Andhra Pradesh Cabinet :ಆಂಧ್ರಪ್ರದೇಶದಲ್ಲಿ ಎಲ್ಲಾ 24 ಸಚಿವರಿಂದ ರಾಜೀನಾಮೆ

ಆಂಧ್ರಪ್ರದೇಶ ಸಿಎಂ ವೈ.ಎಸ್​ ಜಗನ್ಮೋಹನ ರೆಡ್ಡಿ ಹೊಸ ಸಂಪುಟ ರಚನೆಗೆ ಮುಂದಾಗಿರುತ್ತಿರುವ ನಡುವೆಯೇ ಪ್ರಸ್ತುತ ಜಗನ್ಮೋಹನ ರೆಡ್ಡಿ ಸಂಪುಟದಲ್ಲಿ ಸಚಿವರಾಗಿರುವ (Andhra Pradesh Cabinet) ಎಲ್ಲಾ 24 ಮಂದಿ ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.


ಸಚಿವ ಸಂಪುಟ ಸಭೆ ಕರೆದಿದ್ದು ಜಗನ್ಮೋಹನ ರೆಡ್ಡಿ ಎಲ್ಲಾ ಸಚಿವರ ಜೊತೆಯಲ್ಲಿ ಸಂವಾದ ನಡೆಸಿದ ಬಳಿಕ ಮಂತ್ರಿಗಳು ತಮ್ಮ ರಾಜೀನಾಮೆ ಪತ್ರಗಳನ್ನು ಜಗನ್ಮೋಹನ ರೆಡ್ಡಿಗೆ ನೀಡಿದ್ದಾರೆ ಎನ್ನಲಾಗಿದೆ .ಈ ಎಲ್ಲಾ ಸಚಿವರು 34 ತಿಂಗಳುಗಳಿಗೆ ತಮ್ಮ ಮಂತ್ರಿಗಿರಿಯನ್ನು ಕೊನೆಗೊಳಿಸಿದಂತಾಗಿದೆ.


ಹೊಸ ಸಚಿವ ಸಂಪುಟ ರಚನೆಗೆ ಮುಂದಾಗಿದ್ದ ಮುಖ್ಯಮಂತ್ರಿ ವೈ.ಎಸ್​ ಜಗನ್ಮೋಹನ ರೆಡ್ಡಿ ಬುಧವಾರದಂದು ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವಭೂಷಣ್​​ ಹರಿಚಂದ್ರನ್​ರನ್ನು ಭೇಟಿಯಾಗಿದ್ದರು. ಇದೀಗ ಎಲ್ಲಾ ಸಚಿವರು ತಮ್ಮ ಖಾತೆಗಳಿಗೆ ರಾಜೀನಾಮೆ ನೀಡಿದ್ದು ಏಪ್ರಿಲ್​ 11ರಂದು ಹೊಸ ಸಂಪುಟ ರಚನೆಯಾಗಲಿದೆ ಎಂದು ತಿಳಿದುಬಂದಿದೆ.


2019ರಲ್ಲಿ ಆಂಧ್ರ ಪ್ರದೇಶದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ವೈ. ಎಸ್​ ಜಗನ್ಮೋಹನ ರೆಡ್ಡಿ ಅಂದೇ ತಮ್ಮ ಅಧಿಕಾರಾವಧಿಯಲ್ಲಿ ಮಧ್ಯ ಭಾಗದಲ್ಲಿ ಈ ರೀತಿಯಾಗಿ ಹೊಸ ಸಂಪುಟ ರಚಿಸುತ್ತೇನೆ ಎಂದು ಹೇಳಿದ್ದರು. ಅದರಂತೆ ಕಳೆದ ವರ್ಷ ಡಿಸೆಂಬರ್​ ತಿಂಗಳಿನಲ್ಲಿಯೇ ಹೊಸ ಸಂಪುಟ ರಚನೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈಗ ಹೊಸ ಸಂಪುಟ ರಚನೆ ಕಾರ್ಯ ನಡೆಯುತ್ತಿದೆ.


ಇದೀಗ ಹೊಸ ಸಂಪುಟ ರಚನೆಗೆ ಮುಂದಾಗಿರುವ ಜಗನ್ಮೋಹನ ರೆಡ್ಡಿ ತಮ್ಮ ಸಂಪುಟದಲ್ಲಿ ಐವರು ಡಿಸಿಎಂಗಳನ್ನು ನೇಮಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಐವರಲ್ಲಿ ಎಸ್ಸಿ, ಎಸ್ಟಿ, ಬಿಸಿ, ಕಾಪು , ಮುಸ್ಲಿಂ ಹಾಗೂ ಮೂವರು ಮಹಿಳೆಯರು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ : Sri Lanka : ಶ್ರೀಲಂಕಾದಲ್ಲಿ 36 ಗಂಟೆಗಳ ಕರ್ಫ್ಯೂ : ಟ್ವೀಟರ್‌, ಫೇಸ್‌ಬುಕ್‌, ವಾಟ್ಸಾಪ್‌ ಬ್ಯಾನ್‌

ಇದನ್ನೂ ಓದಿ : BJ Puttaswamy : ಬಿ.ಜೆ.ಪುಟ್ಟಸ್ವಾಮಿ ಇನ್ನೂ ಗಾಣಿಗರ ಮಹಾಸ್ವಾಮಿ : ಇಳಿವಯಸ್ಸಿನಲ್ಲಿ ಸನ್ಯಾಸದ ಮೊರೆ ಹೋದ ಮಾಜಿ ಸಚಿವ

All Andhra Pradesh Cabinet Ministers Resign as CM Jagan Overhauls Team In Run-up to 2024 Polls

Comments are closed.