ಮಂಗಳವಾರ, ಏಪ್ರಿಲ್ 29, 2025
HomeCinemaS.P. Sangliyana- 2: ಶಂಕರ್ ನಾಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಬಿಗ್ ಸ್ಕ್ರೀನ್ ಮೇಲೆ ಮತ್ತೆ...

S.P. Sangliyana- 2: ಶಂಕರ್ ನಾಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಬಿಗ್ ಸ್ಕ್ರೀನ್ ಮೇಲೆ ಮತ್ತೆ ಬರಲಿದ್ದಾರೆ ಕರಾಟೆ ಕಿಂಗ್

- Advertisement -

ಬೆಂಗಳೂರು: S.P. Sangliyana- 2: ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ಇಷ್ಟಪಡದವರೇ ಇಲ್ಲ.. ಅವರು ಮರೆಯಾಗಿ 3 ದಶಕಗಳು ಕಳೆದರೂ ಅಭಿಮಾನಿಗಳು ಅವರನ್ನು ಇನ್ನೂ ಮರೆತಿಲ್ಲ. ಆಟೋ ಚಾಲಕರಿಗೆ ಶಂಕ್ರಣ್ಣ ಅಂದ್ರೆ ಅವರ ಆರಾಧ್ಯ ದೈವ. ಇವತ್ತಿಗೂ ರಾಜ್ಯದ ಹಲವು ಆಟೋಗಳ ಮೇಲೆ ಅಂಟಿಸಲಾದ ಪೋಸ್ಟರ್ ಗಳ ಮೇಲೆ ಶಂಕರಣ್ಣ ರಾರಾಜಿಸುತ್ತಿದ್ದಾರೆ. ಆದರೆ ಈಗ ಶಂಕರಣ್ಣ ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. 90ರ ದಶಕದಲ್ಲಿ ಚಂದನವನದಲ್ಲಿ ಮಿಂಚಿ ಮರೆಯಾದ ನೆಚ್ಚಿನ ಶಂಕರಣ್ಣ ಅವರನ್ನು ಮತ್ತೆ ದೊಡ್ಡ ಪರದೆ ಮೇಲೆ ಕಾಣುವ ಸೌಭಾಗ್ಯ ಅಭಿಮಾನಿಗಳ ಪಾಲಿಗೆ ಒದಗಿ ಬಂದಿದೆ. ಶಂಕರ್ ನಾಗ್ ನಟನೆಯ ಸೂಪರ್ ಹಿಟ್ ಎಸ್.ಪಿ.ಸಾಂಗ್ಲಿಯಾನ-2 ಚಿತ್ರ ಮತ್ತೆ ತೆರೆ ಕಾಣುತ್ತಿದೆ.

ಇದನ್ನೂ ಓದಿ: Winter Tour : ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕಾ? ಈ ಸ್ಥಳಗಳಿಗೆ ಖಂಡಿತ ಭೇಟಿ ಕೊಡಿ

ಶಂಕರ್ ನಾಗ್ ಅವರ ಅಗಲಿಕೆಗೂ ಮುನ್ನ ತೆರೆಕಂಡಿದ್ದ ಈ ಚಿತ್ರ ಆ ದಿನಗಳಲ್ಲಿ ಸೂಪರ್ ಹಿಟ್ ಆಗಿತ್ತು. ಪೊಲೀಸ್ ಬೆಲ್ಟ್ ಹೆಸರಿನಲ್ಲಿ ತೆಲುಗುವಿನಲ್ಲೂ ಈ ಚಿತ್ರ ರಿಲೀಸ್ ಆಗಿತ್ತು. 1990ರಲ್ಲಿ ತೆರೆ ಕಂಡಿದ್ದ ಈ ಸಿನಿಮಾದಲ್ಲಿ ಶಂಕರ್ ನಾಗ್ ಅವರಿಗೆ ಭವ್ಯಾ ಜೋಡಿಯಾಗಿ ಅಭಿನಯಿಸಿದ್ದರು. ಬಾಕ್ಸಾಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿ ಶಂಕರ್ ನಾಗ್ ಅವರ ಕೆರಿಯರ್ ನಲ್ಲೇ ಅತೀ ದೊಡ್ಡ ಹಿಟ್ ಹಿಟ್ ಎನಿಸಿಕೊಂಡಿತ್ತು ಈ ಸಿನಿಮಾ. ಅಂದಿನ ಕಾಲದಲ್ಲಿ ಸಾಕಷ್ಟು ಜನಮನ್ನಣೆಗೆ ಪಾತ್ರವಾಗಿದ್ದ ಈ ಸಿನಿಮಾವನ್ನು ಬಿಗ್ ಸ್ಕ್ರೀನ್ ಮೇಲೆ ನವೆಂಬರ್ 18ರಂದು ಬಿಡುಗಡೆ ಮಾಡಲಾಗುತ್ತಿದೆ.

ಸ್ವರ್ಣಗಿರಿ ಮೂವೀಸ್ ಬ್ಯಾನರ್‍ನಲ್ಲಿ ಕೃಷ್ಣರಾಜು ಮತ್ತು ಸ್ನೇಹಿತರು ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಇದೀಗ ಕೆ.ಆರ್.ಕಂಬೈನ್ಸ್ ಹಾಗೂ ಮಾರ್ಸ್ ಡಿಸ್ಟ್ರಿಬ್ಯೂಟರ್ಸ್ ಚಿತ್ರವನ್ನು ರಾಜ್ಯಾದ್ಯಂತ ರಿಲೀಸ್ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: T20 World Cup: ಶ್ರೀಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್ ಸೆಮೀಸ್‌ಗೆ, ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕಿಕೌಟ್

ಪೊಲೀಸ್ ಆಫೀಸರ್ ಹೆಚ್.ಟಿ.ಸಾಂಗ್ಲಿಯಾನ ಜೀವನ ಚರಿತ್ರೆಯಿಂದ ಪ್ರೇರಣೆಗೊಂಡು ಪಿ.ನಂಜುಂಡಪ್ಪ ಸಾಂಗ್ಲಿಯಾನ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. 1988ರಲ್ಲಿ ಈ ಸಿನಿಮಾ ಅತೀ ದೊಡ್ಡ ಯಶಸ್ಸನ್ನು ತಂದುಕೊಟ್ಟಿತ್ತು. ಹೀಗಾಗಿ 2 ವರ್ಷದ ಬಳಿಕ ಇದರ ಸೀಕ್ವೆಲ್ ಸಿನಿಮಾವನ್ನು ಪ್ರೇಕ್ಷಕರ ಮುಂದಿಟ್ಟಿದ್ದರು. ಈ ಸೀಕ್ವೆಲ್ ಸಾಂಗ್ಲಿಯಾನ-2 ಚಿತ್ರ ಕೂಡಾ ಸೂಪರ್ ಹಿಟ್ ಅನಿಸಿಕೊಂಡಿತ್ತು. ಸಿನಿಮಾದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ವಿಲನ್ ಪಾತ್ರದಲ್ಲಿ ಮಿಂಚಿದ್ದರು. ಅಶೋಕ್, ಮುಖ್ಯಮಂತ್ರಿ ಚಂದ್ರು, ವಜ್ರಮುನಿ, ಮಾಸ್ಟರ್ ಮಂಜುನಾಥ್ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ನಾದಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಈ ಸಿನಿಮಾದ ಮತ್ತೊಂದು ಹೈಲೈಟ್.

S.P. Sangliyana-2: Good news for Shankar Nag fans: The Karate King is coming back on the big screen

Community-verified icon
RELATED ARTICLES

Most Popular