ಕರ್ನಾಟಕದಲ್ಲಿಯೂ ರದ್ದಾಗುತ್ತಾ ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ ..!!

ಬೆಂಗಳೂರು : ಸಿಬಿಎಸ್‍ಇ  12ನೇ ತರಗತಿ ರದ್ದಾದ ಬೆನ್ನಲ್ಲೇ ರಾಜ್ಯದಲ್ಲಿಯೂ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯೂ ರದ್ದಾಗುತ್ತಾ‌ ಅನ್ನೋ ಪ್ರಶ್ನೆ ಉದ್ಬವ ವಾಗಿದೆ. ಅದ್ರಲ್ಲೂ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದು ಮಾಡುವುದೇ ಒಳಿತು ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕೇಂದ್ರ ಸರಕಾರ‌ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲೀಗ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದೆ. ಅಲ್ಲದೇ ಸಿಬಿಎಸ್ಇ ಬೋರ್ಡ್ ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆಯ ಇಲ್ಲದೆ ಉತ್ತೀರ್ಣ ಗೊಳಿಸುವ ನಿರ್ಧಾರವನ್ನು ಈ ಹಿಂದೆಯೇ ಘೋಷಣೆಯನ್ನು ಮಾಡಿತ್ತು. ಇದೀಗ ಕರ್ನಾಟಕದಲ್ಲಿ ಪರೀಕ್ಷೆ ನಡೆಯುತ್ತಾ ಅನ್ನೋ ಪ್ರಶ್ನೆ ಉದ್ಬವವಾಗಿದೆ.

ರಾಜ್ಯದಲ್ಲಿ ಸದ್ಯಕ್ಕೆ ಕೊರೊನಾ ವೈರಸ್  ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಜೊತೆಗೆ ಲಾಕ್ ಡೌನ್ ಆದೇಶವೂ ತೆರವುಗೊಂಡಿಲ್ಲ. ಸಾಲದಕ್ಕೆ ಮೂರನೇ ಅಲೆಯ ಆತಂಕವೂ ಕಾಡುತ್ತಿದೆ. ನಿಧಾನವಾಗಿ ಪಾಸಿಟಿವಿಟಿ ರೇಟ್ ಇಳಿಕೆ ಆಗುತ್ತಿದೆ. ಭೌತಿಕ ತರಗತಿಗಳನ್ನೇ ನಡೆಸದ ಮಹಾರಾಷ್ಟ್ರ ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇನ್ನೊಂದೆಡೆ ಕರ್ನಾಟಕದಲ್ಲಿಯೂ ಹೆಮ್ಮಾರಿ ಕೊರೊನಾ ಮಕ್ಕಳನ್ನು ಕಾಡುತ್ತಿದೆ. ಜೊತೆಗೆ ಬ್ಲ್ಯಾಕ್ ಫಂಗಸ್ ಸೋಂಕಿನ ಹಾವಳಿಯೂ ಹೆಚ್ಚುತ್ತಿದೆ. ಈ ನಡುವಲ್ಲೇ ಪರೀಕ್ಷೆ ನಡೆಸೋದು ಅಪಾಯವನ್ನು ಮೈ ಮೇಲೆ ಎಳೆದು ಕೊಂಡಂತೆ ಆಗಲಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕೊರೊನಾ ಸಂಕಷ್ಟದ ಕಾಲದಲ್ಲಿ ಪರೀಕ್ಷೆ ನಡೆಸುವುದು ಹೆಚ್ಚು ಸೂಕ್ತ ಅಲ್ಲ ಅನ್ನೋದು ತಜ್ಞರ ಅಭಿಪ್ರಾಯ. ರಾಜ್ಯ ಸರ್ಕಾರ ಪರೀಕ್ಷೆಯ ವಿಚಾರದಲ್ಲಿ ಆತುರ ಪಡಬಾರದು. ಒಂದೊಮ್ಮೆ ರಾಜ್ಯ ಸರಕಾರಕ್ಕೆ ಪರೀಕ್ಷೆ ನಡೆಸಲೇ ಬೇಕು ಅಂತಿದ್ರೆ ಶಾಲಾ ಹಂತದಲ್ಲಿ ಆನ್ ಲೈನ್ ಪರೀಕ್ಷೆಯನ್ನು ನಡೆಬಹುದು. 15 ಲಕ್ಷದಷ್ಟು ಪಿಯುಸಿ‌ ಹಾಗೂ ಎಸ್ಎಸ್ಎಲ್ ಸಿ ಪರೀಕ್ದೆಗೆ ಹಾಜರಾದ್ರೆ ಸೋಂಕು ಹರಡುವ ಸಾಧ್ಯತೆ ತೀರಾ ಹೆಚ್ಚಿದೆ. ಇನ್ನೊಂದೆಡೆ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ಪರೀಕ್ಷೆ ಯಿಂದಲೂ ಶಿಕ್ಷಕರಿಗೂ ಸೋಂಕು ವ್ಯಾಪಿಸುವ ಸಾಧ್ಯತೆ ತೀರಾ ಹೆಚ್ಚು‌. ಹೀಗಾಗಿ ಕೊರೊನಾ ಮತ್ತೊಮ್ಮೆ ಸ್ಫೊಟವಾಗಲಿದೆ.

