ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲು ಜಾರಿಯಾದ ಲಾಕ್ ಡೌನ್ ಸಿನಿಮಾ ರಂಗಕ್ಕೆ ಬಾರೀ ಹೊಡೆತ ಕೊಟ್ಟಿದೆ. ಹೀಗಾಗಿ ಸಂಕಷ್ಟಕ್ಕೆ ರಾಕಿಂಗ್ ಸ್ಟಾರ್ ಯಶ್ ಮಿಡಿದಿದ್ದಾರೆ. ಬರೋಬ್ಬರಿ 1.5 ಕೋಟಿ ರೂ. ವೆಚ್ಚದಲ್ಲಿ ಭರ್ಜರಿ ಫ್ಯಾಕೇಜ್ ಘೋಷಿಸಿದ್ದಾರೆ.

ಸದ್ದಿಲ್ಲದೇ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ, ಶೂಟಿಂಗ್ ಇಲ್ಲದೇ ಸಂಕಷ್ಟದಲ್ಲಿ ರುವ ಕಲಾವಿದರು, ತಂತ್ರಜ್ಞರಿಗೆ ತಮ್ಮ ಸ್ವಂತ ಹಣದಿಂದ ತಲಾ 5000 ರೂ.ಗಳಂತೆ ಪರಿಹಾರ ಘೋಷಿಸಿದ್ದಾರೆ. ಚಿತ್ರರಂಗದ ಬರೋಬ್ಬರಿ 3000 ಕ್ಕೂ ಅಧಿಕ ಮಂದಿಗೆ ಧನ ಸಹಾಯ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ಒಕ್ಕೂಟದ ಅಧ್ಯಕ್ಷರಾದ ಸಾ.ರಾ. ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ನಾಥ್ ಅವರೊಂದಿಗೆ ಚರ್ಚಿಸಿದ್ದು, ಎಲ್ಲರ ಬ್ಯಾಂಕ್ ಖಾತೆಗಳಿಗೆ ಹಣ ನೇರವಾಗಿ ವರ್ಗಾವಣೆಯಾಗಲಿದೆ. ನನ್ನಂತೆಯೇ ಹೃದಯವಂತರು ಸಹಾಯ ಮಾಡಲು ಮುಂದೆ ಬಂದರೆ ಸಂಕಷ್ಟದಲ್ಲಿರುವ ನಮ್ಮ ಸಮುದಾಯದವರಿಗೆ ಸಹಾಯವಾಗಲಿದೆ. ನನಗೆ ಹೆಗಲು ಕೊಟ್ಡರೆ ನಾನು ಮಾಡಿದ ಕಾರ್ಯ ಸಾರ್ಥಕತೆ ಪಡೆಯುತ್ತದೆ ಎಂದು ಯಶ್ ಮನವಿ ಮಾಡಿದ್ದಾರೆ.