಕೆಲಸ ಮಾಡೋ‌ ಆಸೆಯಂತೆ..!

ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಕ್ಕಿಕೊಂಡಿರುತ್ತಾರೆ. ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ರಶ್ಮಿಕಾ ಮತ್ತೊಂದು ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಬಗ್ಗೆ (Rocking Star Yash – Rashmika Mandanna) ಮಾತನಾಡಿದ್ದಾರೆ. ಅದು ಏನೆಂದರೆ ನಟ ಯಶ್‌ ಜೊತೆ ಕೆಲಸ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ.

ಬಾಲಿವುಡ್‌ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದು, ಅಷ್ಟೇ ಅಲ್ಲದೇ ಸ್ಟಾರ್‌ ನಟರ ಜೊತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವಲ್ಲೇ ತೆಲುಗು, ತಮಿಳು ಸಿನಿಮಾಗಳಿಗೂ ಡೇಟ್ಸ್‌ಗಲನ್ನು ಕೊಟ್ಟಿದ್ದಾರೆ. ಇದರೊಂದಿಗೆ ರಾಮ್‌ ಚರಣ್‌, ಯಶ್‌, ಪ್ರಭಾಸ್‌ ಜೊತೆನೂ ಕೆಲಸ ಮಾಡುವ ಆಸೆಯ್ನನು ವ್ಯಕ್ತಪಡಿಸಿದ್ದಾರೆ. ಸದ್ಯ ನಟಿ ರಶ್ಮಿಕಾ ರಾಕಿಂಗ್‌ ಸ್ಟಾರ್‌ ಜೊತೆ ನಟಿಸಬೇಕು ಎಂದು ಹೇಳಿರುವುದು ಸಖತ್‌ ವೈರಲ್‌ ಆಗಿದೆ. ಈ ಸಂದರ್ಭದಲ್ಲೇ ಈ ಹಿಂದೆ ನಟಿ ರಶ್ಮಿಕಾ ನಟ ಯಶ್‌ ಬಗ್ಗೆ ಕೊಟ್ಟ ಹೇಳಿಕೆ ಕೂಡ ಚರ್ಚೆಗೆ ಬಂದಿರುತ್ತದೆ.

ರಶ್ಮಿಕಾ ಮಂದಣ್ಣ ನೀಡಿರುವ ಸಂದರ್ಶನದಲ್ಲಿ, “ನನಗೆ ಬಹಳಷ್ಟು ಜನರೊಂದಿಗೆ ಕೆಲಸ ಮಾಡಬೇಕು ಅಂತ ಆಸೆ ಇದೆ. ಪ್ರಭಾಸ್‌ ಸರ್‌ ಜೊತೆ ಕೆಲಸ ಮಾಡುವ ಆಸೆ ಇದೆ. ಅಲ್ಲು ಅರ್ಜುನ್‌ ಜೊತೆ ಕೆಲಸ ಮಾಡುತ್ತಿದ್ದೇನೆ ನನಗೆ ಖಂಡಿತವಾಗಿಯೂ ಯಶ್‌ ಸರ್‌ ಜೊತೆ ಕೆಲಸ ಮಾಡುಬೇಕು” ಎಂದು ಹೇಳಿದ್ದಾರೆ. ಹೀಗೆ ದಕ್ಷಿಣ ಭಾರತದ ಪ್ರಮುಖ ಸ್ಟಾರ್‌ ನಟರೊಂದಿಗೆ ಕೆಲಸ ಮಾಡಬೇಕು ಅಂತ ಆಸೆ ಪಟ್ಟಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸಿನಿರಂಗಕ್ಕೆ ಕಾಲಿಟ್ಟ ಆರಂಭದಲ್ಲಿಯೇ ಸಾಕಷ್ಟು ವಿವಾದಕ್ಕೆ ಸಿಲುಕಿಕೊಂಡಿದ್ದರು. ಇಂತಹದ್ದೇ ಸಂದರ್ಶನವೊಂದರಲ್ಲಿ ನಿರೂಪಕರು ಕನ್ನಡದಲ್ಲಿ ಶೋ ಆಫ್‌ ನಟ ಯಾರು? ಎಂದು ಕೇಳಿದ ಪ್ರಶ್ನೆಗೆ ರಶ್ಮಿಕಾ ಯಶ್‌ ಹೆಸರು ಎತ್ತಿದ್ದರು. ಇದು ರಾಕಿಂಗ್‌ ಸ್ಟಾರ್‌ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ನಟ ಯಶ್‌ ಕೂಡ ರಿಯಾಕ್ಟ್‌ ಮಾಡಿದ್ದರು.

