WhatsApp : ವಾಟ್ಸ್‌ಅಪ್‌ನಲ್ಲಿ ಇನ್ನುಮುಂದೆ ಗ್ರೂಪ್‌ ಅಡ್ಮಿನ್‌ಗಳು ಗ್ರೂಪ್‌ನ ಯಾವ ಮೆಸ್ಸೇಜ್‌ ಆದರೂ ಡಿಲೀಟ್‌ ಮಾಡಬಹುದು!

ಮೆಟಾ (Meta) ಮಾಲೀಕತ್ವದ ಇನ್‌ಸ್ಟ್ಂಟ್‌ ಮೆಸ್ಸೇಜಿಂಗ್‌ ಆಪ್‌ ಆದ ವಾಟ್ಸ್‌ಅಪ್‌ (WhatsApp) ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬಂದಿದೆ. ವಾಟ್ಸ್‌ಅಪ್‌ ತನ್ನ ಬಳಕೆದಾರರಿಗಾಗಿ ಇತ್ತಿಚೆಗಷ್ಟೇ ಮೆಸ್ಸೇಜ್‌ ಡಿಲೀಟ್‌ ಮಾಡುವ ಸಮಯದ ಮಿತಿಯನ್ನು ನವೀಕರಿಸಿತ್ತು. ಇದರ ಜೊತೆಗೆ ಸುರಕ್ಷತೆಯನ್ನು ಒದಗಿಸಿತ್ತು. ವಾಟ್ಸ್ಅಪ್‌ ಗ್ರೂಪ್‌ಗಳ ಅಡ್ಮಿನ್‌ಗಳಿಗಾಗಿ (WhatsApp group admins) ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. WhatsApp ಟ್ರ್ಯಾಕರ್ WABetaInfo ಪ್ರಕಾರ, ಇನ್ನು ಮುಂದೆ ಗ್ರೂಪ್‌ ಅಡ್ಮಿನ್‌ ಯಾವುದೇ ಸಂದೇಶವನ್ನು ಅಳಿಸಲು(ಡಿಲೀಟ್‌) ಅನುಮತಿ ನೀಡುತ್ತದೆ.

ವರದಿಯ ಪ್ರಕಾರ, ಈ ವೈಶಿಷ್ಟ್ಯವನ್ನು ಗ್ರೂಪ್ ಅಡ್ಮಿನ್‌ಗಳು ಉತ್ತಮ ರೀತಿಯಲ್ಲಿ ಮಾಡರೇಟ್ ಮಾಡುವ ಸಲುವಾಗಿ ಹೊಂದಿಸಲಾಗಿದೆ. ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಪ್ರಪಂಚದಾದ್ಯಂತದ ಹೊರತರುತ್ತಿರುವಂತೆ ತೋರುತ್ತಿದೆ. ಅಡ್ಮಿನ್‌ಗಳು ಸಂದೇಶವನ್ನು ಅಳಿಸಿದಾಗ (ಡಿಲೀಟ್‌) ಮಾಡಿದಾಗ ಗುಂಪಿನ ಎಲ್ಲಾ ಸದಸ್ಯರಿಗೆ ತೋರಿಸುತ್ತದೆ. WhatsApp ಇನ್ನೂ ಅಧಿಕೃತವಾಗಿ ವೈಶಿಷ್ಟ್ಯವನ್ನು ಘೋಷಿಸದಿದ್ದರೂ, WABetaInfo ವರದಿಯು ಈಗಾಗಲೇ ಬೀಟಾ ಪರೀಕ್ಷಕರಿಗೆ ಪರಿಚಯಿಸಿರಬಹುದು ಎಂದು ಹೇಳುತ್ತಿದೆ.

ನೀವು ಈ ವೈಶಿಷ್ಟ್ಯವನ್ನು ಉಪಯೋಗಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು, ನೀವು ಭಾಗವಾಗಿರುವ ಯಾವುದೇ ಗುಂಪಿಗೆ ಹೋಗಿ ಮತ್ತು ಅಲ್ಲಿ ಯಾವುದೇ ಸಂದೇಶವನ್ನು ದೀರ್ಘವಾಗಿ ಒತ್ತಿರಿ. ಸಂದೇಶವನ್ನು ಅಳಿಸುವ ಆಯ್ಕೆ ಇದ್ದರೆ, ನೀವು ವೈಶಿಷ್ಟ್ಯವನ್ನು ಪಡೆದುಕೊಂಡಿದ್ದೀರಿ ಎಂದರ್ಥ. ಇಲ್ಲದಿದ್ದರೆ, ವೈಶಿಷ್ಟ್ಯವನ್ನು ಶೀಘ್ರದಲ್ಲೇ ಹೊರತರಲಾಗುವುದು. ವಾಟ್ಸ್‌ಅಪ್‌ ಮೊದಲು ಬೆರಳೆಣಿಕೆಯ ಬಳಕೆದಾರರೊಂದಿಗೆ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ.

WABetaInfo ವರದಿಯು ವೈಶಿಷ್ಟ್ಯದ ಸ್ಕ್ರೀನ್‌ಶಾಟ್‌ಗಳನ್ನು ಸಹ ತೋರಿಸಿದೆ. ಹೊಸ “ಸಂದೇಶ ಅಳಿಸು” ಆಯ್ಕೆ ಇದೆ, ಅದು ಪಾಪ್-ಅಪ್ ಅನ್ನು ತರುತ್ತದೆ, ಅದು “ನಿರ್ವಾಹಕರಾಗಿ, ನೀವು ಈ ಚಾಟ್‌ನಲ್ಲಿರುವ ಪ್ರತಿಯೊಬ್ಬರಿಗೂ (ಗುಂಪಿನ) ಸಂದೇಶವನ್ನು ಅಳಿಸುತ್ತಿರುವಿರಿ. ನೀವು ಸಂದೇಶವನ್ನು ಅಳಿಸಿದ್ದೀರಿ ಎಂದು ಅವರು ನೋಡುತ್ತಾರೆ.” ಒಮ್ಮೆ ನೀವು ಮುಂದೆ ಹೋಗಿ ಸಂದೇಶವನ್ನು ಅಳಿಸಿದರೆ, ಇದು ಪ್ರಸ್ತುತ WhatsApp ನಲ್ಲಿ ಅಳಿಸಲಾದ ಸಂದೇಶಗಳಂತೆಯೇ ತೋರಿಸುತ್ತದೆ.

ಇದನ್ನೂ ಓದಿ : CWG 2022 : ಕಾಮನ್‌ವೆಲ್ತ್‌ ಗೇಮ್ಸ್‌ 2022 : ಭಾರತಕ್ಕೆ ಮೂರನೇ ಚಿನ್ನ ತಂದು ಕೊಟ್ಟ ಅಚಿಂತಾ ಶೆಯುಲಿ!!

ಇದನ್ನೂ ಓದಿ: Pebble Smartwatch : ಓರಿಯನ್ ಮತ್ತು ಸ್ಪೆಕ್ಟ್ರಾ ಎಂಬ ಎರಡು ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದ ಪೆಬ್ಬಲ್‌!

( WhatsApp group admins can delete anyone’s message in a group)

Comments are closed.