LSG vs DC : ಡೆಲ್ಲಿ ಎದುರು ಗೆದ್ದ ಲಕ್ನೋ : ಮತ್ತೆ ಮ್ಯಾಚ್‌ ಫಿನಿಷರ್‌ ಆದ ಆಯುಷ್‌ ಬಡೋನಿ

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ (LSG vs DC) ರೋಚಕ ಗೆಲುವು ಕಂಡಿದೆ. ಲಕ್ನೋ ತಂಡದ ಮ್ಯಾಚ್‌ ಫಿನಿಷರ್‌ ಆಯುಷ್‌ ಬಡೋನಿ ಮತ್ತೊಮ್ಮೆ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಕನ್ನಡಿಗ ಕೆ.ಎಲ್.ರಾಹುಲ್‌ ನಾಯಕತ್ವದ ಲಕ್ನೋ ತಂಡ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಮುಂಬೈನ ಡಾ.ಡಿವೈ ಪಾಟೀಲ್‌ ಸ್ಟೋಟ್ಸ್‌ ಅಕಾಡೆಮಿ ಮೈದಾನದಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ೧೫ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆರಂಭಿಕ ಆಘಾತವನ್ನು ಅನುಭವಿಸಿತ್ತು. ಪ್ರಥ್ವಿ ಶಾ ಅಬ್ಬರದ ಬ್ಯಾಟಿಂಗ್‌ ನಡೆಸಿ ಕೇವಲ 34ಎಸೆತಗಳಲ್ಲಿ ಬರೋಬ್ಬರಿ 61 ರನ್‌ ಸಿಡಿಸಿ ಔಟಾದ್ರು. ಆದರೆ ಇನ್ನೊಂದೆಡೆಯಲ್ಲಿ ಡೇವಿಡ್‌ ವಾರ್ನರ್‌ ರನ್‌ ಗಳಿಸಲು ಪರದಾಟ ನಡೆಸಿದ್ರು. 12 ಎಸೆತಗಳಲ್ಲಿ ಕೇವಲ ನಾಲ್ಕು ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ. ಅಲ್ಲದೇ ನಂತರ ಕ್ರೀಸ್‌ಗೆ ಬಂದ ಪಾವೆಲ್‌ ಆಟ ಕೇವಲ 3 ರನ್‌ ಗಳಿಗೆ ಸೀಮಿತವಾಯ್ತು.

ನಂತರದಲ್ಲಿ ನಾಯಕ ರಿಷಬ್‌ ಪಂತ್‌ ಜೊತೆಯಾದ ಸರ್ಫರಾಜ್‌ ಖಾನ್‌ ಜೋಡಿ ಉತ್ತಮ ಜೊತೆಯಾಟವಾಡಿದ್ರು. ಪಂತ್‌ ೩೬ ಎಸೆತಗಳಲ್ಲಿ 39 ರನ್‌ ಗಳಿಸಿದ್ರೆ, ಸರ್ಫರಾಜ್‌ ಖಾನ್‌ 28 ಎಸೆತಗಳಲ್ಲಿ 36 ರನ್‌ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ ಗಳಲ್ಲಿ 149 ರನ್‌ ಕಲೆಹಾಕಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ರವಿ ಬಿಶ್ನೋಯಿ 2 ಹಾಗೂ ಕನ್ನಡಿಗ ಕೆ.ಗೌತಮ್‌ ಒಂದು ವಿಕೆಟ್‌ ಪಡೆದುಕೊಂಡಿದ್ದಾರೆ.

ಡೆಲ್ಲಿ ಕ್ಯಾಫಿಟಲ್ಸ್‌ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಲಕ್ನೋ ತಂಡಕ್ಕೆ ನಾಯಕ ಕೆ.ಎಲ್.ರಾಹುಲ್‌ ಹಾಗೂ ಕ್ವಿಂಟಾನ್‌ ಡಿಕಾಕ್‌ ಉತ್ತಮ ಆರಂಭವೊದಗಿಸಿದ್ರು. ಮೊದಲ ವಿಕೆಟ್‌ಗೆ 73ರನ್‌ ಜೊತೆಯಾಟವಾಡಿ ರಾಹುಲ್‌ ಔಟಾದ್ರು. ನಂತರದ ಬಂದ ಲಿವಿಸ್‌ ಕೇವಲ 5 ರನ್‌ ಗಳಿಸಿ ಔಟಾದ್ರೆ, ಡಿಕಾಕ್‌ 80 ರನ್‌ ಸಿಡಿಸುವ ಮೂಲಕ ಲಕ್ನೋ ತಂಡಕ್ಕೆ ನೆರವಾದ್ರು. ಡಿಕಾಕ್‌ ಔಟಾಗುತ್ತಲೇ ದೀಪಕ್‌ ಹೂಡ ಹಾಗೂ ಕೃನಾಲ್‌ ಪಾಂಡ್ಯ ಲಕ್ನೋ ತಂಡಕ್ಕೆ ನೆರವಾದ್ರು. ಆದರೆ ಅಂತಿಮ ಓವರ್‌ನಲ್ಲಿ 11ರನ್‌ ಗಳಿಸಿದ್ದ ಹೂಡಾ ವಿಕೆಟ್‌ ಒಪ್ಪಿಸಿ ಹೊರ ನಡೆದ್ರು. ನಂತರ ಕೃನಾಲ್‌ ಪಾಂಡ್ಯಗೆ ಜೊತೆಯಾದ ಆಯುಷ್‌ ಬಡೋನಿ ಕೇವಲ 3 ಎಸೆತಗಳಲ್ಲಿ 10 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ದಾಟಿಸಿದ್ದಾರೆ.

