Salman Khan birthday celebration : ಸಲ್ಮಾನ್‌ ಖಾನ್‌ ಬರ್ತಡೆಗೆ ತಡವಾಗಿ ಬಂದ ಶಾರುಖ್‌ ಸಖತ್‌ ವೈರಲ್ ಆಯ್ತು ವಿಡಿಯೋ

ಬಾಲಿವುಡ್‌ “ಭಾಯಿಜಾನ್” ನಟ ಸಲ್ಮಾನ್ ಖಾನ್ ಮುಂಬೈನ ಅರ್ಪಿತಾ ಖಾನ್ ಶರ್ಮಾ ಅವರ ನಿವಾಸದಲ್ಲಿ ತಮ್ಮ 57 ನೇ ಹುಟ್ಟುಹಬ್ಬವನ್ನು (Salman Khan birthday celebration) ಆಚರಿಸಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದು, ಸಲ್ಮಾನ್ ಖಾನ್ ಕಪ್ಪು ಉಡುಗೆಯಲ್ಲಿ ಆಪ್ತರೊಂದಿಗೆ ಜೊತೆ ಕೇಕ್ ಕತ್ತರಿಸಿದರು. ಆದರೆ ಅವರ ಬರ್ತಡೆ ಪಾರ್ಟಿಯಲ್ಲಿ ಸಹ ನಟ ಮತ್ತು ಆತ್ಮೀಯ ಗಳೆಯ ಶಾರುಖ್‌ ಖಾನ್‌ ತಡವಾಗಿ ಆಗಮಿಸಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

90ರ ದಶಕದಿಂದ ಇಲ್ಲಿವರೆಗೂ ಬಾಲಿವುಡ್‌ನಲ್ಲಿ ಸಲ್ಮಾನ್‌ ಖಾನ್ ಹವಾ ಒಂದೇ ರೀತಿಯಲ್ಲಿ ಇದ್ದು, ಈಗಲೂ ಕೂಡ ಇವರ ಸಿನಿಮಾ ಎಂದರೆ ಯುವಕ ಯುವತಿಯರು ಸಿನಿಮಾ ಮಂದಿರಗಳಲ್ಲಿ ಮುಗಿ ಬಿಳುತ್ತಾರೆ. ತಮ್ಮ 57 ನೇ ವರ್ಷದ ಬರ್ತಡೆ ಸಂಭ್ರಮದಂದು ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿ ಕಾಣಿಸಿಕೊಂಡಿದ್ದು, ಕೇಕ್ ಕತ್ತರಿಸಿದ ಬಳಿಕ ಮಾಧ್ಯಮದವರ ಪ್ರೀತಿಗೆ ಧನ್ಯವಾದ ಅರ್ಪಿಸಿದರು. ಅವರೊಂದಿಗೆ ಅವರ ವಿಶೇಷ ದಿನವನ್ನು ಆಚರಿಸಲು ಅವರ ಅನೇಕ ಉದ್ಯಮ ಸ್ನೇಹಿತರು ಉಪಸ್ಥಿತರಿದ್ದರು. ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ತಮ್ಮ ಪತಿ ಆಯುಷ್ ಶರ್ಮಾ ಅವರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಜಾನ್ವಿ ಕಪೂರ್, ಕಾರ್ತಿಕ್ ಆರ್ಯನ್, ಸೋನಾಕ್ಷಿ ಸಿನ್ಹಾ, ಸುನೀಲ್ ಶೆಟ್ಟಿ, ರಿತೇಶ್ ದೇಶಮುಖ್, ಜೆನಿಲಿಯಾ, ಸಲ್ಮಾನ್ ಸಹೋದರಿಯರಾದ ಅರ್ಪಿತಾ, ಅಲ್ವಿರಾ, ಮತ್ತು ಸಹೋದರರಾದ ಸೊಹೈಲ್ ಮತ್ತು ಅರ್ಬಾಜ್ ಮತ್ತು ಇಂಡಿಯಾ ಟಿವಿಯ ಅಧ್ಯಕ್ಷ ಮತ್ತು ಸಂಪಾದಕ ರಜತ್ ಶರ್ಮಾ ಸೇರಿದಂತೆ ಹಲವರು ಖಾನ್‌ ಬರ್ತಡೆ ಸಂಭ್ರಮದಲ್ಲಿ ಸೇರಿದರು. ಪಾರ್ಟಿಯಲ್ಲಿ ಸಲ್ಮಾನ್ ಸಹ ನಟ ಮತ್ತು ಸ್ನೇಹಿತ ಶಾರುಖ್ ಖಾನ್ ಕೂಡ ಕಾಣಿಸಿಕೊಂಡರು. ಬರ್ತಡೆ ಪಾರ್ಟಿ ಸೇರ್ಪಡೆಯಾದವರಲಿ ಕೊನೆಯವರಾಗಿದ್ದು, ಶಾರುಖ್ ಪಾರ್ಟಿಗೆ ಆಗಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಲ್ಮಾನ್ ಖಾನ್ ಇತ್ತೀಚೆಗೆ “ಕಿಸಿ ಕಾ ಭಾಯ್ ಕಿಸಿ ಕಿ ಜಾನ್” ದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಇದು ಫರ್ಹಾದ್ ಸಾಮ್ಜಿ ನಿರ್ದೇಶನದ ಆಕ್ಷನ್ ಪ್ಯಾಕೇಜ್‌ನ್ನು ಒಳಗೊಂಡ ಸಿನಿಮಾವಾಗಿದೆ. ಪೂಜಾ ಹೆಗ್ಡೆ ಮತ್ತು ವೆಂಕಟೇಶ್ ದಗ್ಗುಬಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿಜೇಂದರ್ ಸಿಂಗ್ ಸಹ ನಟಿಸಿದ್ದಾರೆ.