ಸಿಇಟಿ, ನೀಟ್ ಸೇರಿದಂತೆ ಹಲವು ಪರೀಕ್ಷೆ ಎದುರಿಸುವ ವಿದ್ಯಾರ್ಥಿ ಗಳಿಗೆ ಸಮಸ್ಯೆಯಾಗಲಿದೆ. ಅಲ್ಲದೇ ಪಿಯುಸಿ ಪ್ರವೇಶಾತಿಯ ವೇಳೆಯಲ್ಲಿ ದಾಖಲಾತಿಗೆ ಸೀಟ್ ಸಿಗದ ಸಮಸ್ಯೆ ‌ಎದುರಾಗಬಹುದು ಅನ್ನೋದು ಕೆಲ ಶಿಕ್ಷಣ ತಜ್ಞರ ವಾದ. ಆದರೆ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ ಸಿಬಿಎಸ್ಇ ಹಾಗೂ ಐಸಿಎಸ್ ಇ ಪಠ್ಯಕ್ರಮದ ವಿದ್ಯಾರ್ಥಿ ಗಳು ಭಾಗಿಯಾಗುತ್ತಾರೆ. ಸಿಬಿಎಸ್ಇ ಹಾಗೂ ಐಸಿಎಸ್ ಇ ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಮುಂದಾಗಿದೆ. ಆದರೆ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮಾತ್ರವೇ ಅಂಕ, ದಾಖಲಾತಿಯ ಸಮಸ್ಯೆ ಎದುರಾಗುವುದೇ ಅನ್ನೋ ಪ್ರಶ್ನೆಯನ್ನು ಕೆಲವು ಪೋಷಕರು ಕೇಳುತ್ತಿದ್ದಾರೆ. ಅಲ್ಲದೇ ಮಕ್ಕಳ ಜೀವ ಆರೋಗ್ಯಕ್ಕೆ ಮೊದಲ ಆಧ್ಯತೆ ಬದಲಾಗಿ ಪರೀಕ್ಷೆಗಳಲ್ಲ. ಹೀಗಾಗಿ ಸರಕಾರ ಪರೀಕ್ಷೆಯನ್ನು ರದ್ದು ‌ಮಾಡಬೇಕು ಅಂತಾ ಆಗ್ರಹಿಸುತ್ತಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಒಂದೆರಡು ದಿನಗಳಲ್ಲಿ ತಜ್ಣರ ಜೊತೆ ಸಭೆಯನ್ನು ನಡೆಸಿ ಪರೀಕ್ಷೆಯನ್ನು ಮಾಡಬೇಕೆ ಅಥವಾ ಬೇಡವೇ ಅನ್ನೋ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಪ್ರಧಾನಿ ಮೋದಿ ಅವರೇ ಖುದ್ದು ಮಕ್ಕಳ ಆರೋಗ್ಯವೇ ಮುಖ್ಯ, ಪರೀಕ್ಷೆಯಲ್ಲ ಅಂತಾ ಹೇಳಿಕೆ ನೀಡಿದ್ದಾರೆ. ಹೀಗಾಗಿ ತಮ್ಮದೇ ಪ್ರಧಾನಿಯ ಮಾತನ್ನು ಸುರೇಶ್ ಕುಮಾರ್ ಹಾಗೂ ರಾಜ್ಯ ಸರಕಾರ ಮೀರುತ್ತಾ ಅಥವಾ ಪಾಲಿಸುತ್ತಾ ಅನ್ನೋ ಕುತೂಹಲ ಮೂಡಿಸಿದೆ.

.

Comments are closed.