ತಮ್ಮ ಪ್ರತಿಕ್ರಿಯೆಯಲ್ಲಿ ಯಶ್‌,”ನಾನೊಬ್ಬ ನಟನಾಗಿ ನಿಮ್ಮ ಪ್ರೀತಿ ಮತ್ತು ಅಭಿಮಾನ ಸಂಪಾದಿಸುವುದಷ್ಟೇ ಗುರಿಯಾಗಿಟ್ಟುಕೊಂಡಿದ್ದೇನೆ. ಆ ನಿಟ್ಟಿನಲ್ಲಿಯೇ ನಾನು ಕೆಲಸ ಮಾಡುತ್ತಿದ್ದೇನೆ. ಕೆಲವೊಮ್ಮೆ ಎದುರಾಗುವ ಇಂತಹ ಅನಗತ್ಯ ವಿಷಯಗಳನ್ನು ನಿರ್ಲ್ಯಕ್ಷಿಸುವ ಸ್ವಭಾವವನ್ನು ಬೆಳೆಸಿಕೊಂಡಿದ್ದೇನೆ. ಕೆಲವೊಮ್ಮೆ ನನ್ನನ್ನು ಪ್ರೀತಿಸುವ ಮನಸ್ಸುಗಳಿಗೆ ನೋವಾದಾಗ ಪ್ರತಿಕ್ರಿಯೆ ನೀಡದೆ ಇರೋದು ಸಾಧ್ಯವಿಲ್ಲ.

ಇದನ್ನೂ ಓದಿ : Cinema Theater – Supreme Court : ಸಿನಿಮಾ ಥಿಯೇಟರ್‌ಗಳಿಗೆ ಹೊರಗಿನ ತಿಂಡಿ ತಿನಿಸು ತರಬಹುದೇ ? ಸುಪ್ರೀಂ ಕೋರ್ಟ್ ಹೇಳಿದ್ದೇನು ?

ಇದನ್ನೂ ಓದಿ : Gadar 2 first look release : ‘ಸರ್ದಾರ್’ ಲುಕ್‌ನಲ್ಲಿ ಸನ್ನಿ ಡಿಯೋಲ್ : ಗದರ್ 2 ಫಸ್ಟ್‌ ಲುಕ್‌ ರಿಲೀಸ್‌

ಇದನ್ನೂ ಓದಿ : Yash Birthday : ನಟ ಯಶ್‌ ಮುಂದಿನ ಸಿನಿಮಾ ಯಾವುದು : ಕೊನೆಗೂ ಮೌನಮುರಿದ ಕೆಜಿಎಫ್‌ ನಟ

ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ. ಇದುವರೆಗೂ ಅವರನ್ನೂ ಭೇಟಿ ಮಾಡಿಲ್ಲ. ಮಾತು ಕೂಡ ಆಡಿಲ್ಲ. ಹಾಗಂದ ಮಾತ್ರಕ್ಕೆ ರಶ್ಮಿಕಾಗೆ ನನ್ನ ಬಗ್ಗೆ ಇಂತಹ ಅಭಿಪ್ರಾಯ ಇರಬಾರದಂತೇನೂ ಇಲ್ಲ. ಅವರ ಅಭಿಪ್ರಾಯ ಅವರದ್ದು. ಅದನ್ನು ಹೀಯಾಳಿಸುವ ಕೆಲಸ ಯಾರೂ ಮಾಡಬೇಡಿ.” ಎಂದು ಯಶ್ ಹೇಳಿದ್ದರು. ಒಟ್ಟಾರೆ ಕಿರಿಕ್‌ ಹುಡುಗಿಗೆ ಪ್ಯಾನ್‌ ಇಂಡಿಯಾ ಸ್ಟಾರ್‌ ಜೊತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

Rocking Star Yash – Rashmika Mandanna : Kirik Bedagi wants to work with this Kannada star actor..!

Comments are closed.