ಇದನ್ನೂ ಓದಿ : Ravi Teja Dhamaka movie : ತೆಲುಗು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ ನಟ ರವಿತೇಜ “ಧಮಾಕಾ” ಸಿನಿಮಾ

ಇದನ್ನೂ ಓದಿ : Sushant Singh death case: ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದ ಆಸ್ಪತ್ರೆ ಸಿಬ್ಬಂದಿ; ಅಂದು ಅಲ್ಲಿ ನಡೆದಿದ್ದೇ ಬೇರೆ ಹೊರಬಿದ್ದ ಸುದ್ದಿಯೇ ಬೇರೆ ಅಂತೆ..!

ಇದನ್ನೂ ಓದಿ : Kranti Pushpavathi Song : “ನನಗೆ ಮಿಲಿಯನ್ ಡಾಲರ್ ಅವಕಾಶ” ಎಂದ ಕ್ರಾಂತಿ ಸಿನಿಮಾದ ಪುಷ್ಪಾವತಿ ನಿಮಿಕಾ ರತ್ನಾಕರ್‌

ಈ ಹಿಂದೆ “ಕಿಸಿ ಕಾ ಭಾಯಿ ಕಿಸಿ ಕಿ ಜಾನ್” ಅನ್ನು 2022 ರ ಕೊನೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ ಮುಂಬರುವ ಆಕ್ಷನ್ ಥ್ರಿಲ್ಲರ್ ಸಿನಿಮಾ “ಟೈಗರ್ 3” ಅನ್ನು ಈ ಹಿಂದೆ ನಿಗದಿಪಡಿಸಿದ ದಿನಾಂಕದ ಬದಲಿಗೆ 2023 ರ ದೀಪಾವಳಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದರು. ಏಪ್ರಿಲ್ 23, 2023ರಂದು ಈ ಎರಡು ಬಿಡುಗಡೆಗಳೊಂದಿಗೆ, ಅವರ ಅಭಿಮಾನಿಗಳಿಗೆ ಔತಣ ನೀಡುವುದು ಖಚಿತ.

Salman Khan birthday celebration: Shahrukh came late for Salman Khan’s birthday video went viral

Comments are closed.