ಕಳೆದ ಒಂದು ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದು ನಟಿ ಸಮಂತಾ ಡಿವೋರ್ಸ್ ಸುದ್ದಿ.ಮೊದಲು ಡಿವೋರ್ಸ್ ಆಗುತ್ತೆ ಅನ್ನೋ ಕಾರಣಕ್ಕೆ ಸುದ್ದಿಯಾದ ನಟಿ, ವಿಚ್ಛೇಧನ ಘೋಷಣೆ ಬಳಿಕ ಡಿವೋರ್ಸ್ ನ ಕಾರಣಗಳಿಗಾಗಿ ಚರ್ಚೆಗೆ ಗ್ರಾಸವಾಗಿದ್ದರು. ಆದರೆ ಈಗ ಮತ್ತೊಮ್ಮೆ ಸಮಂತಾ ( Samantha Ruth Prabhu Pushpa ) ತಮ್ಮ ಹಾಟ್ ಪೋಟೋಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ.
ನಾಗಚೈತನ್ಯರಿಂದ ವಿಚ್ಛೇಧನ ಪಡೆಯುತ್ತಿದ್ದಂತೆ ಸಮಂತಾ ಸಿನಿಮಾ ಕೆರಿಯರ್ ನಲ್ಲಿ ತುಂಬಾ ಸಿರಿಯಸ್ಸಾಗಿ ತೊಡಗಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಸಮಂತಾ ತೆಲುಗಿನ ಪುಷ್ಪ ಸಿನಿಮಾದಲ್ಲಿ ಮೈ ಚಳಿ ಬಿಟ್ಟು ಸೊಂಟ ಬಳುಕಿಸುವ ಮೂಲಕ ಸದ್ದು ಮಾಡಿದ್ದಾರೆ. ಡಿಸೆಂಬರ್ ೧೭ ರಂದು ರಿಲೀಸ್ ಆಗಲಿರೋ ಅಲ್ಲು ಅರ್ಜುನ್ ಹಾಗೂ ರಶ್ಮಿಕಾಮಂದಣ್ಣ ನಟನೆಯ ಈ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಐಟಂ ಸಾಂಗ್ ವೊಂದಕ್ಕೆ ಸಮಂತಾ ಹೆಜ್ಜೆ ಹಾಕಿದ್ದಾರೆ.

ಪಕ್ಕಾ ಟಪೋರಿ ಹಾಡೊಂದಕ್ಕೆ ಸಮಂತಾ ಹಾಟ್ ಡ್ರೆಸ್ ನಲ್ಲಿ ಹೆಜ್ಜೆ ಹಾಕಿರೋ ಪೋಟೋವನ್ನು ಪುಷ್ಪ ಸಿನಿತಂಡ ಹಂಚಿಕೊಂಡಿದೆ. ಮಾತ್ರವಲ್ಲ ಸ್ಪೆಶಲ್ ಡಿಪಿ ಡಿಸೈನ್ ಎಂದು ಟ್ಯಾಗ್ ಲೈನ್ ನೀಡಿದೆ. ಅಕ್ಕಿನೇನಿ ಕುಟುಂಬದಿಂದ ವಿಚ್ಛೇಧನದ ಬಳಿಕ ಹೊರಬಂದ ಸಮಂತಾ ಒಪ್ಪಿಕೊಂಡಿರೋ ಮೊದಲ ಬೋಲ್ಡ್ ಹಾಗೂ ಐಟಂ ಸಾಂಗ್ ಇದಾಗಿರೋದರಿಂದ ಈ ಐಟಂ ಸಾಂಗ್ ಸಖತ್ ಕುತೂಹಲಮೂಡಿಸಿದೆ.

ಸಮಂತಾ ಈ ಒಂದು ಹಾಡಿಗೆ ಬರೋಬ್ಬರಿ 1.5 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ಸಮಂತಾ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯ್ತಿರೋ ಈ ಹಾಡಿನ ಲಿರಿಕಲ್ ವಿಡಿಯೋ ಡಿಸೆಂಬರ್ 10 ರಂದು ರಿಲೀಸ್ ಆಗಲಿದೆ. ಆದರೆ ಇದು ಕೇವಲ ಲಿರಿಕಲ್ ಅಡಿಯೋ ಸಾಂಗ್. ಸಖತ್ ಕುತೂಹಲ ಮೂಡಿಸಿರೋ ಸಮಂತಾ ವಿಡಿಯೋ ಸಾಂಗ್ ನೋಡೋಕೆ ಅಭಿಮಾನಿಗಳು ಡಿಸೆಂಬರ್ 10 ರ ತನಕ ಕಾಯಲೇಬೇಕು.
This winter is going to get heated up with @Samanthaprabhu2's moves 🔥🔥
— Pushpa (@PushpaMovie) December 8, 2021
'Sizzling Song of The Year' on 10th DEC 💥💥#PushpaTheRise#PushpaTheRiseOnDec17 @alluarjun @iamRashmika @aryasukku @ThisIsDSP @resulp @adityamusic @MythriOfficial pic.twitter.com/KL0d6L10ya
ಸಮಂತಾ ಇದುವರೆಗೂ ಪಾತ್ರದ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿದ್ದರು. ಆದರೆ ಸಮಂತಾ ವಿಚ್ಛೇಧನದ ಬಳಿಕ ಹಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲೆಡೆಯ ಅವಕಾಶವನ್ನು ಬಾಚಿಕೊಳ್ಳುತ್ತಿದ್ದು, ಸಖತ್ ಬೋಲ್ಡ್ ಪಾತ್ರಗಳಿಗೂ ಜೈ ಎಂದಿದ್ದಾರೆ. ಅಲ್ಲೂ ಅರ್ಜುನ್ ಕೆರಿಯರ್ ನ ಬಹುನೀರಿಕ್ಷಿತ ಚಿತ್ರ ಎನ್ನಿಸಿಕೊಂಡಿರೋ ಪುಷ್ಪ ರಕ್ತಚಂದನದ ಕಳ್ಳಸಾಗಾಣಿಕೆ ಕತೆಯನ್ನು ಒಳಗೊಂಡಿದ್ದು ತೆಲುಗಿನ ಗ್ರಾಮೀಣ ಭಾಗದ ಹೆಣ್ಣುಮಗಳ ಪಾತ್ರದಲ್ಲಿ ಕನ್ನಡತಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ :ಹಾಟ್ ಡ್ರೆಸ್ ತೊಟ್ಟು ಟ್ರೋಲಿಗರಿಗೆ ಟಾಂಗ್ ಕೊಟ್ಟ ಸಮಂತಾ
ಇದನ್ನೂ ಓದಿ : Samantha Hollywood : ಡಿವೋರ್ಸ್ ಬೆನ್ನಲ್ಲೇ ಸಮಂತಾಗೇ ಖುಲಾಯಿಸಿದ ಅದೃಷ್ಟ: ಹಾಲಿವುಡ್ ಗೆ ಹಾರಿದ ಸುಂದರಿ
(Samantha Ruth Prabhu Pushpa : Samantha’s look from her special dance number revealed)