ಮಹಾರಾಷ್ಟ್ರ : (Salman Khan granted gun license ) : ಜೀವ ಬೆದರಿಕೆಯನ್ನು ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬಂದೂಕು ಪರವಾನಗಿಯನ್ನು ಮುಂಬೈ ಪೊಲೀಸರು ನೀಡಿದ್ದಾರೆ ಎಂಬ ವರದಿ ಲಭ್ಯವಾಗಿದೆ ಲ್ಯಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯರಿಂದ ಜೀವ ಬೆದರಿಕೆ ಪತ್ರಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ರಕ್ಷಣೆ ಕೋರಿ ಸಲ್ಮಾನ್ ಖಾನ್ ಅರ್ಜಿ ಸಲ್ಲಿಸಿದ ಬಳಿಕ ಬಂದೂಕು ಪರವಾನಗಿಯನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಬಂದೂಕು ಪರವಾನಗಿಯನ್ನು ನೀಡುವ ಮುನ್ನ ನಟ ಸಲ್ಮಾನ್ ಖಾನ್ರ ಅಪರಾಧಗಳ ದಾಖಲೆಗಳು ಹಾಗೂ ಹಿನ್ನೆಲೆಯನ್ನು ಪರಿಶೀಲನೆ ಮಾಡಲಾಗಿದೆ. ಪ್ರಮಾಣಿತ ಕಾರ್ಯ ವಿಧಾನಗಳ ಎಲ್ಲಾ ಹಂತಗಳನ್ನು ಪಾಲನೆ ಮಾಡಿದ ಬಳಿಕವೇ ಮುಂಬೈ ಪೊಲೀಸ್ ಪ್ರಧಾನ ಕಚೇರಿಯು ಸಲ್ಮಾನ್ ಖಾನ್ರ ಬೇಡಿಕೆಗೆ ಹಸಿರು ನಿಶಾನೆ ತೋರಿದೆ. ನಟ ಸಲ್ಮಾನ್ ಖಾನ್ಗೆ ಕೆಲವು ದಿನಗಳ ಹಿಂದೆಯಿಂದ ಬಿಷ್ಣೋಯ್ ಮತ್ತು ಗ್ಯಾಂಗ್ನಿಂದ ಬೆದರಿಕೆ ಪತ್ರಗಳು ಬಂದಿರುವ ಹಿನ್ನೆಲೆಯಲ್ಲಿ ಸ್ವಯಂ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಅವರಿಗೆ ಶಸ್ತ್ರಾಸ್ತ್ರ ಪರವಾನಗಿಯನ್ನು ನೀಡಲಾಗಿದೆ ಎಂದು ಮುಂಬೈ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜುಲೈನಲ್ಲಿ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ರನ್ನು ಸಲ್ಮಾನ್ ಖಾನ್ ಭೇಟಿಯಾದ ನಂತರ ಪರವಾನಗಿ ಮುದ್ರಿಸಲಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ಯೊಬ್ಬರು ಖಚಿತಪಡಿಸಿದ್ದಾರೆ.ಜೀವ ಬೆದರಿಕೆಗಳು ಬರುತ್ತಿದ್ದಂತೆಯೇ ನಟ ಸಲ್ಮಾನ್ ಖಾನ್ ಬಂದೂಕು ಪರವಾನಗಿ ಬೇಕೆಂದು ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಸಲ್ಮಾನ್ ಖಾನ್ರಿಗೆ ಬೆದರಿಕೆ ಬಂದ ಕೂಡಲೇ ತಮ್ಮ ವಾಹನವನ್ನು ಬುಲೆಟ್ ಪ್ರೂಫ್ ಲ್ಯಾಂಡ್ ಕ್ರೂಸರ್ ಆಗಿ ಅಪ್ಗ್ರೇಡ್ ಮಾಡಿದ್ದಾರೆಂದು ವರದಿಯಾಗಿದೆ. ವಾಹನಗಳಿಗೆ ರಕ್ಷಾ ಕವಚಗಳು ಹಾಗೂ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಕೆ ಮಾಡಲಾಗಿದೆ.
ಕಳೆದ ತಿಂಗಳು ಇದೇ ವಿಚಾರವಾಗಿ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್, ಗನ್ ಲೈಸೆನ್ಸ್ ಪಡೆಯುತ್ತಿರುವುದಾಗಿ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಬಿಷ್ಣೋಯ್ ಮತ್ತವರ ಗ್ಯಾಂಗ್ನಿಂದ ಬೆದರಿಕೆ ಪತ್ರಗಳನ್ನು ಸ್ವೀಕರಿಸಿದ ಬಳಿಕ ಮುಂಬೈ ಸಿಪಿ ಕಚೇರಿಯಲ್ಲಿ ಸ್ವಯಂ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ : Former CM HD Kumaraswamy : ಪ್ರವೀಣ್, ಮಸೂದ್ ನಿವಾಸಕ್ಕೆ ಹೆಚ್ಡಿಕೆ ಭೇಟಿ : ತಲಾ 5 ಲಕ್ಷ ರೂ. ಪರಿಹಾರ
ಇದನ್ನೂ ಓದಿ : Commercial LPG cylinder :ವಾಣಿಜ್ಯ ಸಿಲಿಂಡರ್ಗಳ ದರ 36 ರೂಪಾಯಿ ಇಳಿಕೆ
Salman Khan granted gun license for self-protection after receiving death threat