ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 (KGF chapter 2) ಸಿನಿಮಾ ಇದೇ ಏಪ್ರಿಲ್ 14ರಂದು ತೆರೆ ಕಾಣಲಿದ್ದು ಅಭಿಮಾನಿಗಳು ಆ ದಿನಕ್ಕಾಗಿ ಕಾತುರರಾಗಿದ್ದಾರೆ. ಸಿನಿಮಾ ರಿಲೀಸ್ಗೂ ಮುನ್ನ ಸಾಕಷ್ಟು ಕಾರಣಗಳಿಂದ ಕೆಜಿಎಫ್ 2 ಸಿನಿಮಾ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸುತ್ತಲೇ ಇದೆ. ಈ ಎಲ್ಲದರ ನಡುವೆ ಇದೀಗ ಪ್ರಭಾಸ್ ಅಭಿಮಾನಿಗಳಿಗೂ ಖುಷಿ ನೀಡುವಂತಹ ವಿಚಾರವೊಂದು ಹೊರಬಿದ್ದಿದೆ. ಕೆಲವು ಹಿಂದಿ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಕೆಜಿಎಫ್ 2 ಸಿನಿಮಾದ ಜೊತೆಯಲ್ಲಿ ಪ್ರಭಾಸ್ರ ಮುಂದಿನ ಸಿನಿಮಾ ಸಲಾರ್ ಟೀಸರ್ ಅಟ್ಯಾಚ್ ಮಾಡಲಾಗಿದೆಯಂತೆ.
ಈ ರೀತಿಯಾಗಿ ಬಹುನಿರೀಕ್ಷಿತ ಸಿನಿಮಾಗಳಿಗೆ ಬೇರೆ ಸಿನಿಮಾದ ಟೀಸರ್ಗಳನ್ನು ಅಟ್ಯಾಚ್ ಮಾಡುವುದು ಇದೇ ಮೊದಲೇನಲ್ಲ. ಉದಾಹರಣೆಗೆ ನಟ ಪುನೀತ್ ರಾಜ್ಕುಮಾರ್ರ ಜೇಮ್ಸ್ ಸಿನಿಮಾದ ಜೊತೆಯಲ್ಲಿ ಬೈರಾಗಿ ಸಿನಿಮಾದ ಟೀಸರ್ ಪ್ರಸಾರ ಮಾಡಿದ್ದು ನೆನಪಿದ್ದಿರಬಹುದು.
ಅದೇ ರೀತಿ ಇದೀಗ ಕೆಜಿಎಫ್ 2 ಸಿನಿಮಾದ ಜೊತೆಯಲ್ಲಿ ಸಲಾರ್ ಟೀಸರ್ ಅಟ್ಯಾಚ್ ಆಗಲಿದೆ. ಪ್ರಭಾಸ್ರ ರಾಧೆ ಶ್ಯಾಮ್ ಸಿನಿಮಾ ಬಾಕ್ಸಾಫೀಸಿನಲ್ಲಿ ನೆಲ ಕಚ್ಚಿತ್ತು. ಬಾಹುಬಲಿ 2 ಸಿನಿಮಾದ ಬಳಿಕ ಪ್ರಭಾಸ್ರ ಯಾವೊಂದು ಸಿನಿಮಾ ಕೂಡ ಟೇಕಾಫ್ ಆಗುತ್ತಿಲ್ಲ. ಇದೀಗ ಸಲಾರ್ ಸಿನಿಮಾದ ಮೇಲೆ ಪ್ರಭಾಸ್ ಮತ್ತೊಮ್ಮೆ ಅಭಿಮಾನಗಳ ಎದುರು ಅದೃಷ್ಟಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.
ಯಶ್ ಸಿನಿಮಾ ಕೆಜಿಎಫ್ 2ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಹೌಸ್ ಫುಲ್ ಆಗುತ್ತೆ ಅನ್ನೋದು ಕೂಡ ಎಲ್ಲರಿಗೂ ತಿಳಿದಿದೆ. ಹೀಗಾಗಿ ತಮ್ಮ ಸಿನಿಮಾ ಪ್ರಮೋಷನ್ಗೆ ಇದಕ್ಕಿಂತ ಒಳ್ಳೆಯ ವೇದಿಕೆ ಮತ್ತೊಂದಿಲ್ಲ ಎಂದು ಸಲಾರ್ ಚಿತ್ರತಂಡ ಪ್ಲಾನ್ ಮಾಡಿದೆ.
ಹೊಂಬಾಳೆ ಫಿಲ್ಮ್ಸಂ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅದೇ ರೀತಿ ಸಲಾರ್ ಸಿನಿಮಾಗೂ ಹೊಂಬಾಳೆ ಫಿಲ್ಮ್ಸಂ ಬಂಡವಾಳ ಹೂಡಿದ್ದರೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನು ಓದಿ : Vijay’s Beast movie : ಕುವೈತ್ನಂತೆಯೇ ತಮಿಳುನಾಡಿನಲ್ಲಿಯೂ ‘ಬೀಸ್ಟ್’ಗೆ ಬ್ಯಾನ್ ಸಂಕಷ್ಟ
ಇದನ್ನೂ ಓದಿ : KGF 2 in Greece : ಕೆಜಿಎಫ್ 2 ಹವಾ! ಗ್ರೀಸ್ ಲ್ಲಿ ಬಿಡುಗಡೆಗೊಳ್ಳುತ್ತಿರುವ ದಕ್ಷಿಣ ಭಾರತದ ಮೊದಲ ಸಿನಿಮಾ
salaar movie teaser will be released with yash starrer kgf chapter 2 movie