ಕೆಎಲ್ ರಾಹುಲ್ : ನಾವು ಅದ್ಭುತವಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ (ಚೆಂಡಿನೊಂದಿಗೆ). ಪವರ್‌ ಪ್ಲೇನಲ್ಲಿ, ನಾವು ನಿಸ್ಸಂಶಯವಾಗಿ ಹಿಂತಿರುಗಿ ಕೆಲಸ ಮಾಡಬೇಕಾಗಿದೆ. ಆದರೆ ಪವರ್‌ಪ್ಲೇಗಳು ಕೆಲವೊಮ್ಮೆ ಹೇಗೆ ಹೋಗುತ್ತವೆ. ನಾವು ಅದರ ನಂತರ ವಿಷಯಗಳನ್ನು ಚೆನ್ನಾಗಿ ನಿರ್ಣಯಿಸಿದೆವು ಮತ್ತು ಉತ್ತಮವಾಗಿ ಬೌಲ್ ಮಾಡಿದೆವು. ನಿಸ್ಸಂಶಯವಾಗಿ, ಬೌಲರ್‌ಗಳು ಸ್ವಲ್ಪ ಮುಂಚಿತವಾಗಿ ವಿಷಯಗಳನ್ನು ನಿರ್ಣಯಿಸಲು ಇಷ್ಟಪಡುತ್ತಿದ್ದರು, ಆದರೆ ಅವರು ಪವರ್‌ಪ್ಲೇ ನಂತರ ಬೌಲ್ ಮಾಡುವ ಗೆರೆಗಳು, ಉದ್ದಗಳು ಮತ್ತು ವೇಗವನ್ನು ಚರ್ಚಿಸುವುದನ್ನು ನೋಡಲು ಸಂತೋಷವಾಗಿದೆ.

ರಿಷಭ್ ಪಂತ್: ಇಬ್ಬನಿ ಹೀಗಿರುವಾಗ ನೀವು ದೂರು ನೀಡುವಂತಿಲ್ಲ, ಬ್ಯಾಟಿಂಗ್ ಘಟಕವಾಗಿ ನಾವು 10-15 ಕಡಿಮೆ ಇದ್ದೆವು, ಕೊನೆಯಲ್ಲಿ ಅವೇಶ್ ಮತ್ತು ಹೋಲ್ಡರ್ ಅದನ್ನು ಹಿಂದಕ್ಕೆ ಎಳೆದರು, ಕ್ರೆಡಿಟ್ ಅವರಿಗೆ. ನಾವು 40ನೇ ಓವರ್‌ನ ಕೊನೆಯ ಎಸೆತದವರೆಗೆ 100% ನೀಡುವ ಬಗ್ಗೆ ಮಾತನಾಡುತ್ತಿದ್ದೆವು, ಏನೇ ಆಗಲಿ [2ನೇ ಇನ್ನಿಂಗ್ಸ್‌ನ ಆರಂಭಕ್ಕೂ ಮುನ್ನ ತಂಡಕ್ಕೆ ಅವರ ಚಾಟ್‌ನಲ್ಲಿ]. ಪವರ್‌ಪ್ಲೇ ಚೆನ್ನಾಗಿತ್ತು, ನಮಗೆ ಯಾವುದೇ ವಿಕೆಟ್ ಸಿಗಲಿಲ್ಲ, ನಮ್ಮ ಸ್ಪಿನ್ ದಾಳಿಯು ಮಧ್ಯಮ ಓವರ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತು ಆದರೆ ಕೊನೆಯಲ್ಲಿ ನಾವು 10-15 ಕಡಿಮೆ ಇದ್ದೆವು.

LSG vs DC IPL 2022 15th Match Lucknow win By 6 wicket, Ayush Badoni Match finisher

Comments are closed.