Commercial LPG cylinder :ವಾಣಿಜ್ಯ ಸಿಲಿಂಡರ್​ಗಳ ದರ 36 ರೂಪಾಯಿ ಇಳಿಕೆ

Commercial LPG cylinder : ದಿನ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವುದು ಶ್ರೀ ಸಾಮಾನ್ಯನಿಗೆ ಇನ್ನಿಲ್ಲದ ಸಮಸ್ಯೆಯನ್ನು ತಂದೊಡ್ಡಿದೆ. ಪೆಟ್ರೋಲ್​, ಡೀಸೆಲ್​, ಆಹಾರ ಪದಾರ್ಥಗಳು, ಹಾಲಿನ ಉತ್ಪನ್ನಗಳು ಹೀಗೆ ಪ್ರತಿಯೊಂದು ಪದಾರ್ಥಗಳ ಬೆಲೆಯಲ್ಲಿಯೂ ಏರಿಕೆ ಕಾಣುತ್ತಿದೆ. ಈ ಎಲ್ಲಾ ಸಮಸ್ಯೆಗಳಿಂದ ಮಧ್ಯಮ ವರ್ಗದ ಹಾಗೂ ಬಡ ಜನತೆ ತಲೆ ಮೈ ಮೇಲೆ ಕೈ ಹೊತ್ತು ಕುಳಿತಿರುವ ನಡುವೆಯೇ ಇದೀಗ 19 ಕೆಜಿ ತೂಕದ ಎಲ್​ಪಿಜಿ ಸಿಲಿಂಡರ್​ಗಳ ದರವು ಇಂದಿನಿಂದ ಇಳಿಕೆ ಕಂಡಿದ್ದು ಶ್ರೀ ಸಾಮಾನ್ಯನಿಗೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ. ಪ್ರತಿ ಯೂನಿಟ್​​ನ ಬೆಲೆಯನ್ನು 36 ರೂಪಾಯಿಗಳಿಗೆ ಕಡಿತಗೊಳಿಸಲಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್​ಗಳ ದರದಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಇರುವುದಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್​​ನ ದರವು ಪ್ರತಿ ಯೂನಿಟ್​ಗೆ ಪ್ರಸ್ತುತ 1,975.5 ರೂಪಾಯಿ ಆಗಿದೆ . ಇದಕ್ಕೂ ಮುನ್ನ ಜುಲೈ ಆರರಂದು 19 ಕಿಲೋ ಗ್ರಾಮ್​ ತೂಕದ ವಾಣಿಜ್ಯ ಸಿಲಿಂಡರ್​ ದರವನ್ನು ಪ್ರತಿ ಯೂನಿಟ್​​ಗೆ 8.5 ರೂಪಾಯಿ ಕಡಿಮೆ ಮಾಡಲಾಗಿತ್ತು. ಇದಾದ ಬಳಿಕ ಇದೀಗ ಮತ್ತೆ ವಾಣಿಜ್ಯ ಸಿಲಿಂಡರ್​ಗಳ ದರದಲ್ಲಿ ಇಳಿಕೆ ಮಾಡಲಾಗಿದೆ. ಅಂಕಿ ಅಂಶಗಳ ಪ್ರಕಾರ ದೇಶದ ಪ್ರಮುಖ ನಗರಗಳಾದ ದೆಹಲಿ, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈಗಳಲ್ಲಿ ಎಲ್​ಪಿಜಿ ಸಿಲಿಂಡರ್​ ದರಗಳು ಕ್ರಮವಾಗಿ 2,012.50, ರೂ 2,132.00, ರೂ 1,972.50, ಮತ್ತು ರೂ 2,177.50 ಆಗಿದೆ.


ಜುಲೈ ಆರರಂದು 14.2 ಕೆಜಿ ತೂಕದ ಗೃಹೋಪಯೋಗಿ ಸಿಲಿಂಡರ್​ಗಳ ಬೆಲೆಯನ್ನು ಪ್ರತಿ ಯೂನಿಟ್​ಗೆ 50 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಕ್ಕೂ ಹಿಂದೆ ಮೇ 19ರಂದು ದೇಶಿ ಸಿಲಿಂಡರ್​ಗಳ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಸ್ತುತ ಗೃಹೋಪಯೋಗಿ ಸಿಲಿಂಡರ್​ಗಳ ದರವನ್ನು ಪ್ರತಿ ಯೂನಿಟ್​​ಗೆ 1053 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಇದು ಕ್ರಮವಾಗಿ ರೂ 1,079, ರೂ 1,052.5 ಮತ್ತು ರೂ 1,068.5 ನಲ್ಲಿ ಮಾರಾಟವಾಗುತ್ತದೆ .

ಇದನ್ನು ಓದಿ : assault on kannada actor chandan kumar : ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಮೇಲೆ ಹಲ್ಲೆ: ತೆಲುಗಿನ ಶೂಟಿಂಗ್ ವೇಳೆ ಘಟನೆ

ಇದನ್ನೂ ಓದಿ : Former CM HD Kumaraswamy : ಪ್ರವೀಣ್​, ಮಸೂದ್​ ನಿವಾಸಕ್ಕೆ ಹೆಚ್​​ಡಿಕೆ ಭೇಟಿ : ತಲಾ 5 ಲಕ್ಷ ರೂ. ಪರಿಹಾರ

Commercial LPG cylinder prices slashed by Rs 36, domestic unchanged

Comments are closed.